ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ಜಿತ್‌ ಪಟೇಲ್‌ ವೇತನ ₹ 2 ಲಕ್ಷ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು  ತಿಂಗಳಿಗೆ ₹ 2.09 ಲಕ್ಷ ವೇತನ ಪಡೆಯುತ್ತಿದ್ದು,  ಅವರ ಅಧಿಕೃತ ನಿವಾಸದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಲ್ಲ ಎಂದು ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಆರ್‌ಬಿಐ ಗವರ್ನರ್‌ ಆಗಿ ಅಧಿಕಾರವಹಿಸಿಕೊಂಡಿರುವ ಪಟೇಲ್‌, ಮುಂಬೈನಲ್ಲಿರುವ ಆರ್‌ಬಿಐನ  ಫ್ಲ್ಯಾಟ್‌ನಲ್ಲಿ (ಡೆಪ್ಯುಟಿ ಗವರ್ನರ್‌) ನೆಲೆಸಿದ್ದಾರೆ.ಅವರಿಗೆ ಎರಡು ಕಾರು ಮತ್ತು ಇಬ್ಬರು ಚಾಲಕರನ್ನು ಒದಗಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ  ತಿಳಿಸಲಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಪಟೇಲ್‌ ಅವರು ಪಡೆದಿರುವ ತಿಂಗಳ ವೇತನ ₹ 2.09 ಲಕ್ಷವಾಗಿದೆ.  ಹಿಂದಿನ ಗವರ್ನರ್‌ ರಘುರಾಂ ರಾಜನ್‌ ಅವರೂ ಆಗಸ್ಟ್‌ ತಿಂಗಳಿನಲ್ಲಿ ಇಷ್ಟೇ ಮೊತ್ತದ ಸಂಬಳ ಪಡೆದಿದ್ದರು. ಸೆಪ್ಟೆಂಬರ್‌ 4ರಂದು ರಾಜನ್‌ ಸೇವಾ ನಿವೃತ್ತಿಯಾಗಿದ್ದರು.  ನಾಲ್ಕು ದಿನಗಳ ಸೇವೆಗೆ ಅವರಿಗೆ ₹ 27,933ರಷ್ಟು ವೇತನ ಪಾವತಿಸಲಾಗಿತ್ತು. 

ರಾಜನ್‌ ಅವರು 2013 ಸೆಪ್ಟೆಂಬರ್‌ನಲ್ಲಿ ಗವರ್ನರ್‌ ಹುದ್ದೆ ವಹಿಸಿಕೊಂಡಾಗ ಅವರ ತಿಂಗಳ ವೇತನ  ₹ 1.69 ಲಕ್ಷಕ್ಕೆ ನಿಗದಿಯಾಗಿತ್ತು. ರಾಜನ್‌ ಅವರಿಗೆ ಮೂರು ಕಾರು ಮತ್ತು ನಾಲ್ವರು ಚಾಲಕರನ್ನು ಒದಗಿಸಲಾಗಿತ್ತು. ಮುಂಬೈನಲ್ಲಿನ ಬಂಗ್ಲೆಯಲ್ಲಿ ವಾಸಿಸುತ್ತಿದ್ದ ರಾಜನ್‌ ಅವರಿಗೆ 10  ಸಿಬ್ಬಂದಿಯ ಸೇವೆ ಒದಗಿಸಲಾಗಿತ್ತು ಎಂದು ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT