ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ ತಾಲ್ಲೂಕು ಸಮ್ಮೇಳನಕ್ಕೆ ಭರದ ಸಿದ್ಧತೆ

ಕನ್ನಡಾಸಕ್ತರ ಸ್ವಾಗತಕ್ಕೆ ಪರಪ್ಪ ಪಾಟೀಲ, ಕೌಜಲಗಿ ನಿಂಗಮ್ಮ, ಶಿವಯೋಗಿ ಬಿದರಿ ಮಹಾದ್ವಾರ
Last Updated 11 ನವೆಂಬರ್ 2016, 6:01 IST
ಅಕ್ಷರ ಗಾತ್ರ

ಕಲ್ಲೋಳಿ (ಮೂಡಲಗಿ): ಇದೇ 12ರಂದು ಕಲ್ಲೋಳಿಯಲ್ಲಿ ಜರುಗಲಿ ರುವ ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಯು ಭರದಿಂದ ಸಾಗಿದ್ದು, ಶುಕ್ರವಾರ ಸಂಜೆ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಬಸಗೌಡ ಪಾಟೀಲ ಅವರು ತಿಳಿಸಿದರು. ಗುರುವಾರ ಬೆಳಿಗ್ಗೆ ಸಮ್ಮೇಳನದ ಸಿದ್ಧತೆಯನ್ನು ಪರಿಶೀಲನೆಯ ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸ್ವಾಗತಿ ಸಮಿತಿ ಗೌ. ಅಧ್ಯಕ್ಷ ಬಿ.ಬಿ. ಬೆಳಕೂಡ, ಎಸ್.ಎಂ. ಖಾನಾಪುರ, ಮಲ್ಲಪ್ಪ ಕುರಬೇಟ, ಸಂಘಟನಾ ಕಾರ್ಯದರ್ಶಿ ಪ್ರಾ. ಸುರೇಶ ಹನಗಂಡಿ, ಪ್ರೊ. ಶಂಕರ ನಿಂಗನೂರ ಇದ್ದರು.

ಕಾರ್ಯಕ್ರಮದ ವಿವರ: 12ರಂದು ಬೆಳಿಗ್ಗೆ 8ಕ್ಕೆ ರಾಷ್ಟ್ರಧ್ಜಜಾರೋಹಣವನ್ನು ಕಲ್ಲೋಳಿಯ ಗಣ್ಯರಾದ ಬಿ.ಎಸ್. ಗೋರೋಶಿ ನೆರವೇರಿಸುವರು. ನಾಡ ಧ್ವಜಾರೋಹಣವನ್ನು ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಪರಿಷತ್ತು ಧ್ವಜಾರೋಹಣವನ್ನು ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ ನೆರವೇರಿಸುವರು.

ಬೆಳಿಗ್ಗೆ 9ಕ್ಕೆ ಜರಗುವ ಮೆರ ವಣಿಗೆಯ ನೇತೃತ್ವವನ್ನು ತಾಲ್ಲೂಕು ದಂಡಾಧಿಕಾರಿ ಜಿ.ಎಸ್. ಮಳಗಿ ವಹಿಸುವರು. ಮೆರವಣಿಗೆಯ ಉದ್ಘಾಟನೆಯನ್ನು ಕಲ್ಲೋಳಿಯ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿ ಬ. ಕುರಬೇಟ ನೆರವೇರಿಸುವರು. ಉಪಾಧ್ಯಕ್ಷೆ ಕಾಶವ್ವ ಸೊಂಟನವರ ಮತ್ತು ಗ್ರಾಮ ಪಂಚಾಯ್ತಿಯ ಎಲ್ಲ ಸದಸ್ಯರು ಉಪಸ್ಥಿತರಿರುವರು.
ಚಿತ್ರಕಲೆ ಮತ್ತು ಪೇಂಟಿಂಗ್ಸ್‌ ಪ್ರದರ್ಶನವನ್ನು ಹಿರಿಯ ಸಾಹಿತಿ ಬಾಳೇಶ ಲಕ್ಷೆಟ್ಟಿ ಉದ್ಘಾಟಿಸುವರು.

ಸ್ವಾತಂತ್ರ್ಯ ಸೇನಾನಿ ಶ್ರೀ ನಿಂಗಪ್ಪ ರಾಯಪ್ಪ ಪಾಟೀಲ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಜರುಗಲಿರುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಅರಭಾವಿಮಠದ ಸಿದ್ಧಲಿಂಗ ಸ್ವಾಮಿಗಳು ಮತ್ತು ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘ ರಾಜೇಂದ್ರ ಸ್ವಾಮಿಗಳು ವಹಿಸುವರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.  ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ವಹಿಸುವರು.  ನಿಕಟಪೂರ್ವ ಅಧ್ಯಕ್ಷ ಡಾ. ಎಸ್.ಬಿ. ತೋಟದ ಭಾಗವಹಿಸುವರು.

ಸಂಸದ ಸುರೇಶ ಅಂಗಡಿ, ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಸಾಹಿತಿ ಡಾ. ಸರಜೂ ಕಾಟ್ಕರ್ ಭಾಗವಹಿಸುವರು. ಸಾಹಿತಿ ಡಾ. ಬಸವರಾಜ ಜಗಜಂಪಿ ಸ್ಮರಣ ಸಂಚಿಕೆ ಮತ್ತು ಸಾಹಿತಿ ಯ.ರು. ಪಾಟೀಲ ಪುಸ್ತಕ ಬಿಡುಗಡೆ ಮಾಡುವರು.

ವಿಚಾರ ಗೋಷ್ಠಿ: ಮಧ್ಯಾಹ್ನ 2ಕ್ಕೆ ಜರುಗುವ ‘ಗೋಕಾವಿ ನಾಡಿನ ಸಮಕಾಲೀನ ಸಾಹಿತ್ಯ ಸಮೀಕ್ಷೆ’ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ಎಸ್.ಎಸ್. ಅಂಗಡಿ ವಹಿಸುವರು.

ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಆಶಯ ನುಡಿ ಹೇಳುವರು. ಗೋಕಾವಿ ನಾಡಿನ ಬಯಲಾಟಗಳು ಕುರಿತು ಜಯಾನಂದ ಮಾದರ, ಕಲ್ಲೋಳಿಯ ಐತಿಹಾಸಿಕತೆ ಕುರಿತು ಪ್ರೊ. ಸುರೇಶ ಹನಗಂಡಿ, ಗೋಕಾವಿ ನಾಡಿನ ಕಾವ್ಯ ಮತ್ತು ನಾಟಕ ಕುರಿತು ಸಿದ್ರಾಮ ದ್ಯಾಗಾನಟ್ಟಿ, ಗೋಕಾವಿ ನಾಡಿನ ಸಂಶೋಧನೆ ಮತ್ತು ಸಂಪಾದನೆ ಕುರಿತು ಮಹಾನಂದಾ ಪಾಟೀಲ, ಗೋಕಾವಿ ನಾಡಿನ ಕಥೆ ಮತ್ತು ಕಾದಂಬರಿ ಕುರಿತು ಡಾ. ವೈ.ಎಂ. ಯಾಕೋಳ್ಳಿ ಪ್ರಬಂಧ ಮಂಡಿಸುವರು.

ಕವಿಗೋಷ್ಠಿ: ಮಧ್ಯಾಹ್ನ 3.30ಕ್ಕೆ ಜರುಗುವ ಕವಿಗೋಷ್ಠಿಯ ಅಧ್ಯಕ್ಷತೆ ಯನ್ನು ಪ್ರೊ. ಗಂಗಾಧರ ಮಳಗಿ ವಹಿಸುವರು. ಆಶಯ ನುಡಿಯನ್ನು ಪುಷ್ಪಾ ಮುರಗೋಡ ಮಾಡುವರು.

ಇದೇ ವೇಳೆಗೆ ಭೀಮಪ್ಪ ಕಡಾಡಿ, ಟಿ.ಸಿ. ಮೊಹರೆ, ರಾಜು ಬೈರುಗೋಳ, ವೈ.ವೈ. ಸುಲ್ತಾನಪುರ, ಮಲ್ಲಪ್ಪ ಖಾನಾಪುರ, ಲಕ್ಕವ್ವ ಮರಗನ್ನವರ, ಬಾಳೇಶ ಚಿಕ್ಕಣ್ಣವರ, ಡಾ.ಆರ್.ಎನ್. ಪಾಟೀಲ, ಸುಗಂಧಾ ಡಂಬಳ, ಮಹಾಂತೇಶ ಶಾಸ್ತ್ರೀಗಳು, ಕೆಂಪವ್ವ ಹರಿಜನ, ಶಿವಾಜಿ ಜಾಧವ, ಮಲ್ಲಪ್ಪ ಅರೆನಾಡ, ಚುಟುಕುಸಾಬ ಜಾತಗಾರ, ಡಾ. ಪಂಚಾಕ್ಷರಿ ಹೊಸಮಠ, ಮಲ್ಲಿಕಾರ್ಜುನ ವಕ್ಕುಂದ, ಶಿವರಾಯಪ್ಪ ರಾಯನ್ನವರ, ಪ್ರೊ. ಎಸ್.ಕೆ. ಪಾಟೀಲ, ಬಿ.ಟಿ. ಬಡವಣ್ಣಿ, ಶಕುಂತಲಾ ದಂಡಗಿ ಅವರನ್ನು ಸನ್ಮಾನಿಸಲಾಗುವುದು.

ಸಮಾರೋಪ ಸಮಾರಂಭ: ಸುಣಧೋಳಿಯ ಶಿವಾನಂದ ಸ್ವಾಮಿಗಳು ಮತ್ತು ಮನ್ನಿಕೇರಿಯ ವಿಜಯಸಿದ್ಧೇಶ್ವರ ಸ್ವಾಮಿಗಳ ಸಾನ್ನಿಧ್ಯ, ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ ಅಧ್ಯಕ್ಷತೆ, ಸಮಾರೋಪ ಭಾಷಣ ಸಿದ್ಧರಾಜ ಪೂಜಾರಿ, ಅಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ಅವರು ಮಾತನಾಡುವರು.

ಸಾಂಸ್ಕೃತಿಕ ಸೌರಭ: ಸಂಜೆ 6.30ಕ್ಕೆ ಜರಗುವ ಸಾಂಸ್ಕೃತಿಕ ಸೌರಭದ ಅಧ್ಯಕ್ಷತೆಯನ್ನು ಈಶ್ವರಚಂದ್ರ ಬೆಟಗೇರಿ ವಹಿಸಲಿದ್ದು, ಜಿ.ಕೆ. ಕಾಡೇಶಕುಮಾರ ಚಾಲನೆ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT