ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ: ಗ್ರಾ.ಪಂ. ಸದಸ್ಯನ ಬಂಧನ

Last Updated 3 ಡಿಸೆಂಬರ್ 2016, 19:38 IST
ಅಕ್ಷರ ಗಾತ್ರ

ಬೆಂಗಳೂರು: ಹಣ ಬದಲಾವಣೆ ನೆಪದಲ್ಲಿ ₹4.5 ಲಕ್ಷ ದರೋಡೆ ಮಾಡಿದ ಪ್ರಕರಣ ಸಂಬಂಧ ಮಂಡೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ವೆಂಕಟೇಶ್‌ ಎಂಬುವರನ್ನು ಅವಲಹಳ್ಳಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಅವಲಹಳ್ಳಿಯ ನರೇಂದ್ರ ಬಾಬು ಎಂಬುವರನ್ನು ಸಂಪರ್ಕಿಸಿದ್ದ ಆರೋಪಿ ವೆಂಕಟೇಶ್‌ ಹಾಗೂ ಅವರ ಸ್ನೇಹಿತ ರಾಜೇಶ್‌, ₹100 ಮುಖಬೆಲೆಯ ₹8.5 ಲಕ್ಷ ಕೊಟ್ಟರೆ ₹500 ಮುಖಬೆಲೆಯ ₹10 ಲಕ್ಷ ಕೊಡುವುದಾಗಿ ಹೇಳಿದ್ದರು’.

‘ಅದನ್ನು ನಂಬಿದ್ದ ನರೇಂದ್ರಬಾಬು, ಹಣದೊಂದಿಗೆ ಡಿ. 1ರಂದು ನಿಂಬೆಕಾಯಿಪುರ ಬಳಿ ಹೋಗಿದ್ದರು. ಅಲ್ಲಿಗೆ ಬಂದಿದ್ದ ಆರೋಪಿಗಳು, ಅವರ ಬಳಿಯ ₹4.5 ಲಕ್ಷವಿದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು. ‘ಘಟನೆ ಬಗ್ಗೆ ನರೇಂದ್ರ ಬಾಬು ನೀಡಿದ ದೂರಿನನ್ವಯ ವೆಂಕಟೇಶ್‌ ಅವರನ್ನು ಬಂಧಿಸಿ, ₹3.5 ಲಕ್ಷ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ರಾಜೇಶ್‌ನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT