ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಜರ್ಮನಿಯ ಫ್ಯಾಬಿಯಾನ್‌

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿ ಕಣಿವೆಯಲ್ಲಿ ‘ನಾದ’ ಚಂಡಮಾರುತ ಅಬ್ಬರಿಸದಿ ದ್ದರೂ ಅಷ್ಟೇ ವೇಗದಲ್ಲಿ ಕಾರು ಚಲಾ ಯಿಸಿದ ಜರ್ಮನಿಯ ಚಾಲಕ ಫ್ಯಾಬಿ ಯಾನ್‌–ಸಹಚಾಲಕ ಫ್ರಾಂಕ್‌ ಕ್ರಿಶ್ಚಿಯನ್‌ ಇಲ್ಲಿ ನಡೆಯುತ್ತಿರುವ ಎಪಿಆರ್‌ಸಿ ರ‍್ಯಾಲಿ 6ನೇ ಸುತ್ತಿನ ಸ್ಪರ್ಧೆಯ ಮೊದಲ ದಿನದ ಗೌರವಕ್ಕೆ ಪಾತ್ರರಾದರು.

ನಗರ ಹೊರವಲಯದ ಅಂಬರ್‌ ವ್ಯಾಲಿ ವಸತಿ ಶಾಲೆಯ ಕ್ಯಾಂಪಸ್‌ನಲ್ಲಿ ಶನಿವಾರ ಕಾಫಿ ಡೇ ಗ್ಲೋಬಲ್‌ ಪ್ರಾಯೋಜಕತ್ವದಲ್ಲಿ ನಡೆದ ಪ್ರೇಕ್ಷಕ ಕೇಂದ್ರಿತ ಸೂಪರ್ ಸ್ಪೆಷಲ್‌ ಸ್ಟೇಜ್‌ ಸ್ಪರ್ಧೆಯ 2.12 ಕಿಲೋ ಮೀಟರ್‌ ಅಂಕುಡೊಂಕಿನ ಮಾರ್ಗವನ್ನು ಕೇವಲ 2 ನಿಮಿಷ, 17.8 ಸೆಕೆಂಡ್‌ಗಳಲ್ಲಿ ಕ್ರಮಿಸಿ ವೇಗದ ಚಾಲಕರೆನಿಸಿದರು.

ಶುಕ್ರವಾರವಷ್ಟೇ 34ನೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಎಪಿಆರ್‌ಸಿ ಚಾಂಪಿಯನ್‌ ಚಾಲಕ ದೆಹಲಿಯ ಗೌರವ್‌ ಗಿಲ್‌(ಸಹ ಚಾಲಕ ಗ್ಲೇನ್‌ ಮೆಕ್ನೀಲ್‌) ಕೇವಲ 1 ಸೆಕೆಂಡ್‌ ಹಿನ್ನಡೆ ಕಂಡರು. ಎರಡನೇ ಸ್ಥಾನಕ್ಕೆ ತೃಪ್ತಿಪ ಟ್ಟರು. ಜಪಾನಿನ ಯುಯ ಸುಮಿಯಮ ಮತ್ತು ಸಹ ಚಾಲಕ ಟಕಹಿರೊ ಯಸುಹಿ ಜೋಡಿ ತೃತೀಯ ಸ್ಥಾನ ಪಡೆದರು.

10 ಸಾವಿರಕ್ಕೂ ಹೆಚ್ಚಿದ್ದ ಪ್ರೇಕ್ಷಕರು, ಎಂಆರ್‌ಎಫ್‌ ತಂಡದ ಫ್ಯಾಬಿಯನ್‌ ಚಾಲನಾ ಕೌಶಲ್ಯಕ್ಕೆ ತಲೆದೂಗಿದರು. ಇದೇ ಮೊದಲ ಬಾರಿಗೆ ಕಾಫಿ ಕಣಿವೆ ಯಲ್ಲಿ ಕಾರು ಚಲಾಯಿಸಿದ ಯುವ ಚಾಲಕ ಫ್ಯಾಬಿಯಾನ್‌ ದಿಢೀರ್‌ ತಿರುವುಗಳಲ್ಲಿ ಕಾರು ನಿಯಂತ್ರಿಸುತ್ತಿದ್ದ ಪರಿ ಪ್ರೇಕ್ಷಕರನ್ನು ಮೋಡಿ ಮಾಡಿತು. 

ಲ್ಯಾಪ್‌ ಪೂರ್ಣಗೊಳಿಸಿ ಕಾರಿನಿಂದ ಇಳಿದು ಬಂದ ಫ್ಯಾಬಿಯಾನ್‌ ಪ್ರೇಕ್ಷಕರ ಸಂಖ್ಯೆ ನೋಡಿ ಅಚ್ಚರಿಗೊಂಡರು. ತಮ್ಮನ್ನು ಅಭಿಮಾನದಿಂದ ಸುತ್ತುವರಿದ ಪ್ರೇಕ್ಷಕರ ಗುಂಪಿನಿಂದ ಹೊರಬರಲು ಫ್ಯಾಬಿಯಾನ್‌ ಮತ್ತು ಫ್ರಾಂಕ್‌ ಕ್ರಿಶ್ಚಿಯನ್‌ ಹರಸಾಹಸಪಟ್ಟರು.

ಇಂಡಿಯನ್‌ ರ‍್ಯಾಲಿ ಚಾಂಪಿಯನ್‌ ಷಿಪ್‌ ವಿಭಾಗದಲ್ಲಿ ಯೂನಿಸ್‌ ಇಲ್ಯಾಸ್‌–ನಿತಿನ್‌ ಜಾಕೋಬ್‌, ಇಂಡಿಯನ್‌ ನ್ಯಾಷ ನಲ್‌ ರ್‍ಯಾಲಿ ಚಾಂಪಿಯನ್‌ಶಿಪ್‌ 2000 ಸಿಸಿ ವಿಭಾಗದಲ್ಲಿ ಮಂಗಳೂರಿನ ಡೀನ್‌ ಮಸ್ಕರೇನಸ್‌–ಎಸ್‌.ಎನ್‌.ಷಣ್ಮುಗ, ಐಎನ್‌ಆರ್‌ಸಿ ವಿಭಾಗದಲ್ಲಿ ಕೋಲ್ಕತ್ತದ ಅಮಿತ್‌ ರಜಿತ್‌ ಘೋಷ್‌– ಅಶ್ವಿನ್‌ ನಾಯ್ಕ್‌ ಜೋಡಿ ವೇಗದ ಚಾಲಕರಾಗಿ ಹೊರಹೊಮ್ಮಿದರು.

ಫಲಿತಾಂಶ: ಎಪಿಆರ್‌ಸಿ ಸಮಗ್ರ ವಿಭಾಗ: ಫ್ಯಾಬಿಯಾನ್‌ ಕ್ರೀಮ್‌/ಸಹ ಚಾಲಕ ಫ್ರಾಂಕ್‌ ಕ್ರಿಶ್ಚಿಯನ್‌ (ಎಂಆರ್‌ ಎಫ್‌ ತಂಡ) (ಸಮಯ:  2 ನಿಮಿಷ, 17.8 ಸೆಕೆಂಡು)–1, ಗೌರವ್‌ಗಿಲ್‌/ ಗ್ಲೆನ್‌ ಮೆಕ್ನೀಲ್‌ (ಎಂಆರ್‌ಎಫ್‌ ತಂಡ) (2:18.5)–2, ಯುಯ ಸುಮಿ ಯಮ/ಟಕಹಿರೊ ಯಸುಹಿ (ಕುಸ್ಕೊ ರೇಸಿಂಗ್‌ ತಂಡ) (2:23.4)–3.

ಐಆರ್‌ಸಿ: ಯೂನಿಸ್‌ ಇಲ್ಯಾಸ್‌/ನಿತಿನ್‌ ಜಾಕೋಬ್‌ (02:42.8)–1, ರಿತೇಶ್‌ ಎಂ.ಗುತ್ತೇದಾರ್‌/ ಸಿರಾಜ್‌ ಅಹಮದ್‌ (02:45.4)–2, ಮೊಹಮದ್‌ ಖಾಸಿಮ್‌/ಜಿ.ಸನತ್‌ (02:47.01)–3.

ಐಎನ್‌ಆರ್‌ಸಿ 2000: ಡೀನ್‌ ಮಸ್ಕ ರೇನಸ್‌/ಎಸ್‌.ಎನ್‌.ಷಣ್ಮುಗ,(02:40.8)–1, ಕರ್ಣ ಕಡೂರು/ನಿಖಿಲ್‌ ಪೈ (ಯಕೋಹಮ 2ಕೆ) (02:42.6)–2, ರಾಹುಲ್‌ ಕಾಂತರಾಜ್‌/ವಿವೇಕ ಭಟ್‌ (ಯಕೋಹಮ 2ಕೆ) (02:42.7)–3.

ಐಎನ್‌ಆರ್‌ಸಿ: ಅಮಿತ್‌ ರಜಿತ್‌ ಘೋಷ್‌/ ಅಶ್ವಿನ್‌ ನಾಯ್ಕ್‌ (ಮಹಿಂದ್ರಾ ಅಡ್ವೆಂಚರ್‌) (02:37.9)–1, ಅರ್ಜುನ್‌ ರಾವ್‌/ ಸತೀಶ್‌ ರಾಜಗೋಪಾಲ್‌ (02:38.9)–2, ಸನ್ನಿ ಸಿಧು/ಮೂಸ ಶರೀಫ್‌ (ಮಹೀಂದ್ರ ಅಡ್ವೆಂಚರ್‌) (02:40)–3.

ಜಿಪ್ಸಿ ಸ್ಟಾರ್‌: ಸಂಜಯ್‌ ಅಗರ್‌ವಾಲ್‌/ ಎನ್‌.ಸ್ಮಿತಾ (02:59.6)–1, ಅವಿನ್‌ ನಂಜಪ್ಪ/ ಸೂರಜ್‌ ಶೆಟ್ಟಿ (03:09.5), ಕೆ.ವಿ.ಧೀರಜ್‌/ ರವಿ (03:15.7)–3. ಎಫ್‌ಎಂಎಸ್‌ಸಿಐ ಕಪ್‌: ವಿಕ್ರಮ್‌ ಗೌಡ (02:49.5), ಎಸ್‌.ಸಿ.ಮಿಚು ಗಣಪತಿ/ ವೇಣು ರಮೇಶ್‌ ಕುಮಾರ್‌ (02.52.8)–2, ಫ್ಯಾಬಿದ್‌ ಅಮೀರ್‌/ ಅರ್ಜುನ್‌ ಧೀರೇಂದ್ರ (02:55.6)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT