ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆ್ಯಪ್‌ಗಳು...

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವ ಆ್ಯಪ್…
ಅಕ್ರಮ ಗಣಿಗಾರಿಕೆ ವಿರುದ್ಧ ನಾಗರಿಕರು ಸುಲಭವಾಗಿ ದೂರ ನೀಡಲು ಅನುಕೂಲವಾಗುವಂತಹ ಆ್ಯಪ್ ಅನ್ನು ಅಭಿವೃದ್ಧಿಪಡಿಸಲು ಕೇಂದ್ರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಂದಾಗಿದೆ. ವಿಪ್ರೊ ಸಂಸ್ಥೆಯ ಸಹಯೋಗದಲ್ಲಿ ಈ ಆ್ಯಪ್  ವಿನ್ಯಾಸ ಮಾಡುತ್ತಿದ್ದು ಇದಕ್ಕೆ ಎಂ.ಐ.ಎಂ. (monitoring illegal mining) ಆ್ಯಪ್ ಎಂದು ಹೆಸರಿಡಲಾಗಿದೆ.

‘ದೇಶದ ಯಾವುದೇ ಮೂಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಅದನ್ನು ಸುಲಭವಾಗಿ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಈ ಆ್ಯಪ್‌ ನೆರವಾಗಲಿದೆ’ ಎಂದು ಕೇಂದ್ರ ಗಣಿ ಇಲಾಖೆಯ ಕಾರ್ಯದರ್ಶಿ ಬಲ್ವಿಂದರ್ ಕುಮಾರ್ ಹೇಳುತ್ತಾರೆ.  ಈಗಾಗಲೇ ಎಂ.ಐ.ಎಂ. ಆ್ಯಪ್ ಅನ್ನು ವಿನ್ಯಾಸ ಮಾಡಲು ವಿಪ್ರೊ ಕಂಪೆನಿಗೆ ವಹಿಸಲಾಗಿದ್ದು ಇನ್ನು ಕೆಲವೇ ದಿನಗಳಲ್ಲಿ  ಮಾರುಕಟ್ಟೆಗೆ ಬರಲಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು  ನಾಗರಿಕರು ತಮ್ಮ ಮೊಬೈಲ್ ಪೋನ್‌ಗಳಿಗೆ ಡೌನ್‌ಲೋಡ್‌ ಮಾಡಿಕೊಂಡು ಅಕ್ರಮ ಗಣಿಗಾರಿಕೆ ವಿರುದ್ಧ ದೂರು ಸಲ್ಲಿಸಬಹುದು ಎಂದು ಬಲ್್ವೀಂದರ್ ಕುಮಾರ್ ಮಾಹಿತಿ ನೀಡುತ್ತಾರೆ.

ಮೊಬೈಲ್ ಫೋನ್‌ಗಳಿಗೆ  ಎಂ.ಐ.ಎಂ. ಅನ್ನು ಡೌನ್‌ಲೋಡ್‌ ಮಾಡಿಕೊಂಡವರು   ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳು ನಡೆಯುತ್ತಿರುವ ಒಂದು ಚಿತ್ರವನ್ನು ತೆಗೆದು ಈ ಆ್ಯಪ್ ನಲ್ಲಿ  ಅಪ್‌ಲೋಡ್‌ ಮಾಡಿದರೆ ಸಾಕು. ಕೂಡಲೇ ಅದು ಯಾವ ರಾಜ್ಯ, ಜಿಲ್ಲೆ ಮತ್ತು ಯಾವ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತದೆ. ಅಧಿಕಾರಿಗಳು ಸಕಾಲದಲ್ಲಿ ಸ್ಥಳಕ್ಕೆ ದಾವಿಸಲು ಮತ್ತು ಅಕ್ರಮ ಗಣಿಗಾರಿಕೆಯನ್ನು ಪತ್ತೆ ಹಚ್ಚಲು ಈ ಆ್ಯಪ್ ತುಂಬಾ ಅನುಕೂಲವಾಗಲಿದೆ. monitoring illegal minig-app

***
ಒತ್ತಡ ಮಾಪನ ಆ್ಯಪ್…

ಇದು ಆ್ಯಪ್‌ಗಳ ಯುಗ!  ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆ್ಯಪ್‌ಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ! ವ್ಯಾಯಾಮ ಮಾಡಲು, ದಿನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು, ಉಪಾಹಾರ ಸೇವಿಸಲು ಮತ್ತು ಆರೋಗ್ಯ ತಪಾಸಣೆಯಲ್ಲೂ ಆ್ಯಪ್ ಗಳು ಬಳಕೆಯಾಗುತ್ತಿವೆ. ಇದೀಗ ನಮ್ಮ ಒತ್ತಡವನ್ನು ಮಾಪನ ಮಾಡುವ ಆ್ಯಪ್ ಕೂಡ ಮಾರುಕಟ್ಟೆಗೆ ಬಂದಿದೆ.

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ಒತ್ತಡವನ್ನು ಮಾಪನ ಮಾಡುವ ‘ನೋ ಮೋರ್‌ ಟೆನ್ಶನ್‌) (No More Tension) ಆ್ಯಪ್ ಅನ್ನು ಪರಿಚಯಿಸಿದೆ. ಆಂಡ್ರಾಯ್ಡ್‌ ಅಪ್ಲಿಕೇಷನ್‌ನಲ್ಲಿ  ಲಭ್ಯವಿರುವ ಈ ಆ್ಯಪ್ ಅನ್ನು ಸಾರ್ವಜನಿಕರು ಗೂಗಲ್ ಪ್ಲೆ ಸ್ಟೋರ್‌ನಿಂದ ಉಚಿತವಾಗಿ  ಪಡೆದುಕೊಳ್ಳಬಹುದು.

ಡಿಜಿಟಲ್ ಇಂಡಿಯಾದ ಒಂದು ಭಾಗವಾಗಿ ಈ ಆ್ಯಪ್್ ವಿನ್ಯಾಸ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ವಿಂಡೋಸ್ ಅಪ್ಲಿಕೇಷನ್ ಸಹ ಬಿಡುಗಡೆಯಾಗಲಿದೆ.  ಸಾರ್ವಜನಿಕರು ಆಸ್ಪತ್ರೆಗೆ ಹೋಗದೆ ತಮ್ಮ ಒತ್ತಡದ ಮಾಹಿತಿಯನ್ನು(ದಿನಕ್ಕೆ ಎರಡು ಬಾರಿ) ‘ಸ್ಟ್ರೆಸ್ ಮೀಟರ್’ ಮೂಲಕ ಪಡೆದುಕೊಳ್ಳಬಹುದು. ಒತ್ತಡ ನಿವಾರಣೆಗಾಗಿ ಮಾಡಬಹುದಾದ ದೈಹಿಕ ವ್ಯಾಯಾಮ, ಯೋಗ,  ಧ್ಯಾನ, ಪಡೆಯಬೇಕಾಗಿರುವ ಚಿಕಿತ್ಸೆ, ಔಷಧೋಪಚಾರಗಳ ವಿವರಗಳು ಇದರಲ್ಲಿ ದೊರೆಯುತ್ತವೆ.
No More Tension-app

***
ಮನರಂಜನೆಗಾಗಿ ಚಿಲ್‌ಎಕ್ಸ್‌ ಆ್ಯಪ್

ಡಿಜಿಟಲ್ ಮಾಧ್ಯಮದಲ್ಲಿ ಮನರಂಜನೆ ಕಾರ್ಯಕ್ರಮಗಳಿಗೆ ಸಾಕಷ್ಟು ಬೇಡಿಕೆ ಇದೆ. ಪ್ರಾದೇಶಿಕ ಭಾಷೆಗಳ ಮನರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಸುಳ್ಳಲ್ಲ. ಹೀಗಾಗಿ ರಿಲಯನ್ಸ್ ಕಂಪೆನಿಯು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ  ಮನರಂಜನೆ ನೀಡುವ ಆ್ಯಪ್ ಅಭಿವೃದ್ಧಿಪಡಿಸಿದ್ದು ಅದಕ್ಕೆ ‘ಚಿಲ್‌ಎಕ್ಸ್‌’ (Chillx) ಎಂದು ಹೆಸರಿಡಲಾಗಿದೆ. ಈ ಆ್ಯಪ್ ಮೂಲಕ ಗ್ರಾಹಕರು ತಮ್ಮ ಇಷ್ಟದ ಭಾಷೆಯಲ್ಲೇ ಸಂಗೀತ, ಗೇಮ್‌, ಹಾಡುಗಳು, ಕಿರು ಚಿತ್ರಗಳು, ಸಾಕ್ಷ್ಯ ಚಿತ್ರಗಳು,  ವಿಡಿಯೊಗಳನ್ನು ಯಾವುದೇ ಅಡೆ ತಡೆ ಇಲ್ಲದೆ ವೀಕ್ಷಿಸಬಹುದು ಎನ್ನುತ್ತಾರೆ ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ನ ಸಿಇಒ ಶ್ವೇತಾ ಅಗ್ನಿಹೋತ್ರಿ.  chillx- app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT