ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಪೆಸಿಫಿಕ್‌ ರ್‍ಯಾಲಿ: ಗೌರವ್‌ ಗಿಲ್‌–ಗ್ಲೆನ್‌ ಮೆಕ್ನೀಲ್‌ ಮುನ್ನಡೆ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಪಿಆರ್‌ಸಿ ಚಾಂಪಿ ಯನ್‌ ಚಾಲಕ ಗೌರವ್ ಗಿಲ್‌ (ಸಹ ಚಾಲಕ ಗ್ಲೆನ್‌ ಮೆಕ್ನೀಲ್‌) ಕಾಫಿ ಕಣಿವೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಏಷ್ಯಾ ಪೆಸಿಫಿಕ್‌ ರ್‍ಯಾಲಿಯ ಅಂತಿಮ ಹಾಗೂ 6ನೇ ಸುತ್ತಿನ ರ್‍ಯಾಲಿಯ ಎರಡನೇ ದಿನದ ಲೆಗ್‌–1 ಸ್ಪರ್ಧೆಯಲ್ಲಿ ಭಾರೀ ಅಂತರದ ಮುನ್ನಡೆ ಸಾಧಿಸಿದ್ದಾರೆ.

ಎಂಆರ್‌ಎಫ್‌ ತಂಡದ ಗೌರವ್‌ ಗಿಲ್‌ ಭಾನುವಾರ ಅತ್ಯಂತ ಚಾಕ ಚಕ್ಯತೆಯಿಂದ ಸ್ಕೋಡಾ ಫ್ಯಾಬಿಯಾ ಆರ್‌5 ಕಾರು ಚಾಲನೆ ಮಾಡಿದರು. ಪ್ರತಿ ಸ್ಪರ್ಧಿಗಿಂತ 7 ನಿಮಿಷ 33.6 ಸೆಕೆಂಡ್‌ ಅಂತರದ ಮುನ್ನಡೆಯಲ್ಲಿದ್ದಾರೆ.  ಈಗಾಗಲೇ ಚಾಂಪಿಯನ್‌ಶಿಪ್‌ನ 5 ಸುತ್ತುಗಳಲ್ಲಿ ಮುನ್ನಡೆ ಸಾಧಿಸಿರುವ ಗೌರವ್‌ಗೆ ಚಾಂಪಿಯನ್‌ ಪಟ್ಟದತ್ತ ಮುಂದಡಿ ಇಟ್ಟಿದ್ದಾರೆ. 

ಗೌರವ್‌ಗೆ ಪೈಪೋಟಿ ನೀಡುತ್ತಿರುವ ಕುಸ್ಕೋ ರೇಸಿಂಗ್‌ ತಂಡದ ನ್ಯೂಜಿ ಲೆಂಡ್‌ನ ಮೈಕ್‌ ಯಂಗ್‌ (ಸಹ ಚಾಲಕ ಮಾಲ್ಕಂ ರೀಡ್‌) 2ನೇ ಸ್ಥಾನದಲ್ಲಿದ್ದರೆ, ಇದೇ ತಂಡ ಪ್ರತಿನಿಧಿಸುತ್ತಿರುವ ಭಾರ ತದ ಸಂಜಯ್‌ ಟಕಾಲೆ (ಸಹ ಚಾಲಕ ಜಪಾನಿನ ಟಾಕಶೀಟಾ ನುರಿಯೋ) 3ನೇ ಸ್ಥಾನದಲ್ಲಿದ್ದಾರೆ.

ಸೂಪರ್‌ ಸ್ಪೆಷಲ್‌ ಸ್ಟೇಜ್‌ ಹಂತದಲ್ಲಿ ವೇಗದ ಚಾಲಕರಾಗಿ ಪ್ರೇಕ್ಷಕರ ಮನ ಗೆದ್ದಿದ್ದ ಯುವ ಚಾಲಕ ಜರ್ಮನಿಯ ಫ್ಯಾಬಿಯಾನ್‌ ಕ್ರೀಮ್‌ಗೆ ಚಂದ್ರಾಪುರದ ಬಳಿ ಕಾರು ಕೈಕೊಟ್ಟಿತು.  

ಐಆರ್‌ಸಿ ರ್‍ಯಾಲಿಯಲ್ಲಿ ಮೊದಲ ದಿನ ವೇಗದ ಚಾಲನೆಯಿಂದ ಗಮನ ಸೆಳೆದಿದ್ದ ಯೂನಿಸ್‌ ಇಲ್ಯಾಸ್‌ (ಸಹ ಚಾಲಕ ನಿತಿನ್‌ ಜಾಕೋಬ್‌) ಅವರ ಮಿಸ್ತುಬಿಷಿ ಸಿಡಿಯಾ ಕಾರು, ಜಾಗೀರ ಮನೆ ತೋಟದ  ಬಳಿ ಸಿಲ್ವರ್‌ ಮರಕ್ಕೆ ಡಿಕ್ಕಿಹೊಡೆದು ಅಪ ಘಾತಕ್ಕೀಡಾಯಿತು.  ಚಾಲಕ, ಸಹ ಚಾಲಕ ಕಿಟಕಿ ಮೂಲಕ  ಪಾರಾದರು.  ಇದರಿಂದಾಗಿ ಸುಮಾರು 20 ನಿಮಿಷ ಕಾಲ ರ್‍ಯಾಲಿ ಸ್ಥಗಿತಗೊಂಡಿ ತು.  

ಫಲಿತಾಂಶ:
ಎಪಿಆರ್‌ಸಿ: ಗೌರವ್‌ಗಿಲ್‌/ ಗ್ಲೆನ್‌ ಮೆಕ್ನೀಲ್‌ (ಎಂಆರ್‌ಎಫ್‌ ತಂಡ) (ಸಮಯ: 2 ಗಂಟೆ, 42 ನಿಮಿಷ 38.8 ಸೆಕೆಂಡು) –1 ನ್ಯೂಜಿಲೆಂಡ್‌ನ ಮೈಕ್‌ ಯಂಗ್‌/ ಮ್ಯಾಲ್‌ಕಮ್‌ ರೀಡ್‌ (ಕುಸ್ಕೋ ರೇಸಿಂಗ್‌ ತಂಡ) (02:50:06.4)–2, ಸಂಜಯ್‌ ಟಕಲೆ/ ನೊರಿಕೊ ಟಕೆಶೀಟಾ (ಕುಸ್ಕೋ ರೇಸಿಂಗ್‌ ತಂಡ) (03:00:06.5)– 3.

ಐಎನ್‌ಆರ್‌ಸಿ ಸಮಗ್ರ ವಿಭಾಗ: ಅಮಿತ್‌ ರಜಿತ್‌ ಘೋಷ್‌/ ಅಶ್ವಿನ್‌ ನಾಯ್ಕ್‌ (ಮಹೀಂದ್ರಾ ಅಡ್ವೆಂಚರ್‌) (01:19:34.6.)–1, ಕರ್ಣ ಕಡೂರು/ನಿಖಿಲ್‌ ಪೈ (ಯಕೋಹಮ 2ಕೆ) (01:19:42.2)–2, ಡಾ.ಬಿಕ್ಕು ಬಾಬು/ ಮಿಲೆನ್‌ ಜಾರ್ಜ್‌ (01:21:17.1)–3.
ಐಎನ್‌ಆರ್‌ಸಿ 2000: ಕರ್ಣ ಕಡೂರು/ನಿಖಿಲ್‌ ಪೈ (ಯಕೋಹಮ 2ಕೆ) (01:19:42.2)–1, ಡಾ.ಬಿಕ್ಕು ಬಾಬು/ ಮಿಲೆನ್‌ ಜಾರ್ಜ್‌ (01:21:17.1) –2, ಫಿಲಿಪೊಸ್‌ ಮಥಾಯ್‌/ ಕೆ.ಎನ್‌.ಹರೀಶ್‌ (01:30:37.0)–3.

ಎಫ್‌ಎಂಎಸ್‌ಸಿಐ ಕಪ್‌: ಎಸ್‌.ಸಿ.ಮಿಚು ಗಣಪತಿ/ ವೇಣು ರಮೇಶ್‌ ಕುಮಾರ್‌ (01.26:34.4)–1, ಕೆ.ಜೆ.ಜಾಕೋಬ್‌/ ಮನೋಜ್‌ ಮೊಹನನ್‌ (01:26:57.9)–2, ವೀರೇಶ್‌ ಪ್ರಸಾದ್‌/ ಶಾಹಿದ್‌ ಸಲ್ಮಾನ್‌ ( 01:28:44.2)–3.
ಐಆರ್‌ಸಿ: ಸಂಜಯ್‌ ಟಕಾಲೆ/ ನೊರಿಕೊ ಟಕೆಶೀಟಾ (ಕುಸ್ಕೋ ರೇಸಿಂಗ್‌ ತಂಡ) (01:12:08.1)– 1, ಅಮೋಲ್‌ ಸತೋಸ್ಕರ್‌/ ಡಾ.ದಿನೇಶ್‌ (01:28:01.4)– 2, ಶರ್ಫಾಜ್‌ ಜುನೈದ್‌/ ಆಕ್ರಿ ಅಮೀರ್‌ (01:28:28.6)– 3.

ಜಿಪ್ಸಿ ಸ್ಟಾರ್‌ (ನಾನ್‌ ಚಾಂಪಿಯನ್‌): ಸಂಜಯ್‌ ಅಗರ್‌ವಾಲ್‌/ ಎನ್‌.ಸ್ಮಿತಾ (01:32:46.0)–1, ಅವಿನ್‌ ನಂಜಪ್ಪ/ ಸೂರಜ್‌ ಶೆಟ್ಟಿ (01:36:26.8)–2, ಕೆ.ವಿ.ಧೀರಜ್‌/ ರವಿ (01:46:39.5)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT