ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ವಾರಾಂತ್ಯ ಅಥ್ಲೆಟಿಕ್ಸ್‌ಗೆ ಅರ್ಜಿ ಆಹ್ವಾನ

ಡೆಕ್ಕನ್‌ ಅಥ್ಲೆಟಿಕ್‌
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌’ ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ವತಿಯಲ್ಲಿ 28ನೇ ವಾರ್ಷಿಕ ವಾರಾಂತ್ಯ ಅಥ್ಲೆಟಿಕ್‌ ಕೂಟ ನವೆಂಬರ್‌ 13, 20, 27 ಮತ್ತು ಡಿಸೆಂಬರ್‌ 4ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿದ ಪ್ರತಿ ಯೊಬ್ಬರೂ 13ರಂದು ನಡೆಯುವ ಮೊದಲ ವಾರಾಂತ್ಯ ಕೂಟದ ಸ್ವರ್ಧೆ ಗಳಲ್ಲಿ ಭಾಗವಹಿಸಬಹುದು. ಈ ಕೂಟ ದಲ್ಲಿ ಪಾಲ್ಗೊಂಡವರು ಆ ನಂತರದ ಮೂರು ವಾರಾಂತ್ಯ ಕೂಟಗಳಲ್ಲಿ ಸ್ವರ್ಧಿಸಲು ಅರ್ಹರು. ಎಲ್ಲಾ ನಾಲ್ಕೂ ವಾರಾಂತ್ಯ ಕೂಟಗಳ ಪ್ರತಿ ಸ್ವರ್ಧೆಯಲ್ಲಿ ಸ್ವರ್ಧಿಗಳು ಗಳಿಸಿದ ಪಾಯಿಂಟ್‌ಗಳನ್ನು ಕೂಡಿಸಲಾಗುವುದು.

ಇದರ ಅನ್ವಯ ಪ್ರತಿ ಸ್ವರ್ಧೆಯಲ್ಲಿ  ಮೊದಲ 8 ಸ್ಥಾನ ಗಳನ್ನು ಗಳಿಸುವವರಿಗೆ ಅರ್ಹತಾ ಪತ್ರ ಗಳನ್ನು ನೀಡಲಾಗುವುದು ಮತ್ತು ಮೊದಲ 3 ಸ್ಥಾನಗಳನ್ನು ಪಡೆದವರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ಜತೆಗೆ ಕ್ರಮವಾಗಿ ₹800, ₹500 ಮತ್ತು ₹300 ನಗದು ಬಹುಮಾನ ನೀಡ ಲಾಗುವುದು ಎಂದು ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಲ್ಕೂ ವಾರಾಂತ್ಯ ಕೂಟಗಳಲ್ಲಿ ಅತ್ಯಧಿಕ ಪಾಯಿಂಟ್‌ಗಳನ್ನು ಗಳಿಸುವ ಶಿಕ್ಷಣ ಸಂಸ್ಥೆಗಳ ಬಾಲಕ ಮತ್ತು ಬಾಲಕಿಯರ ವಿಭಾಗಗಳಿಗೆ ತಂಡ ಪ್ರಶಸ್ತಿಗಳನ್ನು ನೀಡಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ. ಬಾಲಕರ  13ವರ್ಷ ಮತ್ತು 16ವರ್ಷ ವಯೋಮಾನದ ಒಳಗಿನ ವಿಭಾಗದಲ್ಲಿ, ಬಾಲಕಿಯರ  12 ವರ್ಷ  ಮತ್ತು 15 ವರ್ಷದೊಳಗಿನ ವಿಭಾಗಗಳಲ್ಲಿ ಸ್ವರ್ಧೆಗಳು ನಡೆಯಲಿವೆ.

ಬೆಂಗಳೂರು ಮಹಾನಗರದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪತ್ರಗಳನ್ನು ಈ ಕೆಳಗಿನ ವಿಳಾಸಕ್ಕೆ ತಲುಪಿಸತಕ್ಕದ್ದು. ಅನಂತರಾಜು, ಸಂಘಟನಾ ಕಾರ್ಯದರ್ಶಿ, ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌, ‘ಪ್ರಗತಿ’ ನಂಬರ್‌ 39/ 137, ಫಸ್ಟ್‌ ‘ಡಿ’ ಕ್ರಾಸ್‌, 6ನೇ ಮೆಯಿನ್‌, ರೆಮ್ಕೊ ಲೇಔಟ್‌, ವಿಜಯನಗರ, ಬೆಂಗಳೂರು– 560040.

ಈ ವಾರಾಂತ್ಯ ಕೂಟಗಳ ಕುರಿತ ಮಾಹಿತಿ ಮತ್ತು ಪ್ರವೇಶಪತ್ರ ಮಾದ ರಿಯ ಕೈಪಿಡಿಯನ್ನು ಶ್ರೀಕಂಠೀರವ ಕ್ರೀಡಾಂಗಣದಲ್ಲಿರುವ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆಯ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಪ್ರವೇಶ ಪತ್ರ ಗಳನ್ನು ತಲುಪಿಸಲು ಕಡೆಯ ದಿನಾಂಕ 2016ರ ನವೆಂಬರ್‌ 4. ಹೆಚ್ಚಿನ ಮಾಹಿ ತಿಗೆ ದೂರವಾಣಿ ಸಂಖ್ಯೆ 22275656 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT