ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ವಿಜ್ಞಾನ ಮಾದರಿ ಪ್ರದರ್ಶನ

Last Updated 5 ಡಿಸೆಂಬರ್ 2016, 10:21 IST
ಅಕ್ಷರ ಗಾತ್ರ

ಹನೂರು: ವಿಜ್ಞಾನ ಮಾದರಿಗಳನ್ನು ತಯಾರಿಸಿ, ಅದರ ಸ್ವರೂಪ ಅರಿಯುವ ಮೂಲಕ ವಿದ್ಯಾರ್ಥಿಗಳು ವಿಜ್ಞಾನದ ವಿಷಯದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು  ಮುಖ್ಯಶಿಕ್ಷಕಿ ಮರ್ಸಿದಾಸ್ ಭಾನುವಾರ ತಿಳಿಸಿದರು.

ಒಡ್ಡರದೊಡ್ಡಿ ಗ್ರಾಮದ ಸಂತ ಚಾರ್ಲ್ಸ್ ಗ್ರಾಮೀಣ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಲಿಷ್ಟಕರ ವಿಷಯ ಎಂಬ ಭಾವನೆಯಿದೆ. ಆದರೆ, ಆಸಕ್ತಿಯಿಂದ ವಿದ್ಯಾರ್ಥಿಯೇ ವಿಜ್ಞಾನ ಮಾದರಿ ರೂಪಿಸಲು ಮುಂದಾದಲ್ಲಿ ಸುಲಭವಾಗಿ ಅರ್ಥವಾಗಲಿದೆ ಎಂದು ಹೇಳಿದರು.

ವಿಜ್ಞಾನ ಆಸಕ್ತಿ ಬೆಳೆಸುವ ಇಂಥ ಪ್ರಯೋಗ, ಚಟುವಟಿಕೆಗಳನ್ನು  ನಿರಂತರವಾಗಿ ಏರ್ಪಡಿಸಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಬೇಕು ಎಂದರು.
ಗಮನಸೆಳೆದ ಮಾದರಿಗಳು: ನಿರುಪ ಯೋಗಿ ವಸ್ತುಗಳನ್ನು ಬಳಸಿ ವಿದ್ಯಾರ್ಥಿ ಗಳೇ ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳು ಪೋಷಕರು, ಶಿಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಗ್ರಾಮದ ಸಂತ ಮೇರಿ ತಮಿಳು ಕಿರಿಯ ಪ್ರಾಥಮಿಕ ಶಾಲೆ, ಮಾರ್ಟಳ್ಳಿಯ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಅಂಥೋನಿಯಾರ್ ಕೋಯಿಲ್‌ನ  ಸರ್ಕಾರಿ ಹಿರಿಂು ಪ್ರಾಥಮಿಕ ಶಾಲೆ, ಕಡ ಬೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿದರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಭೇಟಿ ನೀಡಿ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿದರು.

ಸಂತ ಮೇರಿ ತಮಿಳು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮದಲೈಯಮ್ಮಾಳ್, ಅನಿಷಾ ಸಂಸ್ಥೆಯ ಸಂಯೋಜಕಿ ವಳ್ಳಿಯಮ್ಮಾಳ್,  ಮುಖ್ಯ ಶಿಕ್ಷಕ ಜಯಶೀಲನ್ ಹಾಗೂ ಜಾನ್‌ಬ್ರಿಟ್ಟೊ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT