ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವರ್ಧನೆಗೆ ಬಗೆಬಗೆ ಆ್ಯಪ್‌

Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಆರೋಗ್ಯದಿಂದ ಇರಲು ಎಲ್ಲರೂ ಬಯಸುತ್ತಾರೆ. ಅದಕ್ಕೆಂದೇ ವ್ಯಾಯಾಮ, ಆಹಾರ ಪಥ್ಯೆ, ವೈದ್ಯರ ಸಲಹೆ ಪಾಲಿಸುತ್ತಾರೆ. ಇದಕ್ಕೀಗ ಫಿಟ್‌ಬಿಟ್‌ ಧರಿಸಬೇಕಾಗಿಲ್ಲ. ಕೈಗೆ ಆ್ಯಪಲ್ ವಾಚ್‌ ಕಟ್ಟಿಕೊಳ್ಳಬೇಕಾಗಿಲ್ಲ. ಕೈಯಲ್ಲಿ ಫೋನ್‌ ಒಂದಿದ್ದರೆ ಸಾಕು.  ಇದರಲ್ಲಿನ ಆ್ಯಪ್ ಸಹ ಆರೋಗ್ಯ ಕಾಪಾಡಿಕೊಳ್ಳುವ ಸರ್ವತ್ರ ಸಾಧನವಾಗಿ ಕೆಲಸ ಮಾಡುತ್ತದೆ. ನಾವು ಮಾಡುವ ವ್ಯಾಯಾಮಗಳು, ಯಾವ ರೀತಿ ಮಾಡಬೇಕು, ಏನು ಮಾಡಬೇಕು ಎಂಬ ಮಾಹಿತಿ ನೀಡುತ್ತದೆ. 
 
ಮೊಬೈಲ್‌ ಯುಗದಲ್ಲಿ ಆ್ಯಪ್‌ಗಳದ್ದೇ ಕಾರುಬಾರು. ಎಲ್ಲವೂ ಆ್ಯಪ್‌ಗಳಿಂದಲೇ ಆರಂಭವಾಗಿ ಅವುಗಳಿಂದಲೇ ಮುಗಿ ಯುತ್ತದೆ. ಇನ್ನು, ಆರೋಗ್ಯ ಸಂಬಂಧಿತ ಆ್ಯಪ್‌ಗಳಿಗೇನು ಪ್ಲೇಸ್ಟೋರ್‌ನಲ್ಲಿ ಕೊರತೆ ಇಲ್ಲ. ಅಂಗೈಯಲ್ಲೇ ಎಲ್ಲ ಮಾಹಿತಿ ದೊರೆಯುವಾಗ ಮೊಬೈಲ್‌ ಬಳಕೆದಾರ ಹೆಚ್ಚು ಕಷ್ಟಪಡಬೇಕಾಗಿಲ್ಲ. 
 
**
ಎಂಡೊಮೆಂಡೊ
ಈಗ ಇಂತಹ ಆರೋಗ್ಯ ಆ್ಯಪ್‌ಗೆ ಮತ್ತೊಂದು ಸೇರ್ಪಡೆಯಾಗಿದೆ. ಅದರ ಹೆಸರು Endomondo. ಇದೊಂದು ಐಒಎಸ್ ಮತ್ತು ಆಂಡ್ರಾಯ್ಡ್‌
 ಆ್ಯೊಪ್‌ ಆಗಿದ್ದು,  ನಡಿಗೆ, ಓಡುವುದು, ಬೈಕ್‌ ಸವಾರಿ ಹೀಗೆ ಪ್ರತಿಯೊಂದು ವ್ಯಾಯಾಮಗಳ  ಬಗ್ಗೆ ಮಾಹಿತಿ ನೀಡುತ್ತದೆ.  
 
ಮೊಬೈಲ್ ಪರದೆಯಲ್ಲೇ ಈ ಆ್ಯಪ್‌ ವ್ಯಾಯಾಮಕ್ಕಾಗಿ ಕಳೆದ ಸಮಯ, ಓಡಿದ ದೂರ, ಕ್ಯಾಲೊರಿ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ತಿಳಿಸುತ್ತದೆ. ಜಿಪಿಎಸ್ ಆಧಾರಿತ ಮ್ಯಾಪ್‌ ಬಳಸಿ ಎಲ್ಲಿದ್ದೀರಿ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ   ಕುರಿತು ಮಾಹಿತಿ ನೀಡುತ್ತದೆ. 
 
 ಮ್ಯಾಪ್‌ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯರೊಂದಿಗೆ ಹರಟೆ ಹೊಡೆಯಬಹುದು.  ಅವರಿಗೂ ನಿಮ್ಮೊಂದಿಗೆ ವ್ಯಾಯಾಮ ಮಾಡಲು ಸವಾಲು ಎಸೆಯಬಹುದು. ವಾರದ ವ್ಯಾಯಾಮದ ಪಟ್ಟಿಯನ್ನು ಮಾಡಿಟ್ಟು ಕೊಳ್ಳಬಹುದು. ಇದರಿಂದ ಯಾವುದೇ ದಿನ ಸಮಯ ವ್ಯರ್ಥ ಮಾಡದಂತೆ ಎಚ್ಚರಿಕೆ ವಹಿಸುತ್ತದೆ.  ನೀವೇನಾದರೂ ಓಟಗಾರ ಆಗಿದ್ದರೆ ಇದರಲ್ಲಿನ ಕೋಚಿಂಗ್ ವ್ಯವಸ್ಥೆ  ಪ್ರೋತ್ಸಾಹಿಸುತ್ತದೆ ಮತ್ತು ನಿಮ್ಮ ಓಟದ ಸಾಮರ್ಥ್ಯವನ್ನೂ ಸುಧಾರಿಸುತ್ತದೆ. 
 
**
ಸಿ25ಕೆ
ಕೋಟ್ಯಂತರ ಜನ ಈ  ಆ್ಯಪ್‌ ಮೂಲಕ ತರಬೇತಿ ಪಡೆದಿದ್ದಾರೆ. ಜಾಗಿಂಗ್ ಮಾಡುವುದನ್ನು ಬಿಟ್ಟು ಸೋಫಾ ಮೇಲೆಯೇ ಇರುವವರಿಗೆ ಇದು ಹೇಳಿ ಮಾಡಿಸಿದಂತಿದೆ. ಈ ಆ್ಯಪ್‌ನ ಸಹಾಯದಿಂದ ಎಂಟು ವಾರಗಳಲ್ಲಿ ವ್ಯಕ್ತಿಯೊಬ್ಬ ಐದು ಕಿ.ಮೀ.ದೂರ ಓಡಲು ಪ್ರೇರಣೆ ನೀಡುತ್ತದೆ. 
 
ಸಿ25ಕೆ ತುಂಬಾ ಸರಳವಾಗಿದೆ. ಇದೊಂದು ಆರಂಭಿಕ ಹಂತದ ಆ್ಯಪ್‌. ವ್ಯಾಯಾಮಕ್ಕೆ ವ್ಯಯಿಸಿದ ಸಮಯ ಮತ್ತು ದೂರ ಕ್ರಮಿಸಿದ್ದನ್ನು ಇದು ತೋರಿಸುತ್ತದೆ.   ಇದೆಲ್ಲಕ್ಕಿಂತ ಇದರಲ್ಲಿರುವ ದಿನವಹಿ ಕೋಚಿಂಗ್ ವ್ಯವಸ್ಥೆ. ಉದಾಹರಣೆಗೆ ಮೊದಲ ದಿನ ನೀವು ಐದು ನಿಮಿಷ ನಡಿಗೆ ಆರಂಭಿಸಿದ್ದೀರಿ ಎಂದಾದರೆ ಅದನ್ನು ಸ್ಕ್ರೀನ್‌ನಲ್ಲಿ ತೋರಿಸುತ್ತದೆ. 
 
ಈ ಆ್ಯಪ್‌ನಲ್ಲಿ ಜಾಗಿಂಗ್ ಮಾಡಲು ಮತ್ತು ವೇಗದ ನಡಿಗೆ ವೇಳೆ ಖುಷಿಪಡಿಸಲು ಆಡಿಯೊಗಳಿವೆ. ಇದೂ ಸಹ ಏನನ್ನೂ ಮಾಡಬೇಕು ಎಂಬುದನ್ನು ನೆನಪಿಸುತ್ತದೆ. ‘ಇದೊಂದು ಸರಳವಾದ ಆ್ಯಪ್‌. ಚಾಟಿಂಗ್ ಮೂಲಕ ಓಟಗಾರ ಮತ್ತೊಬ್ಬರೊಂದಿಗೆ ಮಾತ ನಾಡಬಹುದು. ಐಒಎಸ್‌ ಮತ್ತು ಆಂಡ್ರಾಯ್ಡ್‌ ಗೆ ಇದು ಉಚಿತ. ಧ್ವನಿ ಮೂಲಕ ಸಲಹೆ ಮತ್ತು ಸರಳ ಗ್ರಾಫಿಕ್ಸ್‌ಗಳು ಇದರಲ್ಲಿದ್ದು, ಕೆಲವೇ ಸಮಯದಲ್ಲಿ ಮಾಡುವ ವ್ಯಾಯಾಮದ ಮಾಹಿತಿ ನೀಡುತ್ತವೆ. 
 
**
ರಾಕ್‌ ಮೈ ರನ್‌
ಇದೂ ಸಹ ಆಂಡ್ರಾಯ್ಡ್‌ ಮತ್ತು ಐಒಎಸ್‌ಗೆ ಉಚಿತ. ವ್ಯಾಯಾಮ ವೇಳೆ ಸಂಗೀತ ಇಷ್ಟಪಡುವವರಿಗೆ ಇದು ಸೂಕ್ತ. ನೀವು ಯಾವ ರೀತಿಯ ಸಂಗೀತ ಇಷ್ಟಪಡುತ್ತೀರಿ? ಯಾವುದರಿಂದ ಆರಂಭಿಸಲಿ ಎಂದೇ ಆರಂಭವಾಗುತ್ತದೆ.  ಇದರಲ್ಲಿ ಎಲೆಕ್ಟ್ರಾನಿಕ್ ಡಾನ್ಸ್‌ ಸಂಗೀತ, ಪಾಪ್‌, ರಾಕ್ ಸಂಗೀತ,   ಜಾಜ್‌ ಮತ್ತು ಶಾಸ್ತ್ರೀಯ ಸಂಗೀತ ಒಳಗೊಂಡಿದೆ. ಆ್ಯಪ್‌ನಲ್ಲಿ ಪ್ಲೇಲಿಸ್ಟ್ ಮತ್ತು ಹಲವು ಟ್ರ್ಯಾಕ್‌ಗಳಿವೆ. 
 
**
ಕ್ವಿಕ್ ಕಾಲ್‌ 
ಅಮೆರಿಕದ ಖ್ಯಾತ ಮ್ಯೂಸಿಕ್‌ ರಿಯಾಲಿಟಿ ಸ್ಪರ್ಧೆ ‘ಲಿಪ್‌ ಸಿಂಕ್‌ ಬ್ಯಾಟಲ್‌’ನಲ್ಲಿ ಕ್ವಿಕ್‌ ಕಾಲ್ ಆ್ಯಪ್‌ ಬಳಸಲಾಗುತ್ತದೆ. ಇದರಲ್ಲಿ ವಿಡಿಯೊ, ಮೂಕಾಭಿನಯ ಮತ್ತು ನೆಚ್ಚಿನ ಗೀತೆಗಳಿವೆ.  
 
**
ದಿ ನ್ಯೂಯಾರ್ಕ್‌ ಟೈಮ್ಸ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT