ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಜಯದ ಮೇಲೆ ಬಿಎಫ್‌ಸಿ ಕಣ್ಣು

ಎಎಫ್‌ಸಿ ಲೀಗ್ ಫೈನಲ್ ಇಂದು; ಇರಾಕ್‌ನ ಏರ್‌ಫೋರ್ಸ್ ಕ್ಲಬ್ ಎದುರು ಚೆಟ್ರಿ ಬಳಗದ ಹಣಾಹಣಿ
Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ
ದೋಹಾ: ಕೆಲವು ವಾರಗಳ ಹಿಂದಿನ ಮಾತು. ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಭಾರತದ ಫುಟ್‌ಬಾಲ್ ಕ್ರೀಡೆಯಲ್ಲಿ  ಐತಿಹಾಸಿಕ ದಾಖಲೆ ಮಾಡಿತ್ತು. 
 
ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೂರ್ನಿಯ ಫೈನಲ್ ತಲುಪಿದ ಸಾಧನೆಯನ್ನು ಬಿಎಫ್‌ಸಿ ಮಾಡಿತ್ತು.  ಶನಿವಾರ ಇಲ್ಲಿ ನಡೆಯಲಿರುವ ಏಷ್ಯಾ ಫುಟ್‌ಬಾಲ್ ಕಪ್ (ಎಎಫ್‌ಸಿ) ಟೂರ್ನಿಯಲ್ಲಿ  ಆಡಲಿದೆ.  ಇರಾಕ್ ದೇಶದ ಅಲ್ ಖಾವಾ ಅಲ್ ಜಾವಿಯಾ (ಏರ್‌ಫೋರ್ಸ್ ಕ್ಲಬ್) ತಂಡವನ್ನು ಇಲ್ಲಿಯ ಸುಹೈಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಎದುರಿಸಲಿದೆ.
 
ಭಾರತ ತಂಡವು 1951 ಮತ್ತು 1962ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ  ಚಾಂಪಿಯನ್ ಆಗಿತ್ತು. ಆದರೆ ಅಲ್ಲಿಂದ ಸಾಧನೆಯು ಮೇಲ್ಮುಖವಾಗಲಿಲ್ಲ. ಇದೀಗ ಬಿಎಫ್‌ಸಿ ತಂಡವು ಏಷ್ಯಾ ಮಟ್ಟದಲ್ಲಿ ಇಂತಹದೊಂದು ಸಾಧನೆ ಮಾಡಿರುವುದು ಭಾರತದ ಫುಟ್‌ಬಾಲ್‌ ಕ್ರೀಡೆಯಲ್ಲಿ ಮಹತ್ವದ  ಮೈಲುಗಲ್ಲಾಗಲಿದೆ.  ದೇಶದ ಫುಟ್‌ಬಾಲ್ ಕ್ರೀಡಾಭಿ  ಮಾನಿಗಳಲ್ಲಿ   ಭರವಸೆ ಮೂಡಿದೆ.  
 
ಆದರೆ, ಏಷ್ಯಾದ ಅಗ್ರಶ್ರೇಯಾಂಕದ ತಂಡವಾಗಿರುವ ಇರಾಕ್‌ನ ಬಲಿಷ್ಠ ಕ್ಲಬ್ ವಿರುದ್ಧ ಬಿಎಫ್‌ಸಿ ಈಗ ಸೆಣಸಲಿದೆ. ಆದ್ದರಿಂದ ಈ ಸವಾಲು ಮತ್ತಷ್ಟು ಕಠಿಣವಾಗಿದೆ. ಇರಾಕ್ ದೇಶದ ಅಲ್ ಶೊರ್ಟಾ (1971), ಅಲ್ ರಶೀದ್ (1989) ಎಎಫ್‌ಸಿ ಫೈನಲ್ ತಲುಪಿದ್ದವು. ಅಲ್ ತಲಬಾ (1995) ಮತ್ತು ಅಲ್ ಝವ್ರಾ (2000) ತಂಡಗಳು ಏಷ್ಯಾ ಕಪ್ ವಿನ್ನರ್ಸ್ ಫೈನಲ್‌ನಲ್ಲಿ ಸ್ಪರ್ಧಿಸಿದ್ದವು.  
 
2012 ಮತ್ತು 2014ರಲ್ಲಿ ಅರ್ಬಿಲ್ ಫುಟ್‌ಬಾಲ್ ಕ್ಲಬ್ ತಂಡವು ಇರಾಕ್ ಪ್ರತಿನಿಧಿತ್ವವನ್ನು ಉಳಿಸಿಕೊಂಡಿತ್ತು. ಆದರೆ ಪ್ರಶಸ್ತಿ ಗೆದ್ದಿರಲಿಲ್ಲ.
 
2013ರಲ್ಲಿ ರಚನೆಯಾದ ಬಿಎಫ್‌ಸಿ ತಂಡಕ್ಕೆ ದೊಡ್ಡ ಇತಿಹಾಸದ ಬಲವಿಲ್ಲ. ಆದರೆ ದೇಶದೊಳಗೆ ಮತ್ತು ಏಷ್ಯಾಮಟ್ಟದಲ್ಲಿ ನಡೆದ ಟೂರ್ನಿಗಳಲ್ಲಿ ತಂಡದ ಆಟಗಾರರು ಉತ್ತಮವಾಗಿ ಆಡಿದ್ದಾರೆ. ಅದರೊಂದಿಗೆ ತನ್ನ ಅಭಿಮಾನಿ ಬಳಗದ ವಿಶ್ವಾಸ ಗೆದ್ದಿದ್ದಾರೆ. 
 
ತಂಡದ ನಾಯಕ ಸುನಿಲ್ ಚೆಟ್ರಿ ಅವರು ಕಳೆದ ಪಂದ್ಯದಲ್ಲಿ ವಿಜೇತ ತಂಡವನ್ನೇ ಇಲ್ಲಿಯೂ ಕಣಕ್ಕಿಳಿಸುವ ಯೋಚನೆಯಲ್ಲಿದ್ದಾರೆ.  ಸಿ.ಕೆ. ವಿನೀತ್, ಅಲ್ವೆರೊ ರುಬಿಯೊ, ಯುಗೇನ್ಸನ್ ಲಿಂಗ್ಡೊ ಮತ್ತು ಕ್ಯಾಮೆರಾನ್ ವಾಟ್ಸನ್ ಅವರು ಮಿಡ್‌ಫೀಲ್ಡ್‌ನಲ್ಲಿ ತಮ್ಮ ಕಾಲ್ಚಳಕ ತೋರಲಿದ್ದಾರೆ. 
 
ಆದರೆ, ಅಲ್ವಿನ್ ಜಾರ್ಜ್ ಅವರು ತಂಡಕ್ಕೆ ಲಭ್ಯರಾಗುವ ಕುರಿತು ಇನ್ನೂ ಖಚಿತವಾಗಿಲ್ಲ. ನವೆಂಬರ್ 2ರಂದು ಅವರು ದೋಹಾ ವಿಮಾನವನ್ನು ತಪ್ಪಿಸಿಕೊಂಡಿದ್ದರು. ಅವರ ವೀಸಾ ಸಮಸ್ಯೆಯಿಂದಾಗಿ ಅವರು ಇನ್ನೂ ಇಲ್ಲಿಗೆ ತಲುಪಿಲ್ಲ. ಲಾಲ್‌ಚುನಮವಿಯಾ ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರ ನಿಶು ಕುಮಾರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. 
 
ಲೆಫ್ಟ್‌ ಬ್ಯಾಕ್‌ನಲ್ಲಿ ಅವರು ಆಡಲಿಳಿಯಬಹುದು. ಗೋಲ್‌ಕೀಪರ್ ಅಮರಿಂದರ್ ಸಿಂಗ್ ಅವರು ಅಮಾನತುಗೊಂಡಿ ರುವುದರಿಂದ ಲಾಲತುಮ್ಮಾವಿಯಾ ರಾಲ್ಟೆ ಅವರು ಗೋಲುಪೆಟ್ಟಿಗೆಯ ರಕ್ಷಣೆಗೆ ನಿಲ್ಲಲಿದ್ದಾರೆ.  ಎದುರಾಳಿ ಏರ್‌ಫೋರ್ಸ್‌ ಕ್ಲಬ್‌ ತಂಡದಲ್ಲಿಯೂ ಪ್ರಮುಖ ಆಟಗಾರರ ಅನುಪಸ್ಥಿತಿ ಇದೆ.
 
 ಮಿಡ್‌ಫೀಲ್ಡರ್ ಬಷರ್ ರೆಸಾನ್ ಈ ಪಂದ್ಯದಲ್ಲಿಆಡುತ್ತಿಲ್ಲ.  ಸೆಮಿಫೈನಲ್‌ನಲ್ಲಿ ರೆಡ್‌ ಕಾರ್ಡ್‌ ಪಡೆ ದಿದ್ದ ಅವರು ಈ ಪಂದ್ಯದ ಹೊರಗುಳಿದಿರುವುದು ತಂಡದ ಚಿಂತೆ ಹೆಚ್ಚಿಸುವ ಸಾಧ್ಯತೆ ಇದೆ. ಫಾರ್ವರ್ಡ್‌ ಆಟಗಾರ ಸಮಲ್ ಸಯೀದ್ ಕೂಡ ನಾಕ್‌ಔಟ್ ಹಂತದಲ್ಲಿ ಹಳದಿ ಕಾರ್ಡ್ ದರ್ಶನ ಮಾಡಿದ್ದರು. ಇದರಿಂದಾಗಿ ಅವರೂ ಈ ಪಂದ್ಯದಿಂದ ಹೊರಗುಳಿ ಯುವ ಶಿಕ್ಷೆ ಅನುಭವಿಸ ಲಿದ್ದಾರೆ. 
 
ಆದರೆ, ನಾಯಕ ಬಸೀಮ್ ಖಾಸೀಂ ಮತ್ತು ಬಳಗವು ಈ ಕೊರತೆಗಳನ್ನು ಮೀರಿ ನಿಲ್ಲುವ ವಿಶ್ವಾಸದಲ್ಲಿದೆ. ಸ್ಟ್ರೈಕರ್ ಹಮ್ಮದಿ ಅಹಮದ್ ತಂಡದ ಅತ್ಯಂತ ಬಲಶಾಲಿ ಆಟಗಾರ ನಾಗಿದ್ದಾರೆ. ಇರಾಕ್ ರಾಷ್ಟ್ರೀಯ ತಂಡದ ಆಟಗಾರನಾಗಿರುವ ಅವರು ಈ ಋತುವಿನಲ್ಲಿ 15 ಗೋಲು ಗಳನ್ನು ಹೊಡೆದಿದ್ದಾರೆ. 
 
 ಇವರು ಬೆಂಗಳೂರು ತಂಡಕ್ಕೆ ಪ್ರಮುಖ ಸವಾಲಾಗುವ ಸಾಧ್ಯತೆ ಇದೆ. ಇವರನ್ನು ತಡೆಯಲು ಚೆಟ್ರಿ ಬಳಗವು ವಿಶೇಷ ಕಾರ್ಯತಂತ್ರ ಹೆಣೆಯುತ್ತಿದೆ. ಎಲ್ಲ ಅಡೆತಡೆಗಳನ್ನು ಎದುರಿಸಿ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅದರೊಂದಿಗೆ ಭಾರತದ ಫುಟ್‌ಬಾಲ್ ಕ್ಷೇತ್ರದಲ್ಲಿ ನೂತನ ಶಕೆ ಆರಂಭವಾಗಲಿದೆ.  
ಪಂದ್ಯದ ಆರಂಭ: ರಾತ್ರಿ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT