ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲಿಟರಿ ಶಾಲೆಗೆ ಸಮಗ್ರ ಪ್ರಶಸ್ತಿ

ಡೆಕ್ಕನ್‌ ವಾರಾಂತ್ಯ ಅಥ್ಲೆಟಿಕ್ಸ್‌: ಸರ್ವೇಶ್‌ ಕುಮಾರ್‌, ಭಗವಾನ್‌ ಕೃಪಾ, ಶ್ರೇಯಸ್‌ ಮಿಂಚು
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಬೆಂಗಳೂರು: ನಾಲ್ಕೂ ವಾರಾಂತ್ಯ ಸ್ಪರ್ಧೆ ಗಳಲ್ಲೂ ಪಾರಮ್ಯ ಮೆರೆದ ರಾಷ್ಟ್ರೀಯ ಮಿಲಿಟರಿ ಶಾಲಾ ತಂಡದವರು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’  ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌  ವತಿಯ 28ನೇ ವಾರ್ಷಿಕ ವಾರಾಂತ್ಯ ಅಥ್ಲೆಟಿಕ್ಸ್‌ನ ಬಾಲಕರ ವಿಭಾ ಗದ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
 
ರಾಷ್ಟ್ರೀಯ ಮಿಲಿಟರಿ ಶಾಲೆ ತಂಡ ಒಟ್ಟು 6,260 ಪಾಯಿಂಟ್ಸ್‌ ಕಲೆಹಾಕಿ ಈ ಸಾಧನೆ ಮಾಡಿದೆ. 2,435 ಪಾಯಿಂಟ್ಸ್‌ ಸಂಗ್ರಹಿಸಿದ ಬಿಷಪ್‌ ಕಾಟನ್‌ ಬಾಲಕರ ಶಾಲೆ ಎರಡನೇ ಸ್ಥಾನ ಗಳಿಸಿದರೆ, ಈ ವಿಭಾಗದ ಮೂರನೇ ಸ್ಥಾನ ವಿದ್ಯಾನಿಕೇತನ ಶಾಲೆಯ ಪಾಲಾಯಿತು. ಈ ತಂಡ ಒಟ್ಟಾರೆ 2,415 ಪಾಯಿಂಟ್ಸ್‌ ಗಳಿಸಿತು.
 
ಭಗವಾನ್‌ ಮಿಂಚು: ಕಂಠೀರವ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ನಾಲ್ಕನೇ ವಾರಾಂತ್ಯ ಸ್ಪರ್ಧೆಯ 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿದ್ಯಾನಿಕೇತನ ಶಾಲೆಯ ಎಂ.ಭಗವಾನ್‌ ಕೃಪಾ ಮಿಂಚಿದರು. ಇವರು 100 ಮೀಟರ್ಸ್‌ ಓಟ (11.3ಸೆಕೆಂಡು) ಮತ್ತು ಟ್ರಿಪಲ್‌ ಜಂಪ್‌ (12.40 ಮೀಟರ್ಸ್‌) ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸಿದರು. ರಾಷ್ಟ್ರೀಯ ಮಿಲಿಟರಿ ಶಾಲೆಯ ಸರ್ವೇಶ್‌ ಕುಮಾರ್‌ 800 ಮೀಟರ್ಸ್‌ (2ನಿಮಿಷ 15.9ಸೆಕೆಂಡು) ಮತ್ತು 3000 ಮೀಟರ್ಸ್‌ (9ನಿಮಿಷ 53.9ಸೆಕೆಂಡು) ವಿಭಾಗಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.
 
ಶ್ರೇಯಸ್‌ಗೆ ಮೂರನೇ ಸ್ಥಾನ: ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆಯ ಶ್ರೇಯಸ್‌ ಮಯ್ಯ (1.45 ಮೀಟರ್ಸ್‌) ಹೈಜಂಪ್‌ನಲ್ಲಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ವಿದ್ಯಾನಿಕೇತನ ಶಾಲೆಯ ಕೆವಿನ್‌ ವಿಕ್ಟರ್‌ (1.65 ಮೀಟರ್ಸ್‌) ಮೊದಲ ಸ್ಥಾನ ಪಡೆದರು.
 
ಫಲಿತಾಂಶಗಳು:  13 ವರ್ಷದೊಳಗಿನವರ ವಿಭಾಗ: 100 ಮೀಟರ್ಸ್‌ ಓಟ: ಆಶಿಶ್‌ (ಸೇಂಟ್ ಜಾನ್ಸ್‌ ಪ್ರೌಢಶಾಲೆ; 12.9 ಸೆ.)–1, ಜಿ. ತರುಣ್‌ (ನ್ಯೂ ಸೇಂಟ್‌ ಮೇರಿ ಪ್ರೌಢಶಾಲೆ; 13.0ಸೆ.)–2, ಆರ್‌. ಧನುಷ್‌ (ಎವರ್‌ಶೈನ್‌ ಇಂಗ್ಲಿಷ್‌ ಶಾಲೆ; 13.1ಸೆ.)–3.
 
800 ಮೀಟರ್ಸ್‌ ಓಟ: ಜಿ. ವರುಣ್‌ ವಿಲಿಯಮ್‌ (ಸೇಂಟ್‌ ಜೋಸೆಫ್‌ ಇಂಡಿಯನ್‌ ಪ್ರಾಥಮಿಕ ಶಾಲೆ; 2ನಿ.28.4ಸೆ.)–1, ಮನೀಷ್‌ ಕುಮಾರ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 2ನಿ.32.8ಸೆ.)–2, ಕೆ.ಶಿವಕುಮಾರ (ನ್ಯೂ ಸೇಂಟ್‌ ಮೇರಿ ಪ್ರೌಢಶಾಲೆ; 2ನಿ.33.9ಸೆ.)–3.
 
3000 ಮೀಟರ್ಸ್‌ ಓಟ: ಜಿ. ವರುಣ್‌ ವಿಲಿಯಮ್‌ (ಸೇಂಟ್‌ ಜೋಸೆಫ್‌ ಇಂಡಿಯನ್‌ ಪ್ರಾಥಮಿಕ ಶಾಲೆ; 10ನಿ.55.9ಸೆ.)–1, ರಾಘವೇಂದ್ರ (11ನಿ.02.4ಸೆ.)–2, ಆರ್ಯಮಾನ್‌ (11ನಿ.09.2ಸೆ.)–3, (ಇಬ್ಬರೂ ರಾಷ್ಟ್ರೀಯ ಮಿಲಿಟರಿ ಶಾಲೆ).
 
80 ಮೀಟರ್ಸ್‌ ಹರ್ಡಲ್ಸ್‌: ರವಿಂದರ್‌ (14.3ಸೆ.)–1, ಮನೀಷ್‌ ಕುಮಾರ್‌ (15.1ಸೆ.)–2, ದೀಪಕ್‌ ಕುಮಾರ್‌ (15.3ಸೆ.)–3 (ಎಲ್ಲರೂ ರಾಷ್ಟ್ರೀಯ ಮಿಲಿಟರಿ ಶಾಲೆ).
 
ಲಾಂಗ್‌ ಜಂಪ್‌: ದೀಪಕ್‌ ಕುಮಾರ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 4.80 ಮೀ.)–1, ಯೊಹಾನ ಡಿಸೋಜ (ಬೆಥನಿ ಪ್ರೌಢ ಶಾಲೆ; 4.60 ಮೀ.)–2, ಸತ್ಯಂ ರಾಜ್‌ (  ಮಿಲಿಟರಿ ಶಾಲೆ; 4.42 ಮೀ.)–3.
 
ಟ್ರಿಪಲ್‌ ಜಂಪ್‌: ದೀಪಕ್‌ ಕುಮಾರ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 933 ಮೀ.)–1, ಸಿದ್ದಾರ್ಥ್‌ ಯು. ರಾಜಾಹ್‌ (ದಿ ಬ್ರಿಗೇಡ್‌ ಶಾಲೆ; 9.05 ಮೀ.)–2, ಸತ್ಯಂ ಕುಮಾರ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 8.55 ಮೀ.)–3.
 
ಹೈ ಜಂಪ್‌: ರೋಹಿತ್‌ ಕುಮಾರ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 1.32 ಮೀ.)–1, ಎಂ. ಮೂಸಾದಿಕ್‌ ಅಜಾಜ್‌ (ಸೇಂಟ್‌ ಮೇರಿ ಪಬ್ಲಿಕ್‌ ಶಾಲೆ; 1.28 ಮೀ.)–2, ರಾಘವೇಂದ್ರ (ರಾಷ್ಟ್ರೀಯ ಮಿಲಿಟರಿ ಶಾಲೆ; 1.24 ಮೀ.)–3.
 
ಶಾಟ್‌ಪಟ್‌: ಸಾಯಿ ಪ್ರತೀಕ್‌ (ವಿದ್ಯಾನಿಕೇತನ ಶಾಲೆ;  8.22 ಮೀ.)–1, ಜೆ.ಎಲ್‌. ಮಾರ್ಕ್‌ ರಿಕಿ ಸಿಮನ್‌ (ರಾಷ್ಟ್ರೀಯ ಪಬ್ಲಿಕ್‌ ಶಾಲೆ, ಕೆಂಗೇರಿ; 8.10 ಮೀ.)–2, ಎಂ. ಮೂಸಾದಿಕ್‌ ಅಜಾಜ್‌ (ಸೇಂಟ್‌ ಮೇರಿ ಪಬ್ಲಿಕ್‌ ಶಾಲೆ; 8.02 ಮೀ.)–3.
 
16 ವರ್ಷದೊಳಗಿನವರು:100 ಮೀಟರ್ಸ್‌ ಓಟ: ಎಂ. ಭಗವಾನ್‌ ಕೃಪಾ (ವಿದ್ಯಾನಿಕೇತನ ಶಾಲೆ; 11.3ಸೆ.)–1, ಪಿ. ನಿತಿನ್‌ (ಕಾರ್ಮೆಲ್‌ ಶಾಲೆ; 11.9ಸೆ.)–2, ಎಸ್‌. ಲವ್ಲಿ ಲಿಯೊನ್‌ (ಬಿಷಪ್‌ ಕಾಟನ್‌ ಬಾಲಕರ ಶಾಲೆ; 12.0ಸೆ.)–3.
 
800 ಮೀಟರ್ಸ್‌ ಓಟ: ಸರ್ವೇಶ್‌ ಕುಮಾರ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 2ನಿ.15.9ಸೆ.)–1, ಎಲ್‌. ರಾಜಶೇಖರ (2ನಿ.16.9ಸೆ.)–2, ಎಸ್‌. ಯಶವಂತ ಗೌಡ (2ನಿ.19.9ಸೆ.)–3 (ಇಬ್ಬರೂ ನ್ಯೂ ಸೇಂಟ್‌ ಮೇರಿ ಪ್ರೌಢಶಾಲೆ).
 
3000 ಮೀಟರ್ಸ್‌ ಓಟ: ಸರ್ವೇಶ್‌ ಕುಮಾರ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 9ನಿ.53.9ಸೆ.)–1, ಜಿ. ಅಮೋಘವರ್ಷ (ವಿದ್ಯಾನಿಕೇತನ ಶಾಲೆ; 9ನಿ.54.1ಸೆ.)–2, ಎಲ್‌. ರಾಜಶೇಖರ (ನ್ಯೂ ಸೇಂಟ್‌ ಮೇರಿ ಪ್ರೌಢಶಾಲೆ; 10ನಿ.33.5ಸೆ.)–3.
 
110 ಮೀಟರ್ಸ್‌ ಹರ್ಡಲ್ಸ್‌: ಅಮಿತ್‌ ಆಜಾದ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 19.1ಸೆ.)–1, ಬಿ. ಓಂ ಪ್ರಕಾಶ್‌ (ಇಂದಿರಾನಗರ ಪ್ರೌಢಶಾಲೆ; 19.3ಸೆ.)–2, ವಿವೇಕ್‌ ಸಿಂಗ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 19.5ಸೆ.)–3.
 
ಲಾಂಗ್‌ ಜಂಪ್‌: ಆರ್‌. ಸಂಜಯ್‌ (ಸೇಂಟ್‌ ಜರ್ಮೈನ್‌ ಪ್ರೌಢಶಾಲೆ; 5.73 ಮೀ.)–1, ಪ್ರಣವ್‌ ದಿವಾಕರ (ಬಿಷಪ್‌ ಕಾಟನ್‌ ಬಾಲಕರ ಶಾಲೆ; 5.70 ಮೀ.)–2, ಶೇಖ್‌ ಸೂಫಿಯಾನ್‌ ಅಹ್ಮದ್‌ (ಮೆಟ್ರೊಪಾಲಿಟನ್‌ ಸೆಂಟ್ರಲ್‌ ಶಾಲೆ; 5.65 ಮೀ.)–3.
 
ಟ್ರಿಪಲ್‌ ಜಂಪ್‌: ಎಂ. ಭಗವಾನ್‌ ಕೃಪಾ (ವಿದ್ಯಾನಿಕೇತನ ಶಾಲೆ; 12.40 ಮೀ.)–1, ಕೌಶಲ್‌ ಸಿಂಗ್‌ ಪಾಲ್‌ (ರಾಷ್ಟ್ರೀಯ ಮಿಲಿಟರಿ ಶಾಲೆ; 11.56 ಮೀ.)–2, ಡೇನಿಯಲ್‌ ಮ್ಯಾಥ್ಯೂ (ಬಿಷಪ್‌ ಕಾಟನ್‌ ಬಾಲಕರ ಶಾಲೆ; 11.45 ಮೀ.)–3.
 
ಹೈಜಂಪ್‌: ಕೆವಿನ್‌ ವಿಕ್ಟರ್‌ (ವಿದ್ಯಾನಿಕೇತನ ಶಾಲೆ; 1.65 ಮೀ.)–1, ಶೇಖ್‌ ಸೂಫಿಯಾನ್‌ ಅಹ್ಮದ್‌ (ಮೆಟ್ರೊಪಾಲಿಟನ್‌ ಸೆಂಟ್ರಲ್‌ ಶಾಲೆ; 1.58 ಮೀ.)–2, ಶ್ರೇಯಸ್‌ ಮಯ್ಯ (ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆ; 1.45 ಮೀ.)–3.
 
ಶಾಟ್‌ಪಟ್‌: ಎಸ್‌.ಜೆ. ರೋಹಿತ್‌ (ವಿದ್ಯಾನಿಕೇತನ ಶಾಲೆ; 9.52 ಮೀ.)–1, ಶಮನಾಸ್‌ (ಶಿಷ್ಯಾ ಬಿಇಎಂಎಲ್‌ ಪಬ್ಲಿಕ್‌ ಶಾಲೆ; 9.36 ಮೀ.)–2, ಎಸ್‌. ರವಿಚಂದರ್‌ (ಇಂದಿರಾನಗರ ಪ್ರೌಢಶಾಲೆ; 9.20 ಮೀ.)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT