ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಷಾ ಇನ್ನು ‘ಮೋಹಿನಿ’

ಕಾಲಿವುಡ್‌
Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ತ್ರಿಷಾ ಇನ್ನು ‘ಮೋಹಿನಿ’ ಚಿತ್ರ ನಿರ್ದೇಶಕ ಮಾದೇಶ್ ನಿರ್ದೇಶನದ ಹೊಸ ಸಿನಿಮಾದಲ್ಲಿ ತಮಿಳು ನಟಿ ತ್ರಿಷಾ ‘ಮೋಹಿನಿ’ಯಾಗಿ ಕಾಡಲಿದ್ದಾಳೆ. ಹೌದು, ‘ಮೋಹಿನಿ’ ಸಿನಿಮಾದಲ್ಲಿ ತ್ರಿಷಾಳದ್ದು ವಾಸ್ತುಶಿಲ್ಪಿ ಪಾತ್ರವಾಗಿದ್ದರೂ  ಪೋಸ್ಟರ್‌ನಲ್ಲಿ ಆಕೆಯನ್ನು ದೇವಿ ವೇಷದಲ್ಲಿ ಚಿತ್ರಿಸಲಾಗಿದೆ.

ಚಿತ್ರದಲ್ಲಿ ತ್ರಿಷಾ ದೇವಿವೇಷದಲ್ಲಿ ಖಳನಾಯಕನ ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದಾರೆ.  ಹಾಗಾಗಿ, ಪೋಸ್ಟರ್‌ನಲ್ಲಿ ಆಯುಧ ಹಿಡಿದಿರುವ  ತ್ರಿಷಾ ನಿಮಗೆ ಕಾಣುತ್ತಾರೆ. ಆದರೆ, ‘ಮೋಹಿನಿ’ ಅಪ್ಪಟ ಹಾರರ್ ಸಿನಿಮಾ ಎನ್ನುತ್ತಾರೆ ನಿರ್ಮಾಪಕರು.

‘ಮೋಹಿನಿ’ಯಾಗಿ ನಟಿಸುತ್ತಿರುವ ಬಗ್ಗೆ ತ್ರಿಷಾ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನೂ ಬಾಕಿ ಇದ್ದು, ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT