ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರೋಗಿಗೂ ನಗದುರಹಿತ ಸೇವೆ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಶುಶ್ರೂಷಾ ಸೇವೆ ಯಲ್ಲಿ ಮುಂಚೂಣಿಯಲ್ಲಿರುವ ಮೆಡಿ ಅಸಿಸ್ಟ್‌ ಗ್ರೂಪ್‌, ‘ಮೆಡಿಬಡ್ಡಿ ಇನ್ಫಿನಿಟಿ’ ಆನ್‌ಲೈನ್‌ ಜಾಲದ ಮೂಲಕ ಹೊರರೋಗಿಗಳಿಗೂ ನಗದುರಹಿತ ಸೇವೆ ಆರಂಭಿಸಿದೆ. 

ಹೊರ ರೋಗಿಗಳಿಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ದೇಶದ ಮೊದಲ   ನಗದುರಹಿತ ಆನ್‌ಲೈನ್‌ ಸೇವೆ ಇದಾಗಿದೆ ಎಂದು ಮೆಡಿ ಅಸಿಸ್ಟ್‌ ಮುಖ್ಯ ವಾಣಿಜ್ಯ ಅಧಿಕಾರಿ ಪ್ರಶಾಂತ್‌ ಜವೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೆಡಿಬಡ್ಡಿ ಇನ್ಫಿನಿಟಿ ಆನ್‌ಲೈನ್‌ ಜಾಲತಾಣವು ವೈದ್ಯಕೀಯ  ಕ್ಷೇತ್ರಕ್ಕೆ ಸಂಬಂಧಿಸಿದ  ಸಮಗ್ರ ಮಾಹಿತಿ ಒದಗಿಸುವ ಜತೆಗೆ ನಗದುರಹಿತ ಸೇವೆ ನೀಡುತ್ತದೆ. ಹತ್ತು ಸಾವಿರಕ್ಕೂ ಹೆಚ್ಚು ಆಸ್ಪತ್ರೆ, ವೈದ್ಯಕೀಯ ಕೇಂದ್ರ, ಔಷಧ ಅಂಗಡಿ ಹಾಗೂ ವೈದ್ಯರ ಮಾಹಿತಿಯನ್ನು ಮೆಡಿ ಅಸಿಸ್ಟ್‌ ತನ್ನ ಪಟ್ಟಿಯಲ್ಲಿ ಹೊಂದಿದ್ದು ಒಂದೇ ಸೂರಿನಡಿ ಕೈಗೆಟುಕುವ ದರದಲ್ಲಿ ಈ ಎಲ್ಲ ಸೇವೆಗಳನ್ನು ಒದಗಿಸಲಿದೆ’ ಎಂದರು.

‘ಸದ್ಯ ಬೆಂಗಳೂರು ಸೇರಿದಂತೆ  ದೇಶದ 45 ಪ್ರಮುಖ ನಗರಗಳಲ್ಲಿ   ಮಾತ್ರ ಈ ಸೇವೆ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ಸೇವೆ ವಿಸ್ತರಿಸುವ ಯೋಚನೆ ಇದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸತೀಶ್‌ ಗಿಡುಗು ಅವರು ಹೇಳಿದರು.

‘ಬಹುತೇಕ ವಿಮಾ ಕಂಪೆನಿಗಳು ಒಳರೋಗಿಗಳಿಗೆ ಮಾತ್ರ ಸೇವೆ ನೀಡುತ್ತಿವೆ. ಹೊರರೋಗಿಗಳ ವೈದ್ಯಕೀಯ ವೆಚ್ಚ ಭರಿಸುವ ದೇಶದ ಮೊದಲ ಸಂಸ್ಥೆ ತಮ್ಮದಾಗಿದೆ’ ಎಂದರು. ಮಾಹಿತಿಗೆ www.mahs.in.  ಜಾಲತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT