ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಫ್ ಸ್ಟೇಜ್ - ಡೆಂಟಾಕಾಂ ಆ್ಯಪ್ ಗಳು…

Last Updated 8 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್ ಬಳಕೆದಾರರಿಗೆಂದು ದಿನವೂ ಹೊಸ ಆ್ಯಪ್‌ಗಳ ಆವಿಷ್ಕಾರವಾಗುತ್ತಿರುತ್ತವೆ. ಕಲಿಕೆ, ಆರೋಗ್ಯ, ಮನರಂಜನೆ ಹೀಗೆ ನಾನಾ ವಿಷಯಗಳಿಗೆ ಸಂಬಂಧಿಸಿದ ಆ್ಯಪ್‌ಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ಮತ್ತು ಹಲ್ಲು ನೋವಿನ ಸಮಸ್ಯೆ ನಿವಾರಣೆಗೆ ಪ್ರಾಥಮಿಕ ಚಿಕಿತ್ಸೆಯ ನೆರವು ನೀಡುವಂತಹ ಆ್ಯಪ್‌ಗಳ ಪರಿಚಯ ಇಲ್ಲಿದೆ.

***
ವಿದ್ಯಾರ್ಥಿಗಳಿಗೆ: ಲೈಪ್ ಸ್ಟೇಜ್ ಆ್ಯಪ್ 
ಕಳೆದೆರಡು ತಿಂಗಳ ಹಿಂದೆ ಆ್ಯಪಲ್ ಐಫೋನ್ ಕಂಪೆನಿ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಸಂವಹನಕ್ಕಾಗಿ ‘ಲರ್ನಿಂಗ್ ಆ್ಯಪ್’ ಅನ್ನು ಬಿಡುಗಡೆ ಮಾಡಿತ್ತು. ವಿದ್ಯಾರ್ಥಿಗಳಿಂದ ಈ ಆ್ಯಪ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಕಂಪೆನಿಯು ಆಂಡ್ರಾಯ್ಡ್‌ ಬಳಕೆದಾರ ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿ ‘ಲೈಫ್ ಸ್ಟೇಜ್’ ಎಂಬ ಆ್ಯಪ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಸಂವಹನ ಮತ್ತು ಮನರಂಜನೆಯನ್ನು ಗಮನದಲ್ಲಿರಿಸಿಕೊಂಡು ಈ ಆ್ಯಪ್ ವಿನ್ಯಾಸ ಮಾಡಲಾಗಿದೆ ಎಂದು ಫೇಸ್ ಬುಕ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಫೇಸ್‌ಬುಕ್ ಬಳಕೆದಾರರು ಆಂಡ್ರಾಯ್ಡ್‌  ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಈ ಆ್ಯಪ್್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಬಳಬಹುದಾಗಿದೆ.

ಇದರಲ್ಲಿ ವಿದ್ಯಾರ್ಥಿಗಳು ತಾವು ಓದುತ್ತಿರುವ ತರಗತಿಯ ಪುಟವನ್ನು ರಚಿಸಬೇಕು. ನಂತರ ಆ ಪುಟಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸೇರಿಸಬೇಕು. ತದನಂತರ ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಬಹುದು. ವಿಡಿಯೊ, ಆಡಿಯೊ, ಬರಹ, ಪಿಡಿಎಫ್ ಫೈಲ್‌ಗಳು, ಚಿತ್ರಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಪಠ್ಯ ವಿಷಯ ಬೋರ್ ಆದರೆ ಕ್ರೀಡೆ, ಸಿನಿಮಾಗಳನ್ನು ವೀಕ್ಷಿಸಬಹುದು ಹಾಗೂ ಸಂಗೀತವನ್ನು ಆಲಿಸುವ ಸೌಕರ್ಯವನ್ನು ಈ ಆ್ಯಪ್ ನಲ್ಲಿ ಕಲ್ಪಿಸಲಾಗಿದೆ.
Google play store: facebook lifestage
***
ದಂತ ಚಿಕಿತ್ಸೆಗೆ ‘ಡೆಂಟಾಕಾಂ’ ಆ್ಯಪ್
ಹಲ್ಲು ನೋವಿಗೆ ಇನ್ನು ಮುಂದೆ ದಂತ ವೈದ್ಯರ ಬಳಿ ಹೋಗುವ ಪ್ರಮೆಯವೇ ಬರುವುದಿಲ್ಲ! ಯಾಕೆಂದರೆ ಡೆಂಟಾಕಾಂ ಆ್ಯಪ್ ಅಥವಾ ಅಪ್ಲಿಕೇಶನ್ ಮೂಲಕವೇ ನೋವನ್ನು ನಿವಾರಿಸಿಕೊಳ್ಳಬಹುದು! ಸಣ್ಣ ಪುಟ್ಟ ಹಲ್ಲಿನ ತೊಂದರೆಗಳಿಗೆ ವೈದ್ಯರ ಬಳಿ ಅಲೆಯುವುದನ್ನು ಈ ಆ್ಯಪ್ ತಪ್ಪಿಸುತ್ತದೆ ಎನ್ನುತ್ತಾರೆ ವಿನ್ಯಾಸಕರು. ಫಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದ ಸಾಫ್ಟ್‌ವೇರ್‌ ನಿಪುಣರ ತಂಡ ಈ ಆ್ಯಪ್ ಅನ್ನು ಅಭಿವೃದ್ದಿಪಡಿಸಿದೆ. ಭಾರತೀಯ ಮೂಲದ ತಂತ್ರಜ್ಞಾನ ಸಂಸ್ಥೆಯು ಈ ಆ್ಯಪ್ ವಿನ್ಯಾಸದ ನೇತೃತ್ವ ವಹಿಸಿದ್ದು ವಿಶೇಷ.


ಕಾರ್ಯವೈಖರಿ: ವಿಂಡೋಸ್, ಆಂಡ್ರಾಯ್ಡ್‌  ಮತ್ತು ಐಒಎಸ್ ಪ್ಲಾಟ್ ಫಾರಂನಲ್ಲಿ ಉಚಿತವಾಗಿ ಲಭ್ಯವಿರುವ ಡೆಂಟಾಕಾಂ ಆ್ಯಪ್ ಅನ್ನು ಗ್ರಾಹಕರು ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.  ವಿಳಾಸ, ವಯಸ್ಸು, ಇತರೆ ವೈಯಕ್ತಿಕ ಮಾಹಿತಿಯನ್ನು ಆ್ಯಪ್ ನಲ್ಲಿ ಅಪ್ ಲೋಡ್ ಮಾಡಬೇಕು. ಹೀಗೆ ಅಪ್ ಲೋಡ್ ಮಾಡಿದ ಮಾಹಿತಿಯು ದಂತ ವೈದ್ಯರಿಗೆ ಕ್ಲೌಡ್ ನೆಟ್ ವರ್ಕ್ ಮೂಲಕ ಲಭ್ಯವಾಗಿ ವೈದ್ಯರು ಮತ್ತು ರೋಗಿಗಳ ನಡುವೆ ಸಂವಹನ ಸಾಧ್ಯವಾಗುತ್ತಿದೆ.

ಹಲ್ಲು ನೋವು ಕಾಣಿಸಿಕೊಂಡ ರೋಗಿಯೊಬ್ಬರು ಯಾವ ಭಾಗದಲ್ಲಿ ಹಲ್ಲು ನೋಯುತ್ತದೆ ಎಂಬ ನಿಖರ ಮಾಹಿತಿ ಜತೆಗೆ  ನೋಯುತ್ತಿರುವ ಹಲ್ಲಿನ ಚಿತ್ರವನ್ನು ತೆಗೆದು ಡೆಂಟಾಕಾಂ ಆ್ಯಪ್ ನಲ್ಲಿ ಅಪ್ ಲೋಡ್ ಮಾಡಬೇಕು.  ಮಾಹಿತಿ ಮತ್ತು ಚಿತ್ರವನ್ನು ಅಪ್ ಲೋಡ್ ಮಾಡಿದ 4 ನಿಮಿಷದ ಒಳಗೆ ವೈದ್ಯರು ಚಿಕಿತ್ಸೆ ಮಾಹಿತಿಯನ್ನು ನೀಡುತ್ತಾರೆ. ಅದರಂತೆ ರೋಗಿಗಳು ಔಷಧಿಯನ್ನು ಬಳಸಿದರೆ ದಂತ ನೋವು ಕ್ಷಣಾರ್ಧದಲ್ಲೇ ಮಾಯವಾಗುತ್ತದೆ ಎನ್ನುತ್ತಾರೆ ತಂಕಮ್.

ಹಲ್ಲು ನೋವು ಕಾಣಿಸಿಕೊಂಡಾಗ ದಂತ ವೈದ್ಯರು ಸಿಗದಿದ್ದಾಗ ನೋವು ನಿವಾರಕ ಔಷಧಿಯನ್ನು ಸೇವಿಸುವುದು ಸಾಮಾನ್ಯ. ಇದರಿಂದ ಸಾಕಷ್ಟು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.  ರೋಗಿಗಳಿಗೆ ಅನುಕೂಲವಾಗಲೆಂದೇ ಈ ಆ್ಯಪ್ ರೂಪಿಸಲಾಗಿದೆ ಎಂದು ತಂಕಮ್ ಹೇಳುತ್ತಾರೆ. Google play store: dentacom

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT