ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌:ಅಶ್ವಿನಿ–ಸಿಕ್ಕಿ ರನ್ನರ್ಸ್‌ ಅಪ್‌

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಾರ್ಡಿಫ್‌ (ಪಿಟಿಐ): ಬಲಿಷ್ಠ ಎದುರಾಳಿಗಳ ಸವಾಲನ್ನು ಮೀರಿ ನಿಲ್ಲಲು ವಿಫಲರಾದ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌. ಸಿಕ್ಕಿ ರೆಡ್ಡಿ ಅವರು ಇಲ್ಲಿ ನಡೆದ ವೇಲ್ಸ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಶ್ವಿನಿ ಮತ್ತು ಸಿಕ್ಕಿ 16–21, 11–21ರ ನೇರ ಗೇಮ್‌ಗಳಿಂದ ರಷ್ಯಾದ ಓಲ್ಗಾ ಮೊರೊಜೊವಾ ಮತ್ತು ಅನಸ್ತೇಸಿಯಾ ಚೆರವ್ಯಾಕೋವ ಅವರಿಗೆ ಶರಣಾದರು.

ಡಬಲ್ಸ್‌ನಲ್ಲಿ ಜೊತೆಯಾಗಿ ಆಡಲು ನಿರ್ಧರಿಸಿದ ಬಳಿಕ  ಆಡಿದ ಮೊದಲ ಟೂರ್ನಿಯಲ್ಲಿ ಕರ್ನಾಟಕದ ಅಶ್ವಿನಿ ಮತ್ತು ಹೈದರಾಬಾದ್‌ನ ಸಿಕ್ಕಿ ಅಮೋಘ ಆಟ ಆಡಿ ಗಮನ ಸೆಳೆದರು.

ಸೆಮಿಫೈನಲ್‌ನಲ್ಲಿ 21–16, 21–18ರ ನೇರ ಗೇಮ್‌ಗಳಿಂದ ಇಂಗ್ಲೆಂಡ್‌ನ ಲೌರೆನ್‌ ಸ್ಮಿತ್‌ ಮತ್ತು  ಸೋಫಿ ಬ್ರೌನ್‌ ಅವರನ್ನು ಮಣಿಸಿ ವಿಶ್ವಾಸದಿಂದ ಪುಟಿಯುತ್ತಿದ್ದ ಭಾರತದ ಜೋಡಿ ಫೈನಲ್‌ನಲ್ಲಿ ಗುಣಮಟ್ಟದ ಆಟ ಆಡಲು ವಿಫಲವಾಯಿತು. ಇಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ರಷ್ಯಾದ ಆಟಗಾರ್ತಿಯರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು.

ಸುಂದರ ಸರ್ವ್‌ಗಳನ್ನು ಮಾಡುವುದರ ಜೊತೆಗೆ ಷಟಲ್‌ ಅನ್ನು ಹಿಂತಿರುಗಿಸುವಲ್ಲೂ ಚುರುಕುತನ ತೋರಿ ದ ಸೋಫಿ ಮತ್ತು ಸ್ಮಿತ್‌ ಲೀಲಾಜಾಲವಾಗಿ ಪಾಯಿಂಟ್ಸ್‌ ಹೆಕ್ಕಿದರು. ಎದುರಾಳಿ ಆಟಗಾರ್ತಿಯರು ಬೇಗನೆ ಮುನ್ನಡೆ ಕಂಡುಕೊಂಡಿದ್ದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಭಾರತದ ಜೋಡಿ ಸ್ವಯಂಕೃತ ತಪ್ಪುಗಳನ್ನು ಮಾಡಿ ಸುಲಭವಾಗಿ ಗೇಮ್‌ ಕೈಚೆಲ್ಲಿತು.

ಎರಡನೇ ಗೇಮ್‌ನಲ್ಲೂ ಅಶ್ವಿನಿ ಮತ್ತು ಸಿಕ್ಕಿ ಅವರ ಆಟ ನಡೆಯಲಿಲ್ಲ. ಶುರುವಿನಿಂದಲೇ ಪಾಯಿಂಟ್ಸ್‌ ಕಲೆಹಾ ಕುತ್ತಾ ಸಾಗಿದ ರಷ್ಯಾದ ಆಟಗಾರ್ತಿಯರು 37ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು. ಪುರುಷರ ವಿಭಾಗದಲ್ಲಿ ನಿರಾಸೆ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಜಿಷ್ಣು ಸನ್ಯಾಲ್‌ ಮತ್ತು ಶಿವಂ ಶರ್ಮಾ ಅವರೂ ನಿರಾಸೆ ಕಂಡರು.

ಸೆಮಿಫೈನಲ್‌ನಲ್ಲಿ ಚೀನಾ ತೈಪೆಯ ಮೂರನೇ ಶ್ರೇಯಾಂಕಿ ತ ಆಟಗಾರರಾದ ಲಿಯಾವೊ ಕುವಾನ್‌ ಹಾವೊ ಮತ್ತು ಲು ಚಿಯಾ ಪಿನ್‌ 21–17, 21–15ರಲ್ಲಿ ಆರನೇ ಶ್ರೇಯಾಂಕದ ಭಾರತದ ಆಟ ಗಾರರನ್ನು ಸೋಲಿಸಿದರು. ಮಿಶ್ರಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಎನ್‌. ಸಿಕ್ಕಿ ರೆಡ್ಡಿ ಮತ್ತು ಪ್ರಣವ್‌ ಜೆರ್ರಿ ಚೋಪ್ರಾ 16–21, 14–21ರಲ್ಲಿ ಮಲೇ ಷ್ಯಾದ ಗೊಹ್‌ ಸೂನ್‌ ಹುವಾತ್‌ ಮತ್ತು ಶೆವೊನ್‌ ಜೆಮಿ ಲೈ ವಿರುದ್ಧ ಮಣಿದರು.ಎರಡೂ ಗೇಮ್‌ಗಳಲ್ಲೂ ಸಿಕ್ಕಿ ಮತ್ತು ಪ್ರಣವ್‌ ವಿರುದ್ಧ ಪಾರಮ್ಯ ಸಾಧಿಸಿದ ಗೊಹ್‌ ಮತ್ತು ಶೆವೊನ್‌ 39 ನಿಮಿಷ ಗಳಲ್ಲಿ  ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT