ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಮೇಲೂ ಸರ್ಕಾರದ ಕಣ್ಣು

ಅಕ್ರಮ ಸಂಪತ್ತು ಸಂಗ್ರಹಣೆ ವಿರುದ್ಧ ಕೇಂದ್ರದ ಕ್ರಮ
Last Updated 14 ನವೆಂಬರ್ 2016, 20:03 IST
ಅಕ್ಷರ ಗಾತ್ರ

ನವದೆಹಲಿ: ಸಂಪತ್ತನ್ನು ಅಕ್ರಮವಾಗಿ ಸಂಗ್ರಹಿಸಿ ಇರಿಸಿಕೊಂಡವರ ಮೇಲೆ ಸರ್ಕಾರ ಕಣ್ಣಿಡಲು ನಿರ್ಧರಿಸಿದೆ. ಇದೇ ಕಾರಣಕ್ಕಾಗಿ ಚಿನ್ನಾಭರಣ ವರ್ತಕರ ವ್ಯವಹಾರದ  ಮೇಲೆ ತೆರಿಗೆ ಇಲಾಖೆ ನಿಗಾ ಇರಿಸಿದೆ.

ಅಕ್ರಮವಾಗಿ ಸಂಪತ್ತು ಸಂಗ್ರಹಿಸಿ ಇರಿಸಿಕೊಂಡರು ತಮ್ಮಲ್ಲಿರುವ ಕಪ್ಪು ಹಣವನ್ನು ಚಿನ್ನದ ರೂಪಕ್ಕೆ ಪರಿವರ್ತಿಸಲು ಮುಂದಾಗಿದ್ದಾರೆ.

ಕಳೆದ ವಾರ ಪ್ರತಿ ಹತ್ತು ಗ್ರಾಂ ಚಿನ್ನದ ಮಾರುಕಟ್ಟೆ ಬೆಲೆ ₹31 ಸಾವಿರ ಇತ್ತು. ಆದರೆ ಕಪ್ಪು ಹಣ ಇರಿಸಿಕೊಂಡವರು ಹತ್ತು ಗ್ರಾಂಗೆ ₹50 ಸಾವಿರದವರೆಗೆ ಪಾವತಿಸಿ ಖರೀದಿ ಮಾಡಿದ್ದಾರೆ. ಹಳೆಯ ನೋಟುಗಳನ್ನು ಶೇ 20–40ರಷ್ಟು ಕಡಿಮೆ ಮೌಲ್ಯಕ್ಕೆ ಚಲಾವಣೆ ಮಾಡಿರುವ ಘಟನೆಗಳೂ ವರದಿಯಾಗಿವೆ.

‘₹ 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಖರೀದಿಗೆ ಪ್ಯಾನ್‌ ಸಂಖ್ಯೆ ಉಲ್ಲೇಖಿಸುವುದು ಕಡ್ಡಾಯ. ಆದರೆ ಇದನ್ನು ತಪ್ಪಿಸುವುದಕ್ಕಾಗಿ ಚಿನ್ನವನ್ನು ₹ 2 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ವಿಭಜಿಸಿ ಮಾರಾಟ ಮಾಡಿದ  ಬಿಲ್‌ ಸೃಷ್ಟಿ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆಗೆ ಒಳಪಡಿಸಲಾಗುವುದು’ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್‌ ಚಂದ್ರ ಹೇಳಿದ್ದಾರೆ.

ಚಲಾವಣೆಯಿಂದ ಹಿಂದಕ್ಕೆ ಪಡೆಯಲಾದ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸುವುದು ಮತ್ತು  ಆ ನೋಟು ಬಳಸಿ ವಸ್ತು ಖರೀದಿ ಎರಡರ ಮೇಲೆಯೂ ನಿಗಾ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT