ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಸಾವಿರ ನೌಕರರನ್ನು ಕೆಲಸದಿಂದ ಕಿತ್ತು ಹಾಕಿದ ಎಲ್‌ ಆಂಡ್‌ ಟಿ ಕಂಪೆನಿ

Last Updated 24 ನವೆಂಬರ್ 2016, 12:11 IST
ಅಕ್ಷರ ಗಾತ್ರ

ನವದೆಹಲಿ:  ಎಂಜಿನಿಯರಿಂಗ್ ವಲಯದ ದೈತ್ಯ ಕಂಪೆನಿ ಲಾರ್ಸನ್ ಅಂಡ್ ಟುಬ್ರೊ (ಎಲ್‌ ಆಂಡ್‌ ಟಿ) ಕಳೆದ ಆರು ತಿಂಗಳಲ್ಲಿ 14 ಸಾವಿರ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.

ಕಳೆದ ಏಪ್ರಿಲ್‌ ತಿಂಗಳಿಂದ ಸೆಪ್ಟೆಂಬರ್‌ವರೆಗೂ ಸುಮಾರು 14 ಸಾವಿರ ನೌಕರರನ್ನು  ತೆಗೆದು ಹಾಕಲಾಗಿದೆ.   ಈ ಬೃಹತ್‌ ಉದ್ಯೋಗ ಕಡಿತಕ್ಕೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ಕಂಪೆನಿಯ ಸಿಇಒ ಶಂಕರ್‌ ರಾಮನ್‌ ತಿಳಿಸಿದ್ದಾರೆ.

ಕಂಪೆನಿಯ ಭವಿಷ್ಯದ ಬೆಳವಣಿಗೆಗಾಗಿ ಈ ಉದ್ಯೋಗ ಕಡಿತ ಮಾಡುವುದು ಅನಿವಾರ್ಯವಾಗಿತ್ತು ಎಂದು ಶಂಕರ್‌ ರಾಮನ್‌ ತಿಳಿಸಿದ್ದಾರೆ.

ಕಂಪೆನಿಯಲ್ಲಿ ಪ್ರಸ್ತುತ 1.2 ಲಕ್ಷ ಜನ ನೌಕರರು ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT