ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ₹ 6121 ಕೋಟಿ ಅಮೆರಿಕ ನೆರವು

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ :  ಅಮೆರಿಕದ ಜನಪ್ರತಿನಿಧಿಗಳ ಸಭೆ ರಕ್ಷಣಾ ಮಸೂದೆ ಸಿದ್ಧಪಡಿಸಿದ್ದು, ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ಇತರೆ ಸಹಕಾರ
ನೀಡಲು ಸುಮಾರು ₹ 6121 ಕೋಟಿ ಮೀಸಲಿಟ್ಟಿದೆ.

ಮಸೂದೆಯನ್ನು ಮುಂದಿನವಾರ ಸಂಸತ್ತಿನಲ್ಲಿ ಮತಕ್ಕೆ ಹಾಕಲಾಗುವುದು. ಮಸೂದೆ ಬಗ್ಗೆ ಸಹಮತವಿರುವ ಕಾರಣ ವಿರೋಧ ವ್ಯಕ್ತವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಭಯೋತ್ಪಾದನಾ ಸಂಘಟನೆ ಹಖ್ಖಾನಿ ಜಾಲದ ವಿರುದ್ಧ ಪಾಕಿಸ್ತಾನವು ಕೈಗೊಳ್ಳುವ ಪರಿಣಾಮಕಾರಿ ಕ್ರಮ ಆಧರಿಸಿ ರಕ್ಷಣಾ ಸಚಿವಾಲಯ ಪ್ರಮಾಣಪತ್ರ ನೀಡಲಿದೆ. ಈ ಪ್ರಮಾಣಪತ್ರ ಆಧರಿಸಿಯೇ ಪಾಕಿಸ್ತಾನಕ್ಕೆ ಹಣಕಾಸು ನೆರವು ಸಿಗಲಿದೆ.

ಅಮೆರಿಕದ ರಕ್ಷಣಾ ಸಚಿವ ಆಶ್ಟನ್‌ ಕಾರ್ಟರ್‌ ಅವರು ಪಾಕಿಸ್ತಾನದ ಪರವಾಗಿ ಪ್ರಮಾಣಪತ್ರ ನೀಡಲು ನಿರಾಕರಿಸಿದ ಕಾರಣ ಪ್ರಸ್ತುತ ಸಾಲಿನಲ್ಲಿ ಸುಮಾರು ₹ 2,040 ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT