ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಧುರ ಸುಗಂಧರಾಜ

ಎಣಿಕೆ ಗಳಿಕೆ–27
Last Updated 7 ನವೆಂಬರ್ 2016, 19:30 IST
ಅಕ್ಷರ ಗಾತ್ರ

* ಸುಗಂಧರಾಜ ಗಿಡ ಬೆಳೆಯಲು ಗಡ್ಡೆಗಳನ್ನು ನಾಟಿಗೆ ಬಳಸಬೇಕು.

* ಎಲ್ಲಾ ಪ್ರಕಾರದ ಮಣ್ಣಿನಲ್ಲಿ ಸುಗಂಧರಾಜ ಗಿಡವನ್ನು ಬೆಳೆಯಬಹುದಾದರೂ ಚೆನ್ನಾಗಿ ನೀರು ಸೋರಿ ಹೋಗುವಂಥ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ಇದರ ಗಡ್ಡೆಗಳನ್ನು ನಾಟಿ ಮಾಡಲು ಸೂಕ್ತ.

ಬೆಳೆಯುವ ವಿಧಾನ
* ಪ್ರತಿ ಹೆಕ್ಟೇರಿಗೆ 1,800–1,900 ಕಿಲೋ ಗ್ರಾಂ ಗಡ್ಡೆ ಬೇಕಾಗುತ್ತದೆ. 2-3 ಸಲ ಉಳುಮೆ ಮಾಡಿ ಹದ ಮಾಡಬೇಕು. ನಂತರ ಪ್ರತಿ ಹೆಕ್ಟೇರಿಗೆ 30 ಟನ್‌ ಕೊಟ್ಟಿಗೆ ಗೊಬ್ಬರಗಳನ್ನು ಮಣ್ಣಿಗೆ ಬೆರೆಸಬೇಕು.

* 30 ಸೆಂ.ಮೀ. ಅಂತರದಲ್ಲಿ ಬೋದುಗಳನ್ನು ರಚಿಸಿಕೊಂಡು ಬೋದುಗಳ ಒಂದು ಬದಿಯಲ್ಲಿ ಸುಗಂಧರಾಜ ಹೂವಿನ ಗಡ್ಡೆಗಳನ್ನು ನಾಟಿ ಮಾಡಬೇಕು. ಸಸಿಯಿಂದ ಸಸಿಗೆ 22.5 ಸೆಂ.ಮೀ ಅಂತರವು ಬರುವಂತೆ ಗಡ್ಡೆಗಳನ್ನು ಊರಬೇಕು. ನಂತರ ಸಾವಯವ ಗೊಬ್ಬರ ಹಾಕಬೇಕು.

* ಪ್ರತಿ ತಿಂಗಳು ಗಿಡಗಳ ಸುತ್ತಲೂ ಅಂತರ ಬೇಸಾಯ ಮಾಡಿ ಮಣ್ಣು ಏರಿಸಬೇಕು. ಪ್ರತಿ 5 ರಿಂದ 7 ದಿನಗಳಿಗೊಮ್ಮೆ ವಾತಾವರಣಕ್ಕೆ ತಕ್ಕಂತೆ ನೀರನ್ನು ಕೊಟ್ಟು ಈ ಹೂ ಬೆಳೆ ಬೇಸಾಯ ಮಾಡಬಹುದು.

* ಗಡ್ಡೆಗಳನ್ನು ನಾಟಿ ಮಾಡಿದ ಮೂರರಿಂದ ಮೂರೂವರೆ ತಿಂಗಳಲ್ಲಿ ಸುಗಂಧರಾಜ ಹೂವಿನ ಗಿಡಗಳಲ್ಲಿ ಹೂಗಳು ಕೊಯ್ಲಿಗೆ ಬರುತ್ತವೆ.

* ಹೂಗಳು ಕೊಯ್ಲು ಮಾಡುವಾಗ ಹೂ ಅರಳಿದ ದಿನವೇ ಬೆಳಿಗ್ಗೆ ಎಂಟು ಗಂಟೆಯ ಒಳಗಾಗಿ ಹೂಗಳನ್ನು ಕೀಳಬೇಕು. ಕೊಯ್ಲು ಮಾಡಿದ ಹೂಗಳನ್ನು ಮೂರು ದಿನಗಳವರೆಗೂ ಇಡಬಹುದು. ಈ ಸುಗಂಧರಾಜ ಹೂವಿನ ಬೆಳೆಯಲ್ಲಿ ನಾವು ನಿರಂತರವಾಗಿ ಹೂಗಳನ್ನು ಪಡೆಯಬೇಕಿದ್ದಲ್ಲಿ ಗಡ್ಡೆಗಳನ್ನು ನಾಟಿ ಮಾಡುವಾಗಲೇ ಕೆಲವು ವಾರಗಳ ಅಂತರಕೊಟ್ಟು ಸುಪ್ತಾವಸ್ಥೆಯಲ್ಲಿರುವ ಗಡ್ಡೆಗಳನ್ನು ನಾಟಿ ಮಾಡಬೇಕು.

* ಗಿಡಗಳಿಂದ ಹೂಗಳನ್ನು ಕೊಯ್ಲು ಮಾಡಿದ ಕೆಲ ದಿನಗಳ ನಂತರ ಎಲೆಗಳು ಒಣಗಲು ಪ್ರಾರಂಭಿಸುತ್ತವೆ. ಈ ಹಂತದಲ್ಲಿ ಗಡ್ಡೆಗಳನ್ನು ಸಂಗ್ರಹಿಸಿ ಬಿತ್ತನೆಗಾಗಿ ಕಾಯ್ದಿಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT