ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಹೋಟೆಲ್‍ನಲ್ಲಿ ಅಗ್ನಿ ಅವಘಡ: 11 ಸಾವು

Last Updated 5 ಡಿಸೆಂಬರ್ 2016, 6:07 IST
ಅಕ್ಷರ ಗಾತ್ರ

ಕರಾಚಿ: ಇಲ್ಲಿನ ಶಹರಹ್ ಎ ಫೈಜಲ್ ‍ಕಟ್ಟಡದಲ್ಲಿರುವ ರೆಜೆಂಟ್ ಪ್ಲಾಜಾ ಹೋಟೆಲ್‌ನಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದ್ದು 11 ಮಂದಿ ಸಾವಿಗೀಡಾಗಿದ್ದಾರೆ.

ಸಾವಿಗೀಡಾದವರಲ್ಲಿ ಮೂವರು ಮಹಿಳೆಯರಿದ್ದಾರೆ. 30 ಮಂದಿಗೆ ಗಾಯಗಳಾಗಿದ್ದು, ರಕ್ಷಣಾ ಕಾರ್ಯಗಳು ಮುಂದುವರಿದಿವೆ.

ಹೋಟೆಲ್ ಅಡುಗೆ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ 6 ಅಂತಸ್ತಿನ ಕಟ್ಟಡಕ್ಕೆ ವ್ಯಾಪಿಸಿದ್ದು, ಆ ಹೋಟೆಲ್‍ ರೂಂಗಳಲ್ಲಿ 100ಕ್ಕೂ ಹೆಚ್ಚು ಅತಿಥಿಗಳು ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹೋಟೆಲ್‍ನಲ್ಲಿ ಸಿಲುಕಿರುವ ಜನರನ್ನು ಹೊರತೆಗೆದು ರಕ್ಷಣಾ ಕಾರ್ಯ ಮುಂದುವರಿಸಿದೆ.

ಬೆಂಕಿ ನಂದಿಸಲು ಮೂರು ಗಂಟೆಗಳೇ ಬೇಕಾಯಿತು ಎಂದು ಹೇಳಿದ ಈದಿ ಫೌಂಡೇಷನ್‍ನ ಫೈಜಲ್ ಈದಿ, ಈ ಅವಘಡದಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT