ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲಿಮಾರು ಪರ್ಯಾಯ: ಸಿದ್ಧತೆ ಆರಂಭ

Last Updated 5 ಡಿಸೆಂಬರ್ 2016, 5:20 IST
ಅಕ್ಷರ ಗಾತ್ರ

ಉಡುಪಿ: ಪಲಿಮಾರು ಮಠದ ವಿದ್ಯಾ ಧೀಶ ಸ್ವಾಮೀಜಿ ಅವರು ಭಾನುವಾರ ಬಾಳೆ ಮುಹೂರ್ತ ನೆರವೇರಿಸುವ ಮೂಲಕ 2018, ಜನವರಿ 18ರಿಂದ ಆರಂಭವಾಗಲಿರುವ ಪಲಿಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗೆ ಚಾಲನೆ ನೀಡಿದರು.

ಚಂದ್ರಮೌಳೇಶ್ವರ, ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಶ್ರೀಕೃಷ್ಣ ಮಠಕ್ಕೆ ತೆರಳಿದ ಅವರು, ಶ್ರೀಕೃಷ್ಣ ಮುಖ್ಯ ಪ್ರಾಣ ದೇವರನ್ನು ಪ್ರಾರ್ಥಿಸಿದರು. ಅಷ್ಟ ಮಠಗಳಿಗೆ ಹಾಗೂ ಭಂಡಾರಕೇರಿ ಉತ್ತರಾದಿ ಮಠಕ್ಕೆ ಅವರು ದಾನ ನೀಡಿದರು.

ಆ ನಂತರ ಪಲಿಮಾರು ಮಠದಿಂದ ಬಾಳೆ ಗಿಡ, ತುಳಸಿ ಗಿಡ ಮತ್ತು ಕಬ್ಬಿನ ಜಲ್ಲೆಯನ್ನು ಮೆರವಣಿಗೆ ಮೂಲಕ ತರ ಲಾಯಿತು. ರಥಬೀದಿಯನ್ನು ಒಂದು ಸುತ್ತು ಹಾಕಿದ ನಂತರ ಸರಿಯಾಗಿ 8.32 ಕ್ಕೆ ರಾಜಾಂಗಣದ ಪಾರ್ಕಿಂಗ್‌ ಆವರ ಣದ ಬಳಿ ಇರುವ ಮಠದ ನಿವೇಶನ ದಲ್ಲಿ ಬಾಳೆ ಗಿಡಗಳನ್ನು ನೆಡ ಲಾಯಿತು.

ಮಠದ ದಿವಾನ ಹಾಗೂ ಪುರೋಹಿ ತರಾದ ಶಿಬರೂರು ವೇದವ್ಯಾಸ ತಂತ್ರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಅಷ್ಟ ಮಠಗಳ 32ನೇ ಆವೃತ್ತಿಯ ಪರ್ಯಾಯದಲ್ಲಿ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಪರ್ಯಾಯ ಪೀಠ ಏರುತ್ತಿರುವುದು ಇದು ಎರಡನೇ ಬಾರಿ.

ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌, ಕಾಪು ಶಾಸಕ ವಿನಯಕುಮಾರ್‌ ಸೊರಕೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಯು.ಆರ್‌. ಸಭಾಪತಿ, ನಗರಸಭಾ ಸದಸ್ಯರಾದ ಯಶ್‌ಪಾಲ್‌ ಸುವರ್ಣ, ಶ್ಯಾಂಪ್ರಸಾದ್‌ ಕುಡ್ವ, ಜನಾರ್ದನ ಭಂಡಾರ್ಕರ್‌, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್‌, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕಲ್ಕೂರ, ವಿಶ್ವ ಹಿಂದೂ ಪರಿಷತ್‌ನ ಮುಖಂಡ ಎಂ.ಬಿ. ಪುರಾಣಿಕ್‌, ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಂಶಿ ಕೃಷ್ಣ ಆಚಾರ್ಯ, ಗೋಪಾಲಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT