ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್‌ಗೆ ನಟಿಯರ ಕೊರತೆ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ರತಿವರ್ಷ 25ಕ್ಕೂ ಹೆಚ್ಚು ನಟಿಮಣಿಯರು ಟಾಲಿವುಡ್‌ (ತೆಲುಗು ಚಿತ್ರರಂಗ) ಪ್ರವೇಶ ಮಾಡುತ್ತಿದ್ದಾರೆ. ಈ ನಟಿಯರಲ್ಲಿ ಅನೇಕರದ್ದು ತೆಲುಗು ಭಾಷೆಯಲ್ಲಿ ಚೊಚ್ಚಿಲ ಚಿತ್ರವೇ ಆಗಿರುತ್ತದೆ ಎನ್ನುವುದು ವಿಶೇಷ.

ಈ ಪೈಕಿ ಅನೇಕರು ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದಿಂದ ಟಾಲಿವುಡ್‌ಗೆ ಪದಾರ್ಪಣೆ ಮಾಡಿದವರು. ಇಷ್ಟೆಲ್ಲದರ ನಡುವೆಯೂ ಟಾಲಿವುಡ್‌ನಲ್ಲಿ ನಟಿಯರ ಕೊರತೆ ಕಾಣಿಸಿಕೊಂಡಿದೆ.

‘ಟಾಲಿವುಡ್‌ನಲ್ಲಿ ಹೊಸ ನಟಿಯರ ಬಗ್ಗೆ ಅಸಮಾಧಾನವಿದೆ. ಇದಕ್ಕೆ ಮುಖ್ಯ ಕಾರಣ ಯಶಸ್ಸಿನ ಪ್ರಮಾಣ. ತಮ್ಮ ಚೊಚ್ಚಲ ಚಿತ್ರದಲ್ಲಿ ಆ ನಟಿ ಯಶಸ್ಸು ಸಾಧಿಸಿದರೆ ಮುಂದಿನ ಚಿತ್ರದಲ್ಲಿ ಆಕೆ ಸ್ಥಾನ ಪಡೆಯಲು ಸಾಧ್ಯ. ಆಕೆ  ನಟನೆಯಲ್ಲಿ ವೈಫಲ್ಯ ಕಂಡರೆ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಹೊಸ ನಟಿಯನ್ನು ಹುಡುಕಬೇಕು.ಚಿತ್ರರಂಗ ಎಂದಿಗೂ ಭಾವನಾತ್ಮಕ ನೆಲೆಗಟ್ಟಿನಲ್ಲೇ ಕೆಲಸ ಮಾಡುತ್ತದೆ’ ಎನ್ನುತ್ತಾರೆ ನಿರ್ದೇಶಕಿ ಬಿ.ಜಯಾ.

ಒಮ್ಮೆ ನಟಿಯೊಬ್ಬರು ಯಶಸ್ಸಿನ ತುದಿಯನ್ನು  ಏರಿದರೆ ಮುಗಿಯಿತು, ಅವರೊಂದಿಗೆ ನಟಿಸುವ ನಟರು ಶ್ರೇಷ್ಠ ನಟರೇ ಆಗಿರಬೇಕಾಗುತ್ತದೆ. ಚಿಕ್ಕ ಸಿನಿಮಾಗಳಲ್ಲಿ ಅಭಿನಯಿಸಲು ಆಗುವುದಿಲ್ಲ. ಅಲ್ಲದೇ ಅನೇಕ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ.

‘ತೆಲುಗು ಸಿನಿಮಾ ರಂಗದಲ್ಲಿ ಯಶಸ್ವಿ ನಟರ ಪ್ರಾಬಲ್ಯವಿದೆ. ನಾಯಕಿಯರ ಪಾತ್ರ ಇಲ್ಲಿ ಗೌಣವಾಗುತ್ತದೆ. ಬಹಳಷ್ಟು ನಟರು ಯಶಸ್ವಿ ನಟಿಯರನ್ನೇ ಆಯ್ಕೆ ಮಾಡುತ್ತಾರೆ’ ಎಂದು ವಾಸ್ತವವನ್ನು ಬಿಚ್ಚಿಡುತ್ತಾರೆ ನಿರ್ಮಾಪಕ ಟ್ಯಾಗೋರ್‌ ಮಧು. ಟ್ಯಾಗೋರ್‌ ಮಧು ಅವರು ಮಹೇಶ್‌ ಬಾಬು ಹಾಗೂ ರಕುಲ್‌ ಪ್ರೀತ್‌ ಸಿಂಗ್‌ ಒಳಗೊಂಡ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

‘ಬೇರೆ ಸಿನಿಮಾ ಇಂಡಸ್ಟ್ರಿಗೆ ಹೋಲಿಸಿದರೆ, ತೆಲುಗಿನ ನಿರ್ಮಾಪಕರು ಹೊಸ ಮುಖಗಳನ್ನೇ ಆಯ್ಕೆ ಮಾಡುತ್ತಾರೆ. ಅವರಿಗೆ ತರಬೇತಿ ಬೇಕಿರುತ್ತದೆ. ಕೆಲವರು ನೋಡಲು ಚೆಂದ ಇರುತ್ತಾರೆ.  ನೆನಪಿನ ಶಕ್ತಿ ಇರುವ, ಅಂದರೆ ಚಿತ್ರೀಕರಣದ ವೇಳೆ ಸ್ಕ್ರಿಪ್ಟ್‌ ನೆನಪಿನಲ್ಲಿಟ್ಟುಕೊಂಡು ಯಾರು ಉತ್ತಮವಾಗಿ ಅಭಿನಯಿಸುತ್ತಾರೋ ಅಂಥವರನ್ನು ಹುಡುಕುತ್ತೇವೆ’ ಎನ್ನುತ್ತಾರೆ ‘ಗುಂಡೆ ಜಾರಿ ಗಲ್ಲಂತಾಯಿಂದೆ’ ಚಿತ್ರದ ನಿರ್ದೇಶಕ ವಿಜಯಕುಮಾರ್‌ ಕೊಂಡ.

ಪ್ರಸಕ್ತ ವರ್ಷ ಕೀರ್ತಿ ಸುರೇಶ್‌, ನಿವಿತಾ ಥಾಮಸ್‌, ಅನು ಎಮ್ಯುನಲ್‌ ಮತ್ತು ಅನುಪಮಾ ಪರಮೇಶ್ವರನ್‌ ಮೊದಲ ಸಿನಿಮಾಗಳಲ್ಲೇ ಯಶಸ್ಸು ಕಂಡು, ಅನೇಕ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೆಲವರು ದೊಡ್ಡ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದಾರೆ.

‘ಯಶಸ್ಸು ಎಂಬುದು ನಟಿಯರಿಗೆ ಬಹಳ ಮುಖ್ಯವಾದ ವಿಷಯವಾಗಿದ್ದು, ಶ್ರುತಿ ಹಾಸನ್‌ ವಿಷಯದಲ್ಲಿ ಇದು ಸ್ವಲ್ಪ ಭಿನ್ನವಾಗಿದೆ. ಅವರಿಗೆ ಹಲವು ಪ್ರಾಜೆಕ್ಟ್‌ಗಳು ತನ್ನಿಂತಾನೇ ಸಿಕ್ಕಿವೆ’ ಎನ್ನುತ್ತಾರೆ ಬಿ.ಜಯಾ.                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT