ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟಕಿಯಲ್ಲಿ ಹೂಕುಂಡಗಳು

ಕೈತೋಟ
Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಲಂಕಾರಿಕ ಗಿಡಗಳನ್ನು ಬೆಳೆಸಲು ಮನೆ ಮುಂದೆ ಜಾಗಬೇಕು. ಕಡೇ ಪಕ್ಷ ಬಾಲ್ಕನಿಯಾದರೂ ಇರಬೇಕು. ಬಾಡಿಗೆ ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಇರುವವರು  ಗಿಡಗಳನ್ನು ಬೆಳೆಸುವುದು ಹೇಗೆ ಎಂಬುದು ಅನೇಕ ಮಹಿಳೆಯರ ಚಿಂತೆ. ಪೆಟ್ಟಿಗೆಯಂಥ ಮನೆಗಳಲ್ಲಿ  ಮನೆ ಸಾಮಾನುಗಳನ್ನು ಇಡಲು ಜಾಗದ ಕೊರತೆ ಇರುವಾಗ ಕುಂಡಗಳನ್ನು ಎಲ್ಲಿ ಇಡುವುದು ಎಂಬ ಚಿಂತೆ ಬೇಡ.

ಅಪಾರ್ಟ್‌ಮೆಂಟ್‌ ಇರಲಿ, ಪುಟ್ಟ ಮನೆ ಇರಲಿ ನೆಲದಲ್ಲಿ ಜಾಗವಿಲ್ಲದಿದ್ದರೇನಂತೆ ಬಾಲ್ಕನಿಯ ಕಿಟಕಿಗಳಿಗೆ ನೇತು ಹಾಕಬಹುದಾದ ಹೂಕುಂಡಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪ್ಲಾಸ್ಟಿಕ್‌ ಕುಂಡಗಳು ಬೇಕಾದ ಬಣ್ಣ, ಆಕಾರ, ಗಾತ್ರಗಳಲ್ಲಿ ಲಭ್ಯವಿವೆ.

ಮನೆಯ ಒಳಗೆ ಕೋಣೆಯ ಮೂಲೆಗಳಲ್ಲಿ, ಟಿಪಾಯಿ, ಡೈನಿಂಗ್‌ ಟೇಬಲ್‌ಗಳ ಮೇಲೆ ಇಡಬಹುದಾದ ಆಕರ್ಷಕ ಮೆಟಲ್, ಸೆರಾಮಿಕ್‌ ಮತ್ತು ಮಣ್ಣಿನ ಕುಂಡಗಳೂ ಸಿಗುತ್ತಿವೆ.ಇದರ ಜೊತೆಗೆ ಬೋನ್ಸಾಯಿ ಅಲ್ಲದಿದ್ದರೂ ಅದೇ ಮಾದರಿಯಲ್ಲಿ  ಪುಟ್ಟ ಕುಂಡಗಳಲ್ಲಿ ಬೆಳೆಸಬಹುದಾದ  ಹತ್ತಾರು ಬಗೆಯ ಒಳಾಂಗಣ ಸಸ್ಯಗಳೂ ಸಿಗುತ್ತಿವೆ.

ಆನ್‌ಲೈನ್‌ನಲ್ಲೂ ಲಭ್ಯ
trustbasket.com ಎಂಬ ಆನ್‌ಲೈನ್‌ ಸ್ಟೋರ್‌ನಲ್ಲಿ ನೂರಾರು ಬಗೆಯ ಕುಂಡಗಳು ಇವೆ. ಆಕರ್ಷಕ ಗಾಢ ಬಣ್ಣಗಳ ಚಿತ್ತಾರವಿರುವ ಕುಂಡಗಳು ಮನಸಿಗೆ ಮುದ ನೀಡುವುದಲ್ಲದೆ ಮನೆಯ  ಅಂದವನ್ನು ಹೆಚ್ಚಿಸುವಂತಿವೆ.

ಅಪಾರ್ಟ್‌ಮೆಂಟ್‌ ಬಾಲ್ಕನಿಗಳಲ್ಲಿ ಸರಳುಗಳಿಗೆ ನೇತು ಹಾಕುವ ಪ್ಲಾಸ್ಟಿಕ್‌ ಮತ್ತು ಮೆಟಲ್‌ ಕುಂಡಗಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿವೆ. ಗೋಡೆಗಳಿಗೆ ತೂಗು ಹಾಕುವ ಕುಂಡಗಳು ಕಬ್ಬಿಣದ ಹ್ಯಾಂಗಿಂಗ್‌ನಿಂದ ಕೂಡಿವೆ. 

ಇನ್ನು ಉದ್ಯಾನದ ಅಂದ ಹೆಚ್ಚಿಸುವ ಮಣ್ಣಿನ ಕುಂಡಗಳು ವಿವಿಧ ಆಕಾರಗಳಲ್ಲಿ ಅವತರಿಸಿವೆ. ಮನುಷ್ಯನ ಕಾಲು, ತಲೆ, ಆನೆ, ನಾಯಿ, ಬಾತುಕೋಳಿ, ಕುರಿಯ ಆಕಾರಗಳಲ್ಲಿ ಲಭ್ಯವಿವೆ.  ಹಸಿರು ಹುಲ್ಲಿನ ಮಧ್ಯೆ ಈ ಕೆಂಬಣ್ಣದ ಕುಂಡಗಳನ್ನು ಬಣ್ಣದ ಹೂಗಳನ್ನು ಬೆಳೆಸಿದರೆ ಉದ್ಯಾನದ ತುಂಬ ಮುದ್ದಾದ ಪ್ರಾಣಿಗಳು ನೆಲೆಸಿದಂತೆ ಭಾಸವಾಗಲಿದೆ. 

ಟ್ರಸ್ಟ್‌ಬಿನ್‌
ಟ್ರಸ್ಟ್‌ ಬಾಸ್ಕೆಟ್‌ ವೆಬ್‌ ಸ್ಟೋರ್‌ ಕುಂಡಗಳ ಜೊತೆಗೆ ‘ಟ್ರಸ್ಟ್‌ಬಿನ್‌– ಇಂಡೋರ್‌ ಕಂಪೋಸ್ಟರ್‌ ಕಿಟ್‌’  ಹೆಸರಿನ ಗೊಬ್ಬರ ತಯಾರಿಸುವ ಬಕೆಟ್‌ಗಳನ್ನು ಪರಿಚಯಿಸಿದೆ. ಮನೆಯ ಹಸಿ  ತ್ಯಾಜ್ಯವನ್ನು ಈ ಬಕೆಟ್‌ನಲ್ಲಿ ಇಟ್ಟು ಗೊಬ್ಬರ ಮಾಡುವ ವಿವಿಧ ಹಂತಗಳ ಮಾಹಿತಿಯನ್ನೂ ನೀಡಿದೆ. ಗೊಬ್ಬರ ತಯಾರಿಸಲು ಬಳಸುವ ಪುಡಿ ಕಂಪೋಸ್ಟ್‌ ಮೇಕರ್‌ ಅನ್ನು ನೀಡುತ್ತಿದೆ.

ಟ್ರಸ್ಟ್‌ಬಿನ್‌ ಬೆಲೆ ₹1000 ಇದ್ದು, 500 ಗ್ರಾಂನ ಕಂಪೋಸ್ಟ್‌ ಮೇಕರ್‌ ಪುಡಿಯ ಪ್ಯಾಕ್‌ ದರ  ₹149 ಇದೆ. ಈ ವೆಬ್‌ಸೈಟಿನಲ್ಲಿ ಮನೆಯೊಳಗೆ ಅಡುಗೆಗೆ ಅಗತ್ಯವಿರುವ ಸೊಪ್ಪುಗಳನ್ನು ಬೆಳೆಸುವ ಬಗ್ಗೆ ಮಾಹಿತಿ ಇದೆ. ಮೆಂತೆ ಕಾಳನ್ನು ಮೊಳಕೆ ಬರಿಸಿ ಕುಂಡಗಳಲ್ಲಿ ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ.

ಕುಂಡಗಳಲ್ಲಿ ಕೊತ್ತಂಬರಿ ಸೊಪ್ಪು, ಕ್ಯಾರೆಟ್‌ ಬೆಳೆಯುವ ವಿಧಾನವನ್ನು ತಿಳಿಸಲಾಗಿದೆ. ಬಾಳೆ ಹಣ್ಣಿನ ಸಿಪ್ಪೆ ಶಿಲೀಂಧ್ರ (ಫಂಗಸ್‌) ನಿವಾರಕ. ಇದರಿಂದ ಫಲವತ್ತಾದ ಗೊಬ್ಬರ ತಯಾರಿಸಬಹುದು  ಎಂಬ ಮಾಹಿತಿ ನೀಡಿದ್ದಾರೆ. ಇದೇ ಆನ್‌ಲೈನ್‌ ಸ್ಟೋರ್‌ ಕುಂಡದಲ್ಲಿ ಬೆಳೆಸಬಹುದಾದ ಹೂ, ತರಕಾರಿಯ ಬೀಜಗಳನ್ನೂ ಪೂರೈಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT