ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಪಾತ್ರ ದೊಡ್ಡದು: ಎಸ್‌.ಜಿ. ಸಿದ್ದರಾಮಯ್ಯ

Last Updated 2 ಡಿಸೆಂಬರ್ 2016, 20:04 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಬಹುತ್ವಗಳನ್ನು ಸಂರಕ್ಷಿಸುವಲ್ಲಿ ರಂಗಭೂಮಿಯ ಪಾತ್ರ ದೊಡ್ಡದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರೀಯ ನಾಟಕ ಶಾಲೆ ನಗರದ ಗುರುನಾನಕ್‌ ಭವನದಲ್ಲಿ ಆಯೋಜಿಸಿ ರುವ ಐದು ದಿನಗಳ ‘ರಾಷ್ಟ್ರೀಯ ಪೂರ್ವ– ಉತ್ತರ ರಂಗೋತ್ಸವ’ ಉದ್ಘಾ ಟಿಸಿ ಅವರು ಮಾತನಾಡಿದರು.

ಸಾಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆ ಯನ್ನು ರಕ್ಷಿಸುವ ಶಕ್ತಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಇದೆ. ಪೂರ್ವ–ಉತ್ತರದ ರಂಗೋತ್ಸ ವವೇ ಅದಕ್ಕೆ ಸಾಕ್ಷಿ ಎಂದರು.

ಧರ್ಮ ಮತ್ತು ರಾಜಕೀಯದ ಹೆಸರಿ ನಲ್ಲಿ ದೇಶವನ್ನು ವಿಭಾಗಿಸುವ ಕೆಲಸ  ಇಂದು ನಡೆಯುತ್ತಿದೆ. ಈ ಸಂದರ್ಭದಲ್ಲಿ ರಂಗಭೂಮಿ ಮಾತ್ರ ಏಕತೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ  ಮಾತನಾಡಿ, ಪೂರ್ವ ಮತ್ತು ಉತ್ತರ ರಾಜ್ಯಗಳ ಜನರ ಸವಾಲುಗಳು ಭಿನ್ನ ವಾದವು. ಪ್ರಭುತ್ವ ಸಣ್ಣ ಸಮುದಾಯ ಗಳನ್ನು ಉಸಿರುಕಟ್ಟುವ ವಾತಾವರಣ ದಲ್ಲಿ ಇಟ್ಟಿರುತ್ತದೆ. ಅದನ್ನು ರಂಗದ ಮೇಲೆ ತರುವ ಕಲಾವಿದರ ಪ್ರಯತ್ನ ದೊಡ್ಡದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT