ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಡದಲ್ಲಿ ಕೊತ್ತಂಬರಿ

ಎಣಿಕೆ ಗಳಿಕೆ -26
Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

*ಕೊತ್ತಂಬರಿಗೆ ವಿಶಾಲವಾದ ಜಾಗದ ಅವಶ್ಯಕತೆ ಇದೆ. ಆದ್ದರಿಂದ ಕುಂಡವು ಕನಿಷ್ಠ 18 ಇಂಚು (45.7ಸೆಂ.ಮೀ) ಅಗಲ ಹಾಗೂ 8–10 ಇಂಚು (20.3–25.4ಸೆಂ.ಮೀ) ಆಳವಿರಲಿ.

*ಹೀಗೆ ಸಿದ್ಧಪಡಿಸಿಕೊಂಡ ಕುಂಡದಲ್ಲಿ ಸಮಾನವಾಗಿ ಬೀಜಗಳನ್ನು ಹರಡಿ. ಅದರ ಮೇಲೆ ಕಾಲು ಇಂಚಿನಷ್ಟು (0.6ಸೆಂ.ಮೀ) ಮಣ್ಣನ್ನು ಹರಡಿ.

*ನೀರನ್ನುಸುಲಭದಲ್ಲಿ ಹೀರಿಕೊಳ್ಳುವ ಮಣ್ಣನ್ನು ಅದರಲ್ಲಿ ಹಾಕಿ. ಅದರ ಜೊತೆಗೆ ಸ್ವಲ್ಪ ಸಾವಯವ ಗೊಬ್ಬರ ಬೇಕಿದ್ದರೆ ಹಾಕಬಹುದು. ಮಣ್ಣು ಹೀರಿಕೊಳ್ಳುವಷ್ಟು ನೀರನ್ನು ಅದರ ಮೇಲೆ ಚಿಮುಕಿಸಿ. ತುಂಬಾ ನೀರು ಹಾಕಬೇಡಿ.

*ಇದು 4 ರಿಂದ 6 ಇಂಚಿನಷ್ಟು (10.2–15.2 ಸೆಂ.ಮೀ) ಉದ್ದ ಬೆಳೆದಾಗ ಅದು ಕೊಯ್ಲಿಗೆ ಸಿದ್ಧ ಎಂದು ಅರ್ಥ. ವಾರಕ್ಕೊಮ್ಮೆ 2/3ನೇ ಭಾಗದಷ್ಟು ಎಲೆಗಳನ್ನು ಕೊಯ್ಯಬಹುದು. ಹೀಗೆ ಮಾಡಿದರೆ ಗಿಡ ಚೆನ್ನಾಗಿ ಬೆಳೆಯುತ್ತದೆ.

*ಮೊಳಕೆಯೊಡೆದ ಸಸಿಗಳ ಮೇಲೆ ಸ್ಪ್ರೇ ಬಾಟಲಿಯಿಂದ ನೀರು ಚಿಮುಕಿಸಿ. ನೇರವಾಗಿ ನೀರು ಹಾಕಿದರೆ ಅದರಿಂದ ಹಾನಿಯಾಗಬಹುದು.

*ಕೊತ್ತಂಬರಿ ಚೆನ್ನಾಗಿ ಬೆಳೆಯಲು ಬಿಸಿಲಿನ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಬಿಸಿಲು ಚೆನ್ನಾಗಿ ಬೀಳುವ ಕಡೆ ಇದನ್ನು ಇಡಿ. ಹೀಗೆ ಮಾಡಿದರೆ ಬೀಜವು ಮೊಳಕೆಯೊಡೆಯಲು 7–10 ದಿನ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT