ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕ್ಷೇತ್ರಗಳಲ್ಲೂ ಬಾಷ್‌ ವಹಿವಾಟು

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಂತ್ರಜ್ಞಾನ ಪೂರೈಕೆ ಮತ್ತು ಸೇವಾ ಆಧಾರಿತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜರ್ಮನಿಯ  ಬಾಷ್‌ ಕಂಪೆನಿ ಅದಾಗಲೇ ಹೊಸ ಕ್ಷೇತ್ರಗಳಿಗೆ  ಪ್ರವೇಶಿಸಿದ್ದು ಭವಿಷ್ಯದಲ್ಲಿ ಮತ್ತಷ್ಟು ಕ್ಷೇತ್ರಗಳಿಗೂ ತನ್ನ ವಹಿವಾಟು ವಿಸ್ತರಿಸಲಿದೆ ಎಂದು ಸಂಸ್ಥೆಯ ದೇಶೀಯ ಅಧ್ಯಕ್ಷ ಡಾ. ಸ್ಟೀಫನ್‌ ಬರ್ನ್ಸ್‌ ತಿಳಿಸಿದ್ದಾರೆ.

ಉತ್ಕೃಷ್ಟ ಉತ್ಪನ್ನ ಮತ್ತು ನವೀನ ತಂತ್ರಜ್ಞಾನದಿಂದ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಬಾಷ್‌  ಸಂಸ್ಥೆ, ಹತ್ತು ಹಲವು ಕ್ಷೇತ್ರಗಳಲ್ಲಿ ತೆರೆದುಕೊಂಡಿರುವ ಅಪಾರ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗಣಿಗಾರಿಕೆ, ಇಂಧನ,  ವಿದ್ಯುತ್‌ ಉತ್ಪಾದನೆ, ಕಟ್ಟಡ ನಿರ್ಮಾಣ, ಸಾರಿಗೆ, ಸುಸಜ್ಜಿತ ನಗರ ನಿರ್ಮಾಣ, ಗೃಹೋಪಯೋಗಿ ಸೇರಿದಂತೆ ವಿವಿಧ ವಲಯಗಳಲ್ಲಿ  ಹೊಸ ಹೆಜ್ಜೆ ಮೂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಣಿಗಾರಿಕೆ, ಇಂಧನ, ನಿರ್ಮಾಣ ಕ್ಷೇತ್ರಗಳ ಚಟುವಟಿಕೆ ಗರಿಗೆದರಲಿದ್ದು ಈ ವಲಯದಲ್ಲಿ ಬಾಷ್‌  ಹೊಸ  ಮಾರುಕಟ್ಟೆ ಕಂಡುಕೊಳ್ಳಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಹ್ಯಾನ್ಸ್‌ ಬಂಗರ್ಟ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT