ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ, ರಿಯಲ್‌ ನೋಟ

Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಉಪಯುಕ್ತ ನಡೆ
ಕೇಂದ್ರ ಸರ್ಕಾರದ ರಿಯಲ್‌ ಎಸ್ಟೇಟ್ ವಹಿವಾಟು ನಿಯಂತ್ರಣ ಮಸೂದೆ, ₹500, ₹1000 ಮುಖಬೆಲೆಯ ನೋಟ್‌ಗಳ ನಿಷೇಧ ನಿರ್ಧಾರವನ್ನು ಬ್ರಿಗೇಡ್ ಗ್ರೂಪ್ ಸ್ವಾಗತಿಸುತ್ತದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾರದರ್ಶಕತೆ ಬರಲು ಈ ನಿರ್ಧಾರ ನೆರವಾಗಲಿದೆ. ಅಂತರರಾಷ್ಟ್ರೀಯ ಹೂಡಿಕೆದಾರರಲ್ಲಿ ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚಾಗಲು, ಉನ್ನತ ಮಟ್ಟದ ಆಡಳಿತ ನೀಡಲು ಇಂತಹ ಕ್ರಮಗಳು ಸಾಕಷ್ಟು ಉಪಯೋಗವಾಗಲಿವೆ.
-ಎಂ.ಆರ್.ಜೈಶಂಕರ್
ಬ್ರಿಗೇಡ್ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ

*
ಗ್ರಾಹಕರಲ್ಲಿ ಹೊಸ ನಿರೀಕ್ಷೆ
ಕೇಂದ್ರ ಸರ್ಕಾರದ ಈ ನಡೆಯಿಂದ ರಿಯಲ್‌ ಎಸ್ಟೇಟ್‌ ಲೋಕದಲ್ಲಿ ತಲ್ಲಣ ಉಂಟಾಗಿರುವುದಂತೂ ಸತ್ಯ. ಕೆಲವರಲ್ಲಿ ಭಯ ಹುಟ್ಟಿಕೊಂಡಿದ್ದರೂ ಮನೆ ಕೊಂಡುಕೊಳ್ಳುವ ಬಯಕೆ ಇರುವ ಅನೇಕರಿಗೆ ನಿರೀಕ್ಷೆಯ ಗಾಳಿ ಬೀಸಿದಂತಾಗಿದೆ. ಅಲ್ಲದೆ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಮುಂದೊಂದು ದಿನ ಸಹಾಯಕ್ಕೆ ಬರುತ್ತದೆ ಎನ್ನುವ ನಂಬಿಕೆ ಜನರಲ್ಲಿ ದುಪ್ಪಟ್ಟಾಗಿದೆ.

ಈ ಯೋಜನೆ ಜಾರಿಯಾಗುವುದಕ್ಕೂ ಮುಂಚೆಯೇ ಪ್ರಾಥಮಿಕ ವಸತಿ ಮಾರುಕಟ್ಟೆಗಳು ಗೃಹಸಾಲ ಸುಲಭವಾಗಿ ಸಿಗುವಂತೆ ಮಾಡಿದ್ದವು. ಹೀಗಾಗಿ ವಸತಿಗೆ ಸಂಬಂಧಿಸಿದ ಮಾರುಕಟ್ಟೆಯ ವಾರ್ಷಿಕ ಆದಾಯ ದರ (CAGR)ದಲ್ಲಿ ಶೇ19ರಷ್ಟು ಏರಿಕೆ ಕಂಡಿದೆ.

ಇನ್ನು ಮುಂದೆ ಬಹುತೇಕ ಹಣಕಾಸು ವ್ಯವಹಾರ ಬ್ಯಾಂಕ್‌ ಮೂಲಕವೇ ನಡೆಯಲಿದೆ. ಹಣದುಬ್ಬರವು ಏರಿಳಿತದ ಹಂತವನ್ನು ದಾಟಿ, ಸ್ಥಿರತೆಯತ್ತ ದಾಪುಗಾಲು ಇರಿಸಲಿದೆ. ಇಷ್ಟು ವರ್ಷಗಳ ಕಾಲ ಬಡ್ಡಿ ದರವನ್ನು ಏರಿಸಿದ್ದ ಆರ್‌ಬಿಐ ಮುಂದಿನ ದಿನಗಳಲ್ಲಿ ಬಡ್ಡಿದರವನ್ನು ಕಡಿತಗೊಳಿಸಲಿದೆ.
ರೇರಾ ಹಾಗೂ ನೋಟು ರದ್ದತಿ ಎರಡೂ ಜಾರಿ ಆಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹಾಗೂ ರಿಯಲ್‌ ಎಸ್ಟೇಟ್‌ ವ್ಯವಹಾರಗಳ ನಡುವೆ ಹೆಚ್ಚಿನ ಪಾರದರ್ಶಕತೆ ಬರಲಿದೆ.
-ಬ್ರೋಟಿನ್‌ ಬ್ಯಾನರ್ಜಿ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಟಾಟಾ ಹೌಸಿಂಗ್‌ ಡೆವಲಪ್‌ಮೆಂಟ್‌ ಕಂಪೆನಿ ಲಿಮಿಟೆಡ್‌

*
ದುಬೈನತ್ತ ಕಣ್ಣು
ಪ್ರಧಾನಿ ನರೇಂದ್ರ ಮೋದಿ  ₹500 ಹಾಗೂ ₹1000 ಮುಖಬೆಲೆಯ ನೋಟುಗಳ ರದ್ದತಿ ಘೋಷಿಸಿದ ನಂತರ ಅನೇಕರು ವಿದ್ಯುನ್ಮಾನ ವಹಿವಾಟಿನತ್ತ ಗಮನ ಹರಿಸುತ್ತಿದ್ದಾರೆ. ಇದರಿಂದಾಗಿ ಪ್ಲಾಸ್ಟಿಕ್ ಹಣದ ಬಳಕೆ ಹೆಚ್ಚುತ್ತಿದೆ. ಇದು ಆರ್ಥಿಕತೆಯ ಮೇಲೆ ಹೆಚ್ಚಿನ ಪ್ರಭಾವ ಬೀರಲಿದ್ದು ಮುಂದಿನ ವರ್ಷದ ಜಿಡಿಪಿ (ದೇಶೀ ಉತ್ಪನ್ನ) ಅಂಕಿಅಂಶಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.

ಕೆಲ ಭಾರತೀಯರು ದುಬೈನಲ್ಲಿ ಆಸ್ತಿಗಳ ಮೇಲೆ ಹೂಡಿಕೆ ಮಾಡುವ ಬಗ್ಗೆ ಆಲೋಚಿಸುತ್ತಿದ್ದಾರೆ. ತೆರಿಗೆ ರಿಯಾಯಿತಿ ಪಡೆಯುವ ಕಾರಣದಿಂದ ಅನೇಕರು ತೆರಿಗೆ ಮುಕ್ತ ಆಸ್ತಿಗಳ ಹೂಡಿಕೆ ಬಗೆಗೆ ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ದುಬೈನತ್ತ ಅನೇಕರ ಚಿತ್ತ ವಾಲಿದ್ದು, ಎರಡನೆಯ ಮನೆ ಖರೀದಿಸುವವರಿಗೆ ಉತ್ತಮ ಲಾಭವಾಗಲಿದೆ.

ದುಬೈನಲ್ಲಿ ಶೋಭಾ ಹಾರ್ಟ್‌ಲ್ಯಾಂಡ್‌ ನಿರ್ವಹಿಸುತ್ತಿರುವ ಎರಡು ಬೆಡ್‌ರೂಂ ಅಪಾರ್ಟ್‌ಮೆಂಟ್‌ ಪ್ರತಿ ತಿಂಗಳೂ ₹2.3 ಲಕ್ಷಕ್ಕೂ ಹೆಚ್ಚು ತೆರಿಗೆ ಮುಕ್ತ ಬಾಡಿಗೆಯ ಆದಾಯ, ಜೊತೆಗೆ ಶೇ 20-30 ವಾರ್ಷಿಕ ಬಂಡವಾಳ ಮೌಲ್ಯವೃದ್ಧಿಯನ್ನೂ ನೀಡುವ ಅಂದಾಜು ಮಾಡಲಾಗಿದೆ. ಹೊಸ ನಿಯಮವು ರಿಯಲ್‌ ಎಸ್ಟೇಟ್‌ ಲೋಕದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಲಿದೆ.
-ಪಿಎನ್‌ಸಿ ಮೆನನ್
ಶೋಭಾ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT