ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಸಿ ಉದ್ಯಾನ ನಿರ್ಮಾಣ, ವಸತಿ ವ್ಯವಸ್ಥೆ

ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿಕೆ
Last Updated 5 ಡಿಸೆಂಬರ್ 2016, 5:25 IST
ಅಕ್ಷರ ಗಾತ್ರ

ಉಡುಪಿ: ‘ನನ್ನ ಪರ್ಯಾಯ ಅವಧಿ ಯಲ್ಲಿ ಶ್ರೀಕೃಷ್ಣಮಠದ ಆವರಣದಲ್ಲಿಯೇ ತುಳಸಿ ಉದ್ಯಾನವನವನ್ನು ನಿರ್ಮಿಸುವ ಚಿಂತನೆ ಇದೆ. ಅದಕ್ಕಾಗಿ ಈಗಾಗಲೇ ಜಾಗವನ್ನು ಗುರುತಿಸುವ ಕಾರ್ಯವೂ ನಡೆಯುತ್ತಿದೆ’ ಎಂದು ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

ಬಾಳೆ ಮುಹೂರ್ತದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ಕಳೆದ ಪರ್ಯಾಯ ಅವಧಿ ಯಲ್ಲಿ ಪ್ರತಿ ಭಾನುವಾರ ಲಕ್ಷ ತುಳಸಿ ಆರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊ ಳ್ಳಲಾಗಿತ್ತು. ಈ ಬಾರಿ ಲೋಕಕಲ್ಯಾ ಣಾರ್ಥವಾಗಿ ಪ್ರತಿದಿನ ತುಳಸಿ ಆರ್ಚನೆ ಮಾಡುವ ಸಂಕಲ್ಪ ಮಾಡಿಕೊಂಡಿದ್ದೇನೆ. ಈಗಾಗಲೇ ಪಲಿಮಾರು ಮೂಲ ಮಠದಲ್ಲಿ ಒಂದು ಎಕರೆ ಜಾಗದಲ್ಲಿ ತುಳಸಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಆದರೆ, ಶ್ರೀಕೃಷ್ಣಮಠದ ಆವರಣ ದಲ್ಲಿಯೇ ದೊಡ್ಡಮಟ್ಟದಲ್ಲಿ ತುಳಸಿ ಬೆಳೆಸುವ ಯೋಜನೆ ರೂಪಿಸಲಾ ಗುವುದು ಎಂದರು.

ಹಿಂದಿನ ಪರ್ಯಾಯ ಅವಧಿಯಲ್ಲಿ ಕೈಗೊಳ್ಳಲಾದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬರುತ್ತೇನೆ. ಬಡ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಾಯ ನೀಡುವುದರ ಜತೆಗೆ ಪರಂ ಪರಾಗತ ವಿದ್ಯೆಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಬೇರೆ ಬೇರೆ ಊರು ಗಳಿಂದ ಬರುವ ಭಕ್ತರಿಗೆ ಸುಸಜ್ಜಿತವಾದ ವಸತಿಗೃಹವನ್ನು ನಿರ್ಮಿಸಲಾಗುವುದು.  ಹಾಗೆಯೇ 14 ವರ್ಷಗಳಿಂದ ನಡೆಯು ತ್ತಿರುವ  ಚಿಣ್ಣರ ಸಂತರ್ಪಣೆ ಕಾರ್ಯಕ್ರ ಮವನ್ನು ಇನ್ನಷ್ಟು ವಿಸ್ತಾರವಾಗಿ ನಡೆಸುವ ಚಿಂತನೆ ಇದೆ ಎಂದು ತಿಳಿಸಿದರು.

ಶ್ರೀಕೃಷ್ಣ ದೇವರಿಗೂ ಬಾಳೆ ಪತ್ರ, ತುಳಸಿ ಪತ್ರ ಬಹಳ ಇಷ್ಟ. ತುಳಸಿಯನ್ನು ಶ್ರೀಕೃಷ್ಣನ ಪಾದದಲ್ಲಿ ಇಟ್ಟು ಪೂಜೆ ನಡೆಸಿದರೆ ಮೋಕ್ಷ ಲಭಿಸುತ್ತದೆ. ಬಾಳೆ ಬಹು ಉಪಯೋಗಿ ವಸ್ತು. ತುಳಸಿ ಆರೋಗ್ಯ ವರ್ಧಕವಾಗಿದೆ. ಮನುಷ್ಯನಿಗೆ ಮತ್ತು ಗಿಡಮರಗಳಿಗೆ ಅನ್ಯೋನ್ಯ ಸಂಬಂಧವಿದೆ. ಆದರೆ, ಮನುಷ್ಯ ಸ್ವಾರ್ಥದಿಂದ ಗಿಡಮರಗಳನ್ನು ನಾಶ ಮಾಡುತ್ತಿದ್ದಾನೆ, ಆ ಮೂಲಕ ತನ್ನ ಆರೋಗ್ಯವನ್ನು ತಾನೇ ಹಾಳು ಮಾಡಿ ಕೊಳ್ಳುತ್ತಿದ್ದಾನೆ ಎಂದು ಹೇಳಿದರು.

ಹೊಸತನ ಬಯಸುವ ಸ್ವಾಮೀಜಿ:
ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಸಂಪ್ರದಾಯದ ಕಟ್ಟುಪಾಡುಗಳನ್ನು ಬಿಡದೆ ಹೊಸತನ ವನ್ನು ಬಯಸುವ ಪ್ರವೃತ್ತಿ ಹೊಂದಿದ್ದಾರೆ. ಮುಂದಿನ ಪರ್ಯಾಯದ ಅವಧಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ತಾಂತ್ರಿಕವಾದ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಇಡೀ ದೇಶಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದು ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಸ್ವೈಪಿಂಗ್‌ ಸಾಧನ ಬಿಡುಗಡೆಗೊಳಿಸಿ ಮಾತನಾಡಿದ ಅವರು,  ಆಧುನಿಕ ತಂತ್ರಜ್ಞಾನಕ್ಕೆ ಪ್ರತಿಯೊಬ್ಬರು ಒಗ್ಗಿಕೊಳ್ಳ ಬೇಕಾದ ಅನಿವಾರ್ಯತೆ ಇದೆ.  ಮುಂದಿನ ದಿನಗಳಲ್ಲಿ ಎಲ್ಲ ವ್ಯವ ಹಾರಗಳು ತಾಂತ್ರಿಕವಾಗಿಯೇ ನಡೆಯಲಿವೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳನ್ನು ಹೊಂದುವುದು ಅನಿವಾರ್ಯವಾಗಲಿದೆ ಎಂದರು.

ಪಲಿಮಾರು ಮಠದ ಆರ್‌.ಕೆ. ಪ್ರಹ್ಲಾದ್‌ ಮಾತನಾಡಿ, ಪರ್ಯಾಯದ ಅವಧಿಯಲ್ಲಿ ಮಠದ ಆಡಳಿತವನ್ನು ಧಾರ್ಮಿಕ ಮತ್ತು ತಾಂತ್ರಿಕವಾಗಿ ಬಹ ಳಷ್ಟು ಉತ್ತಮ ರೀತಿಯಲ್ಲಿ ನಡೆಸುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಮಠದ ವತಿಯಿಂದ ನೂತನ ವೆಬ್‌ಸೈಟ್‌ ಹಾಗೂ ಮೊಬೈಲ್‌ ಅಪ್ಲಿಕೇ ಷನ್‌ ಸಿದ್ಧಪ ಡಿಸಲಾಗಿದೆ. ಇದರಲ್ಲಿ ಸ್ವಾಮೀಜಿ ಪ ರ್ಯಾಯ ಪೂರ್ವಭಾವಿಯಾಗಿ ನಡೆ ಸುವ ಸಂಚಾರ, ಮಠದಲ್ಲಿ ಪ್ರತಿದಿನ ನಡೆ ಯುವ ಪೂಜೆ, ಧಾರ್ಮಿಕ ಹಾಗೂ ಸಾಂ ಸ್ಕೃತಿಕ ಕಾರ್ಯಕ್ರಮಗಳ ವಿವರ ದೊರೆ ಯಲಿದೆ. ಹಾಗೆಯೇ ನಗದು ರಹಿತ ವ್ಯವಹಾರ ಮಾಡುವ ಉದ್ದೇಶದಿಂದ ಹಾಗೂ ಭಕ್ತ ರು ನೀಡುವ ಕಾಣಿಕೆಯನ್ನು ಸಂಗ್ರಹಿಸಲು ಸ್ವೈಪಿಂಗ್‌ ಮಿಷನ್‌ ಅನ್ನು ಖರೀ ದಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT