ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಮಿಲ್ಟನ್‌ ಚಾಂಪಿಯನ್‌

ಅಮೆರಿಕ ಗ್ರ್ಯಾನ್‌ ಪ್ರಿ ಫಾರ್ಮುಲಾ–1
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಆಸ್ಟಿನ್‌: ಅಮೋಘ ಚಾಲ ನಾ ಕೌಶಲ ಮೆರೆದ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಇಲ್ಲಿ ನಡೆದ ಅಮೆರಿಕ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ. ಇದರೊಂದಿಗೆ ನಾಲ್ಕನೇ ಬಾರಿ ವಿಶ್ವ ಚಾಂಪಿಯನ್‌ ಕಿರೀಟ ಮುಡಿಗೇರಿಸಿ ಕೊಳ್ಳುವ ಆಸೆಯನ್ನು ಜೀವಂತ ವಾಗಿಟ್ಟುಕೊಂಡಿದ್ದಾರೆ.

ಭಾನುವಾರ ‘ಪೋಲ್‌ ಪೊಸಿಷನ್‌’ ಪಡೆದು ಮಿಂಚಿದ್ದ ಹಾಲಿ ಚಾಂಪಿಯನ್‌ ಹ್ಯಾಮಿಲ್ಟನ್‌ ಸೋಮವಾರವೂ  ಶರ ವೇಗದಲ್ಲಿ ಮೋಟಾರು ಕಾರು ಚಲಾಯಿ ಸಿದರು. ಅವರಿಗೆ ಮರ್ಸಿಡೀಸ್‌ ತಂಡದ ನಿಕೊ ರೋಸ್‌ಬರ್ಗ್‌ ಅವರಿಂದ ತೀವ್ರ ಪೈಪೋಟಿ ಎದುರಾಯಿತು. ಇದರ ನಡುವೆಯೂ ಹ್ಯಾಮಿಲ್ಟನ್‌ ಮೊದಲಿಗರಾಗಿ ಗುರಿ ಮುಟ್ಟಿದರು.

ಈ ಮೂಲಕ ವೃತ್ತಿ ಜೀವನದ 50ನೇ ಪ್ರಶಸ್ತಿ ಎತ್ತಿ ಹಿಡಿದರು.  ಹ್ಯಾಮಿ ಲ್ಟನ್‌ ಈ ಋತುವಿನಲ್ಲಿ ಗೆದ್ದ ಏಳನೇ ಪ್ರಶಸ್ತಿ ಇದಾಗಿದೆ. ರೋಸ್‌ಬರ್ಗ್‌ ಎರಡನೇ ಸ್ಥಾನ ಗಳಿಸಿದರೆ, ರೆಡ್‌ಬುಲ್‌ ತಂಡದ ಆಸ್ಟ್ರೇಲಿಯಾದ ಚಾಲಕ ಡೇನಿಯಲ್‌ ರಿಕಿಯಾರ್ಡೊ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಪೆರೆಜ್‌ಗೆ ಎಂಟನೇ ಸ್ಥಾನ: ಸಹರಾ ಫೋರ್ಸ್‌ ಇಂಡಿಯಾ ತಂಡದ ಚಾಲಕ ಸರ್ಜಿಯೊ ಪೆರೆಜ್‌ ಎಂಟನೇ ಸ್ಥಾನ ದೊಂದಿಗೆ ಸ್ಪರ್ಧೆ ಕೊನೆಗೊಳಿಸಿ ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿದರು.

ಫೋರ್ಸ್‌ ಇಂಡಿಯಾ ತಂಡದ ಇನ್ನೊಬ್ಬ ಚಾಲಕ ನಿಕೊ ಹುಲ್ಕೆನ್‌ಬರ್ಗ್‌ ಅವರ ಕಾರು ಮೊದಲ ಲ್ಯಾಪ್‌ನ ವೇಳೆ ಅಪಘಾತಕ್ಕೀಡಾಯಿತು. ಹೀಗಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. 11ನೇಯವರಾಗಿ ಸ್ಪರ್ಧೆ ಆರಂಭಿ ಸಿದ್ದ ಪೆರೆಜ್‌ ಶುರುವಿನಿಂದಲೇ ವೇಗವಾಗಿ ಕಾರು ಚಲಾಯಿಸಿ ಮೂರು ಮಂದಿ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT