ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಕ್ರೀಡಾ ನಿಲಯಕ್ಕೆ ಸಮಗ್ರ ಪ್ರಶಸ್ತಿ

ಟ್ರ್ಯಾಕ್‌ನಲ್ಲೂ ಮುಂದುವರಿದ ಪಾರಮ್ಯ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವಿಜಯಪುರ: ವಿಜಯದ ನಾಗಾಲೋಟ ಮುಂದುವರೆಸಿದ ವಿಜಯಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ಗಳು ಭಾನುವಾರ ಇಲ್ಲಿ ಸಮಾರೋಪಗೊಂಡ ರಾಜ್ಯಮಟ್ಟದ ಟ್ರ್ಯಾಕ್‌ ಸೈಕ್ಲಿಂಗ್‌ನ 9ನೇ ಚಾಂಪಿಯನ್‌ ಶಿಪ್‌ನಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು, ‘ಸೋಲಿಲ್ಲದ ಸರದಾರರು’ ಎಂಬ ಕೀರ್ತಿಗೆ ಭಾಜನರಾದರು.

ಚಾಂಪಿಯನ್‌ಶಿಪ್‌ನಲ್ಲಿ 115 ಪಾಯಿಂಟ್ಸ್ ಗಳಿಸುವ ಮೂಲಕ ವಿಜಯಪುರ ಕ್ರೀಡಾ ನಿಲಯದ ತನ್ನ ವಿಜಯ ಯಾತ್ರೆ ಮುಂದುವರೆಸಿದರೆ, 33 ಪಾಯಿಂಟ್ಸ್‌ ಗಳಿಸಿದ ಬಾಗಲಕೋಟೆ ಕ್ರೀಡಾ ನಿಲಯದ ಸೈಕ್ಲಿಸ್ಟ್‌ಗಳು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಅಂತಿಮ ದಿನದ ಫಲಿತಾಂಶ:
ಪುರುಷರ 1ಸಾವಿರ ಮೀ ಟೈಂ ಟ್ರಯಲ್‌: ಮಾಳಪ್ಪ ಮುರ್ತಣ್ಣವರ (ಬಾಗಲಕೋಟೆ; 1.16.44 ನಿ)–1, ಯಲಗುರೇಶ ಗಡ್ಡಿ (ವಿಜಯಪುರ; 1.16.55 ನಿ)–2, ನಾಗಪ್ಪ ಮರಡಿ (ಚಂದರಗಿ ಕ್ರೀಡಾ ಶಾಲೆ; 1.16.65 ನಿ)–3
ಮಹಿಳೆಯರ 500 ಮೀ ಟೈಂ ಟ್ರಯಲ್‌:ಸೀಮಾ ಅಡಗಲ್ (ಬಾಗಲಕೋಟೆ; 45.41 ಸೆ)–1, ರೇಣುಕಾ ದಂಡಿನ (ವಿಜಯಪುರ ಕ್ರೀಡಾ ನಿಲಯ; 46.96 ಸೆ)–2, ಎಸ್‌.ಎಂ.ಮಹಾಲಕ್ಷ್ಮೀ (ಬೆಂಗಳೂರು; 49.34 ಸೆ)–3
ಪುರುಷರ 4 ಕಿ.ಮೀ.

ಟೀಮ್ ಪರ್ಸ್ಯೂಟ್‌: ವಿಜಯಪುರ (5.19.94 ನಿ)–1, ವಿಜಯಪುರ ಕ್ರೀಡಾ ನಿಲಯ (5.27.68 ನಿ)–2,  ಚಂದರಗಿ ಕ್ರೀಡಾ ಶಾಲೆ (5.30.12)–3, 18 ವರ್ಷದೊಳಗಿನ ಬಾಲಕರ 5 ಕಿ.ಮೀ. ಸ್ಕ್ರ್ಯಾಚ್ ರೇಸ್: ಅನೀಲ ಮಡ್ಡಿ (ಬಾಗಲ ಕೋಟೆ ಕ್ರೀಡಾ ನಿಲಯ)–1, ಯುವರಾಜ ಕೊಕಟನೂರ (ವಿಜಯಪುರ ಕ್ರೀಡಾ ನಿಲಯ)–2,  ನಂದೆಪ್ಪ ಸವಡಿ (ವಿಜಯಪುರ ಕ್ರೀಡಾ ನಿಲಯ)–3

18 ವರ್ಷದೊಳಗಿನ ಬಾಲಕಿಯರ 3ಕಿ.ಮೀ. ಸ್ಕ್ರ್ಯಾಚ್ ರೇಸ್:ರಾಜೇಶ್ವರಿ ಡುಳ್ಳಿ (ಬಾಗಲಕೋಟೆ ಕ್ರೀಡಾ ನಿಲಯ)–1, ಶ್ರೀದೇ ವಿ ನಿಕ್ಕಂ (ಬಾಗಲಕೋಟೆ)–2, ಶಿಲ್ಪಾ ಕಡ ಕೋಳ (ವಿಜಯಪುರ ಕ್ರೀಡಾ ನಿಲಯ)–3

14 ವರ್ಷದೊಳಗಿನ ಬಾಲಕರ 500 ಮೀಟರ್ ಟೈಂ ಟ್ರಯಲ್‌: ಇ.ಪ್ರಶಾಂತ (ಚಂದರಗಿ ಕ್ರೀಡಾ ಶಾಲೆ; 40.96 ಸೆ)–1, ಲಾಯಪ್ಪ ಮುಧೋಳ (ವಿಜಯಪುರ ಕ್ರೀಡಾ ನಿಲಯ; 42.04 ಸೆ )–2, ನಾಗರಾಜ ಸೋಮಗೊಂಡ (ಚಂದರಗಿ ಕ್ರೀಡಾ ಶಾಲೆ; 42.18)–3

14 ವರ್ಷದೊಳಗಿನ ಬಾಲಕಿಯರ 500 ಮೀ ಟೈಂ ಟ್ರಯಲ್‌: ಅಂಕಿತಾ ರಾಠೋಡ (ವಿಜಯಪುರ ಕ್ರೀಡಾ ನಿಲಯ; 47.77 ಸೆ)–1, ಕೀರ್ತಿ ರಂಗಸ್ವಾಮಿ (ಬೆಂಗಳೂರು; 47.89 ಸೆ), ಸ್ವಾತಿ ಅಡಗಲ್ (ಬಾಗಲಕೋಟೆ ಕ್ರೀಡಾ ನಿಲಯ; 51.14)–3

16 ವರ್ಷದೊಳಗಿನ ಬಾಲಕರ 500 ಮೀಟರ್ ಟೈಂ ಟ್ರಯಲ್‌: ಸಚಿನ ರಂಜಣಗಿ (ವಿಜಯಪುರ ಕ್ರೀಡಾ ನಿಲಯ; 39.91 ಸೆ)–1, ಇ.ಪ್ರಶಾಂತ (ಚಂದರಗಿ ಕ್ರೀಡಾ ಶಾಲೆ; 40.36 ಸೆ)–2, ಮುತ್ತಪ್ಪ ನವಲಳ್ಳಿ (ವಿಜಯಪುರ ಕ್ರೀಡಾ ನಿಲಯ: 40.56 ಸೆ)–3

16 ವರ್ಷದೊಳಗಿನ ಬಾಲಕಿಯರ 500 ಮೀ ಟೈಂ ಟ್ರಯಲ್‌: ಸಹನಾ ಕುಡಿಗನೂರ (ವಿಜಯಪುರ ಕ್ರೀಡಾ ನಿಲಯ; 46.70 ಸೆ)1, ಸೌಮ್ಯಾ ಅಂತಾಪುರ (ಬಾಗಲಕೋಟೆ ಕ್ರೀಡಾ ನಿಲಯ; 48.56 ಸೆ)–2, ಕೀರ್ತಿ ರಂಗಸ್ವಾಮಿ (ಬೆಂಗಳೂರು–48.96 ಸೆ)–3

18 ವರ್ಷದೊಳಗಿನ ಬಾಲಕರ 1000 ಮೀ  ಟೈಂ ಟ್ರಯಲ್‌:  ಸಂತೋಷ ಕುರಣಿ (ವಿಜಯಪುರ; 1.14.45 ನಿ)–1, ಸಂಜು ನಾಯಕ (1.17.76 ನಿ)–2, ಯುವರಾಜ ಕೊಕಟನೂರ (1.23.90 ನಿ)–3, ಇಬ್ಬರೂ ವಿಜಯಪುರ ಕ್ರೀಡಾ ನಿಲಯ

18 ವರ್ಷದೊಳಗಿನ ಬಾಲಕರ 500 ಮೀ  ಟೈಂ ಟ್ರಯಲ್‌:  ರಾಜೇಶ್ವರಿ ಡುಳ್ಳಿ (ಬಾಗಲಕೋಟೆ ಕ್ರೀಡಾ ನಿಲಯ; 46.89 ಸೆ)–1, ಶ್ರೀದೇವಿ ನಿಕ್ಕಂ (ಬಾಗಲಕೋಟೆ; 47.83 ಸೆ)–2, ಅನಿತಾ ಶಿಂಧೆ (ವಿಜಯಪುರ ಕ್ರೀಡಾ ನಿಲಯ; 49.25 ಸೆ)–3
ಪುರುಷರ 4 ಕಿ.ಮೀ. ಸ್ಕ್ರ್ಯಾಚ್ ರೇಸ್: ನಾಗಪ್ಪ ಮರಡಿ (ಚಂದರಗಿ ಕ್ರೀಡಾ ಶಾಲೆ)–1, ಯಲಗುರೇಶ ಗಡ್ಡಿ (ವಿಜಯಪುರ)–2, ಪೈಗಂಬರ್ ನದಾಫ್ (ಗದಗ)–3

ಮಹಿಳೆಯರ 4 ಕಿ.ಮೀ. ಸ್ಕ್ರ್ಯಾಚ್ ರೇಸ್: ರೇಣುಕಾ ದಂಡಿನ (ವಿಜಯಪುರ ಕ್ರೀಡಾ ನಿಲಯ)–1, ಸೀಮಾ ಆಡಗಲ್ (ಬಾಗಲ ಕೋಟೆ)–2, ಎನ್‌. ಲೀಲಾವತಿ (ಬೆಂಗಳೂರು)–3

ಪುರುಷರ 15 ಕಿ.ಮೀ. ಪಾಯಿಂಟ್ಸ್‌ ರೇಸ್: ಮಾಳಪ್ಪ ಮುರ್ತಣ್ಣವರ (ಬಾಗಲ ಕೋಟೆ)–1, ಆಸೀಫ್ ಅತ್ತಾರ–2, ಶಿವ ಲಿಂಗಪ್ಪ ಯಳಮೇಲಿ–3, ಇಬ್ಬರೂ ವಿಜಯ ಪುರ, ಶ್ರೀಶೈಲ ಲಾಯಣ್ಣನವರ (ಗದಗ)–4

18 ವರ್ಷದೊಳಗಿನ ಬಾಲಕರ 10ಕಿ.ಮೀ. ಪಾಯಿಂಟ್ಸ್‌ ರೇಸ್: ಸಂಜು ನಾಯಕ (ವಿಜಯಪುರ ಕ್ರೀಡಾ ನಿಲಯ)–1, ಅನೀಲ ಮಡ್ಡಿ (ಬಾಗಲಕೋಟೆ ಕ್ರೀಡಾ ನಿಲಯ)–2, ಸಂತೋಷ ವಿಭೂತಿಹಳ್ಳಿ (ಗದಗ)–3 ಪ್ರಶಾಂತ ದೇವಕ್ಕಿ (ವಿಜಯಪುರ)–4

ಮಹಿಳೆಯರ 8ಕಿ.ಮೀ. ಪಾಯಿಂಟ್ಸ್‌ ರೇಸ್: ರೇಣುಕಾ ದಂಡಿನ (ವಿಜಯಪುರ ಕ್ರೀಡಾ ನಿಲಯ)–1, ದಾನಮ್ಮ ಗುರವ್ವ–2, ರಾಜೇಶ್ವರಿ ಡುಳ್ಳಿ–3, ಇಬ್ಬರೂ ಬಾಗಲಕೋಟೆ ಕ್ರೀಡಾ ನಿಲಯ, ಸಾವಿತ್ರಿ ಹೆಬ್ಬಾಳಟ್ಟಿ (ವಿಜಯಪುರ ಕ್ರೀಡಾ ನಿಲಯ)–4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT