ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಭೋಜನದ ಜೊತೆ ರಸಂ ಕ್ಯೂಬ್

ರಸಾಸ್ವಾದ
Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಯ್ಯಾಸ್ ರೆಸ್ಟೊರೆಂಟ್ ರಾಜ್ಯದ ವಿವಿಧ ಭಾಗಗಳ ಖಾದ್ಯ ಸವಿಯುವ ಅವಕಾಶ ಕಲ್ಪಿಸಿದೆ. ಈ ಮೊದಲು ಉಡುಪಿ ಭಾಗದ ಊಟವನ್ನು ಮಾತ್ರ ಉಣಬಡಿಸುತ್ತಿದ್ದ ಮಯ್ಯಾಸ್‌ನಲ್ಲಿ ಇದೀಗ ಉತ್ತರ ಕರ್ನಾಟಕ, ಮಂಗಳೂರು, ಧಾರವಾಡ, ಹಳೇ ಮೈಸೂರು ಭಾಗದ ಮುಖ್ಯ ಖಾದ್ಯಗಳನ್ನು ಸವಿಯುವ ಅವಕಾಶವಿದೆ.

ಮುದ್ದೆ, ಸಾರು, ಜೋಳದ ರೊಟ್ಟಿ, ಶೇಂಗಾ ಚಟ್ನಿ, ಗುರೆಳ್ಳು, ಬೆಣ್ಣೆ, ಮಂಗಳೂರು ಬಜ್ಜಿ, ಖಾರ ಕಡುಬು, ಜೀರಾ ರೈಸ್, ಸಿಹಿ ತಿನಿಸಿನಲ್ಲಿ ಮಂಗಳೂರು ಬನ್ಸ್, ಕರದಂಟು, ಧಾರವಾಡ ಪೇಡ, ಹಯಗ್ರೀವ, ಸಿಹಿ ಕಡುಬು, ಅನ್ನದ ಕೇಸರಿಭಾತ್, ಕುಂದಾ, ಬಾದಾಮಿ ಹಲ್ವಾ, ಬೇಸನ್ ಲಡ್ಡು, ಅಂಟಿನ ಉಂಡೆ, ಹಣ್ಣು ಮಿಶ್ರಣದ ಐಸ್ ಕ್ರೀಂ, ಬೀಡ, ಕಡ್ಲೆಬೇಳೆ– ಸಕ್ಕರೆ ಹಾಕಿ ಮಾಡಿದ ಮೃದುವಾದ ಹೋಳಿಗೆ ಆಹಾರೋತ್ಸವದ ವಿಶೇಷ.

ಊಟ ಮಾಡಿದ ಗ್ರಾಹಕರಿಗೆ ಎಕ್ಸ್‌ಪ್ರೆಸ್‌ ರಸಂ ಕ್ಯೂಬ್‌ನ ಕೊಡುಗೆ ಇದೆ. ಮಧ್ಯಾಹ್ನ 12ರಿಂದ 3 ಹಾಗೂ ಸಂಜೆ 7ರಿಂದ 9ರವರೆಗೆ ಕಂಸಾಳೆ ಪದ, ಡೊಳ್ಳುಕುಣಿತ, ನಂದಿಧ್ವಜ ಕುಣಿತಗಳ ಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳಿಗಾಗಿ ‘ಐ ಲವ್ ಮಯ್ಯಾಸ್’ ವಿಷಯದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳು ಬಿಡಿಸಿದ ಚಿತ್ರಗಳನ್ನು ರೆಸ್ಟೊರೆಂಟ್ ಒಳಗೆ ಒಂದು ವಾರ ಪ್ರದರ್ಶನಕ್ಕಿಡಲಾಗುತ್ತದೆ.

ಜಯನಗರ, ಮಲ್ಲೇಶ್ವರ, ವಿ.ವಿ.ಪುರಂ, ಪದ್ಮನಾಭನಗರ ಹಾಗೂ ಜೆ.ಪಿ.ನಗರದ ಶಾಖೆಗಳಲ್ಲಿ ಆಹಾರೋತ್ಸವ ನಡೆಯುತ್ತಿದೆ. ಒಂದು ಊಟಕ್ಕೆ ₹229.
ಊಟ ಮಾಡಿದ ಗ್ರಾಹಕರಿಗೆ ಎಕ್ಸ್‌ಪ್ರೆಸ್‌ ರಸಂ ಕ್ಯೂಬ್‌ನ ಕೊಡುಗೆ ಇದೆ. ಮಾಹಿತಿಗೆ ಮೊ– 96324 11352.

ಮಯ್ಯ ಕರ್ನಾಟಕ ಫುಡ್ ಹಬ್ಬ
ಸ್ಥಳ– ಮಯ್ಯ ರೆಸ್ಟೊರೆಂಟ್, 2ನೇ ಮಹಡಿ, 4ನೇ ಬ್ಲಾಕ್, ಜಯನಗರ, ಬೆಳಿಗ್ಗೆ 11.30. ನ.1ರಿಂದ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT