ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಅಲೆಪ್ಪೊ ಸಿರಿಯಾದ ವಶ

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಲೆಪ್ಪೊ (ಸಿರಿಯಾ) (ಎಪಿಎಫ್‌): ಬಂಡುಕೋರರ ಪ್ರಬಲ ಹಿಡಿತದಲ್ಲಿರುವ ಪೂರ್ವ ಅಲೆಪ್ಪೊ ಪ್ರದೇಶವನ್ನು ಮರು ವಶಕ್ಕೆ ಪಡೆಯಲು ಭಾರಿ ಪ್ರಮಾಣದಲ್ಲಿ ದಾಳಿಯನ್ನು ಮುಂದುವರಿಸಿರುವ ಸಿರಿಯಾ ಸೇನೆಯು ಈಗಾಗಲೇ ಅರ್ಧದಷ್ಟು ಭಾಗವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಅಧ್ಯಕ್ಷ ಬಷಾರ್‌ ಅಲ್‌–ಅಸ್ಸಾದ್ ಆಡಳಿತ ಆರಂಭವಾದ ಬಳಿಕ ನಗರದಿಂದ ಲಕ್ಷಾಂತರ ನಾಗರಿಕರು  ವಲಸೆ ಹೋಗುತ್ತಿದ್ದಾರೆ.

ಹಗಲು–ರಾತ್ರಿ ಭಾರಿ ಪ್ರಮಾಣದಲ್ಲಿ  ಘರ್ಷಣೆ ನಡೆದು ತಾರಿಖ್‌ ಅಲ್‌–ಬಾಬ್‌ ಜಿಲ್ಲೆಯನ್ನು ಸರ್ಕಾರಿ ಪಡೆಗಳು ವಶಕ್ಕೆ ಪಡೆದವು ಎಂದು ಮಾನವ ಹಕ್ಕುಗಳ ಕುರಿತ ಸಿರಿಯಾದ ವೀಕ್ಷಣಾಲಯ ತಿಳಿಸಿದೆ.

ಬ್ರಿಟನ್‌ ಮೂಲದ ನಿಯಂತ್ರಣ ಘಟಕದ ಪ್ರಕಾರ, 2012ರ ಮಧ್ಯ ಭಾಗದಲ್ಲಿ ಬಂಡುಕೋರರ ವಶದಲ್ಲಿದ್ದ ಅಲೆಪ್ಪೊ ನಗರದ ಪೂರ್ವ ಭಾಗದಲ್ಲಿನ ಶೇ 60ರಷ್ಟು ಪ್ರದೇಶವನ್ನು ಸರ್ಕಾರ ಮರು ವಶಕ್ಕೆ ಪಡೆದಿದೆ.

2011ರ ಮಾರ್ಚ್‌ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆ, ಸಂಘರ್ಷ ಆರಂಭವಾದ ಬಳಿಕ ಮೂರು ಲಕ್ಷಕ್ಕೂ ಅಧಿಕ ಮಂದಿ ಹತ್ಯೆಗೀಡಾಗಿದ್ದಾರೆ ಮತ್ತು ದೇಶದ ಅರ್ಧದಷ್ಟು ಜನರು ಸ್ಥಳಾಂತರ ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT