ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧ್ಯಕ್ಷ ಸ್ಥಾನಕ್ಕೆ ಅನರ್ಹ ಎಂದು ಸಾಬೀತುಪಡಿಸುತ್ತಿರುವ ಟ್ರಂಪ್‌’

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಲಾಸ್‌ ವೇಗಾಸ್‌: ‘ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ತಾನು ಅನರ್ಹ ಎಂಬುದನ್ನು ‘ಪ್ರತಿದಿನವೂ’ ಸಾಬೀತುಪಡಿಸುತ್ತಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಟೀಕಿಸಿದ್ದಾರೆ. ‘ಮುಂದಿನ 16 ದಿನಗಳಲ್ಲಿ ನಾವು ಸಾಧ್ಯವಾದಷ್ಟು ಶ್ರಮವಹಿಸಿ ಕಾರ್ಯ ನಿರ್ವಹಿಸದೇ ಇದ್ದರೆ ಈ ತನಕ ಸಾಧಿಸಿರುವ ಪ್ರಗತಿ ಪ್ರಯೋಜನಕ್ಕೆ ಬಾರದಂತಾಗಬಹುದು.

ಏಕೆಂದರೆ ಪ್ರಸ್ತುತ ನಾನು ನಿರ್ವಹಿಸುತ್ತಿರುವ ಕಾರ್ಯಕ್ಕೆ ಸ್ಪರ್ಧಿಸುತ್ತಿರುವವರಲ್ಲಿ, ತನ್ನನ್ನು ತಾನು ಅನರ್ಹ ಎಂದು ಪ್ರತಿ ರೀತಿಯಲ್ಲಿ ಪ್ರತಿ ದಿನವೂ ತೋರಿಸಿಕೊಳ್ಳುತ್ತಿರುವ ವ್ಯಕ್ತಿಯೂ ಇದ್ದಾನೆ. ಮತ್ತೊಂದೆಡೆ ಸದಾ ಅಧ್ಯಕ್ಷೀಯ ಚುನಾವಣೆಗೆ ಅರ್ಹವಾಗಿರುವ ಹಿಲರಿ ಸ್ಪರ್ಧೆಯಲ್ಲಿದ್ದಾರೆ’ ಎಂದು ಚುನಾವಣಾ ರ್‍ಯಾಲಿಯಲ್ಲಿ ಒಬಾಮ ಹೇಳಿದ್ದಾರೆ.

‘ನವಮಾಧ್ಯಮ ಒಕ್ಕೂಟ’ಕ್ಕೆ ಲಗಾಮು
ವಾಷಿಂಗ್ಟನ್‌ (ಪಿಟಿಐ): ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾದರೆ, ಅಮೆರಿಕದ ‘ನವಮಾಧ್ಯಮ ಒಕ್ಕೂಟದ ಏಕಸ್ವಾಮ್ಯ’ ಮುರಿಯಲಿದ್ದಾರೆ ಎಂದು ಟ್ರಂಪ್‌ ಅವರ ಆರ್ಥಿಕ ಸಲಹೆಗಾರ ಪೀಟರ್‌ ನವಾರೋ ಹೇಳಿದ್ದಾರೆ.

ಮಾಧ್ಯಮಗಳು ವ್ಯಾಪಾರಿ ಮನೋಭಾವದಿಂದ  ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿವೆ.  ಹಿಲರಿ ಕ್ಲಿಂಟನ್‌ ಅವರು ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಗೆಲ್ಲುವಂತೆ ಮಾಧ್ಯಮಗಳು ಸಹಾಯ ಮಾಡುತ್ತಿವೆ’ ಎಂದಿರುವ ನವಾರೋ, ಟ್ರಂಪ್‌ ಈ ವ್ಯವಸ್ಥೆಯನ್ನು ಕೊನೆಗೊಳಿಸಲಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT