ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ತಯಾರಿಸಿ ವಿಶಿಷ್ಟ ಖಾದ್ಯ

Last Updated 3 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಚಾಕೊಲೇಟ್ ಖೀರು
ಬೇಕಾಗುವ ವಸ್ತುಗಳು

ಅರ್ಧ ಲೀಟರ್ ಹಾಲು, ಎರಡು ಚಮಚ ಸಣ್ಣಗೆ ತುಂಡು ಮಾಡಿದ ಡಾರ್ಕ್ ಚಾಕೊಲೇಟ್, 4–5 ಚಮಚ ಸಕ್ಕರೆ, ಕಾಲು ಕಪ್ ಬೇಯಿಸಿದ ಬೆಳ್ತಿಗೆ ಅನ್ನ, 8 ತುಪ್ಪದಲ್ಲಿ ಹುರಿದ ಗೋಡಂಬಿ.

ಮಾಡುವ ವಿಧಾನ
ಒಲೆಯ ಮೇಲೆ ಪಾತ್ರೆಯಿಟ್ಟು ಹಾಲು ಹಾಕಿ ಕುದಿಸಿ. ನಂತರ ಸಕ್ಕರೆ ಹಾಕಿ ತೊಳೆಸಿ. ಸಣ್ಣಗೆ ತುಂಡು ಮಾಡಿದ ಚಾಕೊಲೇಟ್ ಹಾಕಿ. ಚಾಕೊಲೇಟ್ ಕರಗಿದ 3 ನಿಮಿಷದ ನಂತರ ಬೇಯಿಸಿದ ಬೆಳ್ತಿಗೆ ಅನ್ನ ಹಾಕಿ ತೊಳೆಸಿ. ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ ಒಲೆಯಿಂದ ಕೆಳಗಿಳಿಸಿ. ಈಗ ಸುವಾಸನೆಭರಿತ, ರುಚಿಯಾದ ಚಾಕೋಲೆಟ್ ಖೀರು ಸವಿಯಲು ಸಿದ್ಧ.

ಸೇಬಿನ ಜಿಲೇಬಿ
ಬೇಕಾಗುವ ವಸ್ತುಗಳು

1 ಕಪ್ ಮೈದಾ ಹಿಟ್ಟು, 1 ಕಪ್ ಸಕ್ಕರೆ, ಅರ್ಧ ಕಪ್ ಮೊಸರು, 1 ಚಮಚ ಅಕ್ಕಿಹಿಟ್ಟು, ಚಿಟಿಕೆ ಸಿಟ್ರಿಕ್ ಆಸಿಡ್, ಉರುಟಾಗಿ ತೆಳ್ಳಗೆ ತುಂಡು ಮಾಡಿದ ಸೇಬು ಅರ್ಧ ಕಪ್, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ
ಮೈದಾ ಹಿಟ್ಟು, ಮೊಸರು, ಸಿಟ್ರಿಕ್ ಆಸಿಡ್, ಸ್ವಲ್ಪ ನೀರು, ಅಕ್ಕಿ ಹಿಟ್ಟು ಸೇರಿಸಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಮಿಕ್ಸಿಗೆ ಹಾಕಿ ಒಂದು ಸುತ್ತು ತಿರುಗಿಸಿ. 24 ಗಂಟೆ ಇಡಿ. ನಂತರ ಸಕ್ಕರೆ, ಒಂದೂವರೆ ಕಪ್ ನೀರು ಸೇರಿಸಿ ಒಲೆಯ ಮೇಲಿಟ್ಟು ಕುದಿಸಿ. ನೂಲು ಪಾಕವಾದಾಗ ಕೆಳಗಿಳಿಸಿ. ಚಿಟಕಿ ಸಿಟ್ರಿಕ್ ಆಸಿಡ್ ಹಾಕಿ. ತುಂಡು ಮಾಡಿದ ಸೇಬಿನ ತುಂಡನ್ನು ಮೈದಾ, ಮೊಸರು, ಅಕ್ಕಿಹಿಟ್ಟು, ಬೆರೆಸಿದ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಕರಿಯಿರಿ. ನಂತರ ಸಕ್ಕರೆ ಪಾಕದಲ್ಲಿ 1 ನಿಮಿಷ ಇಟ್ಟು, ಆಮೇಲೆ ಸವಿಯಿರಿ. ಈ ಹೊಸ ರುಚಿಯ ಸೇಬಿನ ಜಿಲೇಬಿ ತಿನ್ನಲು ತುಂಬಾ ಸೊಗಸಾಗಿರುತ್ತದೆ.

ಸೀಬೆಹಣ್ಣು ಹಲ್ವಾ
ಬೇಕಾಗುವ ವಸ್ತುಗಳು

3 ಸೀಬೆಹಣ್ಣು, ಅರ್ಧ ಕಪ್ ತುಪ್ಪ, 1 ಕಪ್ ಬೆಲ್ಲ, 8 ಗೋಡಂಬಿ, 8 ಒಣದ್ರಾಕ್ಷಿ.

ಮಾಡುವ ವಿಧಾನ
ಸಣ್ಣಗೆ ತುಂಡು ಮಾಡಿದ ಸೀಬೆಹಣ್ಣನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಬೌಲ್‌ಗೆ ಹಾಕಿ. ಬಾಣಲೆ ಒಲೆಯ ಮೇಲಿಟ್ಟು ಬೆಲ್ಲ ಹಾಕಿ. ನೀರು ಹಾಕಬಾರದು. ಬೆಲ್ಲ ಕರಗಲಿ. ಬೇರೆ ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ರುಬ್ಬಿದ ಸೀಬೆಹಣ್ಣಿನ ಮಿಶ್ರಣ ಹಾಕಿ ತೊಳಸಿ.
ನೀರಿನ ಅಂಶ ಆರಿದ ನಂತರ ಬೆಲ್ಲದ ಪಾಕ ಹಾಕಿ ತೊಳಸಿ. ಬಾಣಲೆಯಿಂದ ತಳ ಬಿಡುತ್ತಾ ಬಂದಾಗ ಬೌಲ್‌ಗೆ ಹಾಕಿ. ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯಿಂದ ಅಲಂಕರಿಸಿ. ಸೀಬೆಹಣ್ಣಿನ ವಿಶಿಷ್ಟ ಪರಿಮಳವಿರುವ ಈ ಹಲ್ವಾಕ್ಕೆ ಏಲಕ್ಕಿ ಪುಡಿ ಹಾಕುವ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT