ಕರ್ನಾಟಕದ ನಾಳೆಗಳು

ಬೇಕಿದೆ ಸುಸ್ಥಿರ ಕೈಗಾರಿಕಾ ನೀತಿ

ಕರ್ನಾಟಕದ ಆರ್ಥಿಕ ಅಭಿವೃದ್ದಿಯಲ್ಲಿ ಕೃಷಿ, ಸೇವಾವಲಯ ಮತ್ತು ಕೈಗಾರಿಕರಣದ ಪಾತ್ರ ಬಹುಮುಖ್ಯವಾದದ್ದು. ಆದರೆ ಕೈಗಾರಿಕೆಗೆ ಅಸಹಜವೆನಿಸುವಂಥ ಒತ್ತನ್ನು ಸರ್ಕಾರಗಳು ನೀಡುತ್ತಿವೆ. ಇದರಿಂದಾಗಿ ಕರ್ನಾಟಕದ ನಿಸರ್ಗದ ಮೇಲೆ ನಿರಂತರ ಶೋಷಣೆ ನಡೆದಿದೆ. ಇದನ್ನು ಬದಲಾಯಿಸುವ ಕೆಲಸವನ್ನು ಈಗಲೇ ಆರಂಭಿಸದೇ ಬಹಳ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಪರಿಸರ ಸ್ನೇಹಿಯಿಂದ ಔದ್ಯಮಿಕ ವಾತಾವರಣವೊಂದನ್ನು ರೂಪಿಸುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳಬೇಕಿರುವುದು ಈ ಹೊತ್ತಿನ ಅಗತ್ಯ. ಕೈಗಾರಿಕೆಗಳಿಗೆ ಬೇಕಿರುವುದು ಮೂಲಸೌಕರ್ಯ ಮತ್ತು ಸುಶಿಕ್ಷಿತ ಮಾನವ ಸಂಪನ್ಮೂಲ. ಈ ಎರಡರ ವಿಚಾರದಲ್ಲಿಯೂ ಕರ್ನಾಟಕ ಬಹಳ ಅದೃಷ್ಟವಂತ ರಾಜ್ಯ. ಇದಕ್ಕೆ ಸುಸ್ಥಿರ ಅಭಿವೃದ್ಧಿಯ ತಂತ್ರವನ್ನು ಸೇರಿಸಿಕೊಂಡರೆ ನಿಸರ್ಗಕ್ಕೆ ಮಾರಕವಾದ ಕೈಗಾರಿಕೀಕರಣ ಸಾಧ್ಯವಿದೆ.

ಕೇವಲ ಆದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಳ್ಳದೆ ಹೆಚ್ಚಿನವರಿಗೆ ಉದ್ಯೋಗ ಒದಗಿಸುವ ಹಳ್ಳಿಗಳು ಮತ್ತು ಕೃಷಿ ಕ್ಷೇತ್ರವನ್ನು ಒಳಗೊಂಡಿರುವ ಕೈಗಾರಿಕಾ ನೀತಿಯೊಂದನ್ನು ಸರ್ಕಾರ ರೂಪಿಸಬೇಕು. ಕೃಷಿ ವಲಯವನ್ನು ಕಡೆಗಣಿಸದ, ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಳ್ಳದ ನೀತಿಯೊಂದನ್ನು ಆವಿಷ್ಕರಿಸುವುದು ಕಷ್ಟವೇನೂ ಅಲ್ಲ. ಬೃಹತ್ ಕೈಗಾರಿಕೆಗಳ ಬದಲಿಗೆ ಹಳ್ಳಿಗಾಡಿನ ವಲಸೆಯನ್ನು ತಡೆಯುವಂಥ ಸಣ್ಣ ಕೈಗಾರಿಕೆಗಳನ್ನು ಹಳ್ಳಿಗಾಡಿನಲ್ಲಿ ಪ್ರೋತ್ಸಾಹಿಸಬೇಕು. ಇವು ಕೃಷಿ ಉತ್ಪನ್ನಗಳನ್ನು ಆಧಾರವಾಗಿಟ್ಟುಕೊಂಡಿದ್ದರೆ ಒಟ್ಟು ಹಳ್ಳಿಗಾಡಿನ ಆರ್ಥಿಕತೆಯಲ್ಲಿ ಬದಲಾವಣೆ ಸಂಭವಿಸುತ್ತದೆ.

ಇದರಿಂದ ಗ್ರಾಮೀಣರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದೂ ತಪ್ಪುತ್ತದೆ. ಕೃಷಿಯೇತರ ಆದಾಯವು ತಾವಿರುವ ಸ್ಥಳದಲ್ಲಿಯೇ ದೊರೆಯುವುದರಿಂದ ಕೃಷಿಯ ಆಧುನೀಕರಣದ ಪ್ರಕ್ರಿಯೆಯೂ ಸುಲಭವಾಗುತ್ತದೆ.

–ಮಂಜುನಾಥ ಕಡೆಮನೆ, ಶಿಕಾರಿಪುರ

Comments
ಈ ವಿಭಾಗದಿಂದ ಇನ್ನಷ್ಟು
ಎಲ್ಲ ರಂಗಗಳಲ್ಲೂ ಚಿಂತನೆ ನಡೆಯಲಿ

ಕರ್ನಾಟಕದ ನಾಳೆಗಳು
ಎಲ್ಲ ರಂಗಗಳಲ್ಲೂ ಚಿಂತನೆ ನಡೆಯಲಿ

9 Dec, 2016
ಹೆಣ್ಣುಳಿದರೆ ನಾಡಿನ ನಾಳೆಯುಳಿದೀತು

ಕರ್ನಾಟಕದ ನಾಳೆಗಳು
ಹೆಣ್ಣುಳಿದರೆ ನಾಡಿನ ನಾಳೆಯುಳಿದೀತು

1 Dec, 2016
ಕನ್ನಡ ಸಿನಿಮಾದ ನಾಳೆಗಳು; ಚೆಲ್ಲಾಪಿಲ್ಲಿ ಕನಸುಗಳು

ಕರ್ನಾಟಕದ ನಾಳೆಗಳು
ಕನ್ನಡ ಸಿನಿಮಾದ ನಾಳೆಗಳು; ಚೆಲ್ಲಾಪಿಲ್ಲಿ ಕನಸುಗಳು

30 Nov, 2016
ಡಿಸ್ನಿಲ್ಯಾಂಡ್‌ ಕಟ್ಟೋಣ, ಸಿಂಗಪುರ ಮೀರಿ ಬೆಳೆಯೋಣ!

ಕರ್ನಾಟಕದ ನಾಳೆಗಳು
ಡಿಸ್ನಿಲ್ಯಾಂಡ್‌ ಕಟ್ಟೋಣ, ಸಿಂಗಪುರ ಮೀರಿ ಬೆಳೆಯೋಣ!

29 Nov, 2016
ಚೆಂದದ ನಾಳೆಗಳು ಖಂಡಿತ ಬರಲಿವೆ

ಕರ್ನಾಟಕದ ನಾಳೆಗಳು
ಚೆಂದದ ನಾಳೆಗಳು ಖಂಡಿತ ಬರಲಿವೆ

28 Nov, 2016