ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದಿಂದ ಬೇರೆ ಖಾತೆಗೆ ಹಣ ಜಮೆ

Last Updated 4 ಡಿಸೆಂಬರ್ 2016, 19:46 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ನಲ್ಲಿನ ಜನಸಂದಣಿಯ ಗೊಂದಲದಿಂದ ಮಹಿಳೆಯೊಬ್ಬರ ಹಣವನ್ನು ಬ್ಯಾಂಕ್‌ ಸಿಬ್ಬಂದಿ ಬೇರೆಯವರ ಖಾತೆಗೆ ಹಾಕಿದ ಪ್ರಸಂಗ ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ನಡೆದಿದೆ.

ಬ್ಯಾಂಕ್‌ ಸಿಬ್ಬಂದಿ ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದು ಆದಷ್ಟು ಬೇಗ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಮನೆಗೆಲಸ ಮಾಡುವ ಲಕ್ಷ್ಮಿ ಎಂಬುವರು ನವೆಂಬರ್ 10ರಂದು ರದ್ದಾದ ನೋಟುಗಳನ್ನು ಸುಂಕದಕಟ್ಟೆ ಶಾಖೆಯಲ್ಲಿನ ಖಾತೆಯಲ್ಲಿ ಜಮೆ ಮಾಡಿದ್ದರು. ಹತ್ತು ದಿನಗಳ ಬಳಿಕ ಹಣವನ್ನು ಪಡೆಯಲು ಹೋದಾಗ ಹಣ ಖಾತೆಗೆ ಜಮೆ ಆಗಿಲ್ಲದಿರುವುದು ಗಮನಕ್ಕೆ ಬಂದಿದೆ.

‘ಇತ್ತಿಚೆಗೆ ಬ್ಯಾಂಕ್ ಖಾತೆಯನ್ನು ತೆರೆದು, ಅದಕ್ಕೆ ಆಧಾರ್‌ ಸಂಖ್ಯೆ ಜೋಡಿಸಿದ್ದೇನೆ. ಅದರಲ್ಲಿ ₹2 ಸಾವಿರ ಉಳಿತಾಯ ಮಾಡಿದ್ದೆ. ನವೆಂಬರ್ 10ರಂದು ಹಳೆಯ ₹500ರ  ನೋಟುಗಳನ್ನು ಜಮೆ ಮಾಡಿದ್ದೆ. ನ.20 ರಂದು ಚಿಕಿತ್ಸೆಗಾಗಿ ಹಣವನ್ನು ಪಡೆಯಲು ಹೋದಾಗ ಖಾತೆಗೆ ಹಣ ಜಮೆ ಆಗಿಲ್ಲದಿರುವುದು ಗೊತ್ತಾಯಿತು’ ಎಂದು ಲಕ್ಷ್ಮಿ ತಿಳಿಸಿದರು.

‘ತಿಂಗಳ ಆರಂಭದಲ್ಲಿ ಹೆಚ್ಚು ನೌಕರರು ವೇತನದ ಹಣ ಪಡೆಯಲು ಬಂದಿದ್ದರು. ಆಗ ಜನಸಂದಣಿಯು ಹೆಚ್ಚಿತ್ತು. ಆ ಗೊಂದಲದಲ್ಲಿ  ಮಹಿಳೆಯ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಸಿಬ್ಬಂದಿ ತಪ್ಪಾಗಿ ನಮೂದಿಸಿದ್ದರು. ಇದರಿಂದ ಹಣ ಬೇರೆಯವರ ಖಾತೆಗೆ ಜಮೆಯಾಗಿದೆ. ಆಗಿರುವ ತಪ್ಪನ್ನು ಆದಷ್ಟು ಬೇಗ ಸರಿಪಡಿಸಲಾಗುವುದು’ ಎಂದು ಬ್ಯಾಂಕ್‌ನ ವ್ಯವಸ್ಥಾಪಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT