ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲಿ ಸ್ಪರ್ಧೆ ಫಲಿತಾಂಶ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕೋಳಿ ಕೂಗುವ ಸಮಯದಲ್ಲಿ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಹೊಸ್ತಿಲಿನಲ್ಲಿ ಹಾಗೂ ಮನೆಯಂಗಳದಲ್ಲಿ ರಂಗೋಲಿ ಇಡುವ ಸಂಸ್ಕೃತಿ ನಮ್ಮದು. ಇಂದಿನ ಧಾವಂತದ ಬದುಕಿನಲಿ ರೆಡಿಮೇಡ್‌ ರಂಗೋಲಿ, ಪೇಂಟ್‌ ರಂಗೋಲಿಗಳು ಮನೆಯಂಗಳವನ್ನು ಅಲಂಕರಿಸಿವೆ.

ಇದರ ನಡುವೆಯೂ ನಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಿರುವವರನ್ನು ಗುರುತಿಸಿ, ಅವರ ರಂಗೋಲಿ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ‘ಪ್ರಜಾವಾಣಿ’ ವೇದಿಕೆ ಕಲ್ಪಿಸಿತ್ತು. ದೀಪಾವಳಿ ಹಬ್ಬವನ್ನು ನಿಮಿತ್ತವಾಗಿಟ್ಟುಕೊಂಡು ನಡೆಸಿದ ಈ ರಂಗೋಲಿ ಸ್ಪರ್ಧೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ರಂಗೋಲಿ ಹೀಗೆಯೇ ಇರಬೇಕು ಎಂಬ ಷರತ್ತುಗಳನ್ನೇನೂ ವಿಧಿಸಿರಲಿಲ್ಲ. ಆದ್ದರಿಂದ ಬಂದ ಎಲ್ಲಾ ರಂಗೋಲಿಗಳನ್ನೂ ಸ್ಪರ್ಧೆಗೆ ಪರಿಗಣಿಸಲಾಗಿದೆ.

ರಂಗೋಲಿಯ ಚಾಕಚಕ್ಯತೆ ಇರುವುದು ಅದರ ಎಳೆಗಳಲ್ಲಿ, ತುಂಬುವ ಬಣ್ಣಗಳಲ್ಲಿ, ವರ್ಣಗಳ ಸಂಯೋಜನೆಯಲ್ಲಿ ಹಾಗೂ ರಂಗೋಲಿಯ ಮೂಲಸ್ವರೂಪ ಉಳಿಸಿಕೊಂಡು ಅದಕ್ಕೆ ಸೃಜನಾತ್ಮಕವಾದ ಸ್ಪರ್ಶ ನೀಡುವಲ್ಲಿ. ಇವುಗಳನ್ನೆಲ್ಲ ಸ್ಪರ್ಧೆಯಲ್ಲಿ ಪರಿಗಣಿಸಲಾಗಿದೆ.

ಸ್ಪರ್ಧೆ ರಂಗೋಲಿಯದ್ದಾಗಿದ್ದರೂ ರಂಗೋಲಿಗಿಂತ ತಮ್ಮನ್ನೇ ಹೈಲೈಟ್‌ ಮಾಡಿ ಫೋಟೊ ತೆಗೆಸಿಕೊಂಡವರ, ತೀರಾ ದೂರದಿಂದ ಫೋಟೊ ತೆಗೆದ ಕಾರಣ ಸ್ಪಷ್ಟತೆ ಇಲ್ಲದ ರಂಗೋಲಿಗಳನ್ನು ಪರಿಗಣಿಸಲಾಗಿಲ್ಲ.

ರಂಗೋಲಿ ಜೊತೆಗೆ ದೀಪಾವಳಿ ಶುಭಾಶಯ ಕೋರಿರುವ ಬಹುತೇಕರು ಇಂಗ್ಲಿಷ್‌ ಭಾಷೆಯನ್ನೇ ಬಳಸಿದ್ದರು. ಒಬ್ಬರು ಮಾತ್ರ ಕನ್ನಡದಲ್ಲಿಯೇ ಶುಭಾಶಯ ಕೋರಿದ್ದರು.ಪ್ರಥಮ ಮೂರು ಬಹು ಮಾನ ಪಡೆದ ವಿಜೇತರಿಗೆ ‘ಗಿಫ್ಟ್‌ ಹ್ಯಾಂಪರ್‌’ಗಳನ್ನು ತಲುಪಿಸಲಾಗುವುದು. ಬಹುಮಾನ ಪಡೆದ ರಂಗೋಲಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

***
* ಪ್ರಥಮ: ಸುಮಾ ಗಣಪತಿ
* ದ್ವಿತೀಯ: ಶಾಂತಲಾ
* ತೃತೀಯ: ಕೋಮಲ್

ತೀರ್ಪುಗಾರರ ಮೆಚ್ಚುಗೆ ಪಡೆದ ರಂಗೋಲಿಗಳು
1. ಮೀನಾಕ್ಷಿ ರಮೇಶ್‌
2. ಸಮೀರ್‌
3. ರೇಖಾ ವೈ.ಎಸ್‌.
4. ಕಾರ್ತಿಕ್‌ ಪಟ್ಟಣಶೆಟ್ಟಿ
5. ಗೋವರ್ಧನ
6. ಗುರುಕಿರಣ್‌
7. ರಕ್ಷಾ
8. ಸ್ವಾತಿ
9. ವಿಶ್ವನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT