ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ಆರೋಗ್ಯ ಸ್ಥಿತಿ ಚಿಂತಾಜನಕ; ಇಸಿಎಂಒ ಚಿಕಿತ್ಸೆ ಮುಂದುವರಿಕೆ

Last Updated 5 ಡಿಸೆಂಬರ್ 2016, 10:13 IST
ಅಕ್ಷರ ಗಾತ್ರ

ಚೆನ್ನೈ: ಹೃದಯ ಸ್ತಂಭನಕ್ಕೊಳಗಾಗಿ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಅವರಿಗೀಗ ಇಸಿಎಂಒ ಚಿಕಿತ್ಸೆ ಮುಂದುವರಿಸಲಾಗಿದ್ದು, ವೈದ್ಯರ ತಂಡ ತೀವ್ರ ನಿಗಾ ವಹಿಸಿದೆ ಎಂದು ಅಪೋಲೊ ಆಸ್ಪತ್ರೆ ಟ್ವೀಟ್ ಮಾಡಿದೆ.

ಜಯಾ ಅವರಿಗೆ ಆಗಿದ್ದೇನು?
ಭಾನುವಾರ ಸಂಜೆ ಜಯಲಲಿತಾ ಅವರಿಗೆ ಹೃದಯ ಸ್ತಂಭನ (Cardiac Arrest) ಆಗಿತ್ತು. ಹೃದಯ ಸ್ತಂಭನ ಅಂದರೆ ಹೃದಯ ಹಠಾತ್ ಕೆಲಸ ನಿಲ್ಲಿಸುವುದು. ಹೃದಯ ಸ್ತಂಭನವಾದರೆ ವ್ಯಕ್ತಿ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ತೀವ್ರ ಎದೆನೋವು ಕಾಣಿಸಿಕೊಂಡು ನಾಡಿ ಬಡಿತ ವಿಪರೀತ ಹೆಚ್ಚಳವಾಗುತ್ತದೆ.

ಹೃದಯಾಘಾತಕ್ಕೂ ಹೃದಯ ಸ್ತಂಭನಕ್ಕೂ ವ್ಯತ್ಯಾಸವಿದೆ. ಹೃದಯಾಘಾತ ಎಂದರೆ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ಅಡ್ಡಿ ಸಂಭವಿಸುವುದು.

ಹೃದಯಾಘಾತ ಸಂಭವಿಸಿದಾಗ ಎದೆ ನೋವು, ಮೈ ಕೈ ನೋವು, ವಿಪರೀತ ಬೆವರುವಿಕೆ, ಉಸಿರುಗಟ್ಟುವಿಕೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಅದೇ ರೀತಿ ಸ್ಟ್ರೋಕ್ . ಇದು ಮೆದುಳಿಗೆ ಸಂಬಂಧಿಸಿದ್ದು. ಮೆದುಳಿನಲ್ಲಿ ರಕ್ತ ಸಂಚಾರ ಸ್ಥಗಿತಗೊಂಡಾಗ ಸ್ಟ್ರೋಕ್ ಸಂಭವಿಸುತ್ತದೆ. ಹೀಗೆ ಆದಾಗ ಮಾನಸಿಕ ಸ್ಥಿರತೆ ಇಲ್ಲದಾಗುವುದು, ಮಾತನಾಡಲು ಕಷ್ಟ (ತೊದಲುವಿಕೆ), ನಡೆದಾಡಲು ಮತ್ತು ಮಂದ ದೃಷ್ಟಿ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಏನಿದು ಇಸಿಎಂಒ (ECMO) ಚಿಕಿತ್ಸೆ?
ಎಕ್ಸ್ಟ್ರಾಕಾರ್ಪೊರಿಯಲ್ ಮೆಂಬ್ರೇನ್ ಹಾರ್ಟ್ ಅಸಿಸ್ಟ್ ಡಿವೈಸ್ (extracorporeal membrane heart assist device) ಬಳಸಿ ನೀಡಲಾಗುವ ಚಿಕಿತ್ಸೆ ಇದು.

ಚಿಕಿತ್ಸೆ ನೀಡುವುದು ಹೇಗೆ?
ಒಬ್ಬ ವ್ಯಕ್ತಿಯ ಶ್ವಾಸಕೋಶವು ವ್ಯಕ್ತಿಯ ದೇಹ ಬದುಕುಳಿಯಲು ಬೇಕಾದಷ್ಟು ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗದೇ ಇದ್ದಾಗ ಇಸಿಎಂಒ ಸಾಧನದ ಸಹಾಯದಿಂದ ಕೃತಕ ಉಸಿರಾಟ ನೀಡಲಾಗುತ್ತದೆ.

ಹೃದಯ ಸ್ತಂಭನ ಅಥವಾ ಹೃದಯಕ್ಕೆ ಸಂಬಂಧಪಟ್ಟ ಅಂಗಾಂಗಗಳ ವೈಫಲ್ಯತೆ ಕಾಣಿಸಿಕೊಂಡಾಗ ದೇಹಕ್ಕೆ ಆಮ್ಲಜನಕವನ್ನು ಪೂರೈಸಲು ಈ ಚಿಕಿತ್ಸೆ ನೀಡಲಾಗುತ್ತದೆ.

ಈ ಸಾಧನದ ಮೂಲಕ ವ್ಯಕ್ತಿಯ ದೇಹದಿಂದ  ರಕ್ತವನ್ನು ತೆಗೆದು ಅದರಲ್ಲಿರುವ ಕಾರ್ಬನ್ ಡೈ ಆಕ್ಸೆಡ್ ಅಂಶವನ್ನು ಕಡಿಮೆ ಮಾಡಿ, ರಕ್ತದ ಕಣಗಳಿಗೆ ಆಕ್ಸಿಜನ್ (ಆಮ್ಲಜನಕ)ವನ್ನು ನೀಡುತ್ತದೆ. ಈ ಪ್ರಕ್ರಿಯೆಯಿಂದ ವ್ಯಕ್ತಿ ಬದುಕುಳಿಯುವಂತೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT