**
ಫೇಸ್‌ಬುಕ್‌ನಲ್ಲಿ ಗೇಮ್ಸ್‌ಗಳ ಪರಿಚಯ…
ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಆಕರ್ಷಕ ಹೊಸ ಹೊಸ ಗೇಮ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರು ಆನ್‌ಲೈನ್‌ನಲ್ಲಿ ತಮ್ಮ ಸ್ನೇಹಿತರ ಜತೆ ಲೈವ್ ಗೇಮ್ಸ್‌ಗಳನ್ನು ಆಡಬಹುದು ಎಂದು ಫೇಸ್‌ಬುಕ್ ಸಂಸ್ಥೆ ತಿಳಿಸಿದೆ. ಈ ಸೌಲಭ್ಯವನ್ನು ಮೆಸೆಂಜರ್ ಬಳಕೆದಾರರು ಸಹ ಬಳಸಬಹುದಾಗಿದೆ.
ಫೇಸ್‌ಬುಕ್ ಮತ್ತು ಮೆಸೆಂಜರ್ ಆ್ಯಪ್‌ನಲ್ಲಿ ಖಾತೆದಾರರು ತಮ್ಮ ಪುಟವನ್ನು ತೆರೆದಾಗ ಮೆನು ಬಾರ್‌ನಲ್ಲಿ ಗೇಮ್ಸ್ ಐಕಾನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ವಿವಿಧ ಗೇಮ್ಸ್‌ಗಳು ತೆರೆದುಕೊಳ್ಳುತ್ತವೆ. ಪ್ಯಾಕ್-ಮ್ಯಾನ್, ಸೇರಿದಂತೆ ಹತ್ತಕ್ಕೂ ಹೆಚ್ಚು ಗೇಮ್ಸ್‌ಗಳನ್ನು ಅಳವಡಿಸಲಾಗಿದೆ. ಫೇಸ್‌ಬುಕ್ ಮತ್ತು ಮೆಸೆಂಜರ್ ಬಳಕೆದಾರರು ತಮ್ಮ ಖಾತೆಯಲ್ಲಿರುವ ಸ್ನೇಹಿತರ ಜತೆ ಮಾತ್ರ ಈ ಗೇಮ್‌ಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ.
ಗೂಗಲ್ ಪ್ಲೆಸ್ಟೋರ್: FACEBOOK-GAME
**
ಆಫ್‌ಲೈನ್‌ನಲ್ಲಿ ಸಿನಿಮಾ ಡೌನ್‌ಲೋಡ್ ಮಾಡುವ ಆ್ಯಪ್…
ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವಿಡಿಯೊ ಸಂಸ್ಥೆ ‘ನೆಟ್‌ಫ್ಲಿಕ್ಸ್’ (Netflix) ಇದೀಗ ಆಫ್‌ಮೋಡ್‌ನಲ್ಲಿ ಸಿನಿಮಾ ಮತ್ತು ಧಾರಾವಾಹಿಗಳನ್ನು ಡೌನ್‌ಲೋಡ್್ ಮಾಡಿಕೊಳ್ಳುವ ಅಪ್ಲಿಕೇಷನ್ ಪರಿಚಯಿಸಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಅಮೆರಿಕದ ಬಹುದೊಡ್ಡ ಆನ್‌ಲೈನ್ ಮನರಂಜನಾ ವೆಬ್ ಪೋರ್ಟಲ್ ಆಗಿದೆ. ವಿಶ್ವದಲ್ಲಿ ನೂರಕ್ಕೂ ಹೆಚ್ಚು ದೇಶಗಳಲ್ಲಿನ ಲಕ್ಷಾಂತರ ಗ್ರಾಹಕರು ಈ ಪೋರ್ಟಲ್‌ನ ಹಿಂಬಾಲಕರಾಗಿದ್ದಾರೆ.
ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇಂಟರ್‌ನೆಟ್ ಸಂಪರ್ಕದ ಮೂಲಕ ಅನಿಯಮಿತ ಮನರಂಜನೆ (ಸಿನಿಮಾಗಳು, ಧಾರಾವಾಹಿ, ಆನ್‌ಲೈನ್ ಗೇಮ್ಸ್, ವಿಡಿಯೊ ಮತ್ತು ಆಡಿಯೊ) ಪಡೆಯಬಹುದಾಗಿತ್ತು. ಇದೀಗ ಇಂಟರ್‌ನೆಟ್ ಸಂಪರ್ಕವಿಲ್ಲದೆ ತಮ್ಮ ಇಷ್ಟದ ಸಂಗೀತ, ವಿಡಿಯೊ ಸಿನಿಮಾ, ಧಾರಾವಾಹಿಗಳನ್ನು ಲೈವ್ ಸ್ಟ್ರೀಮ್‌ನಲ್ಲಿ ವೀಕ್ಷಿಸುವ ಮತ್ತು ಡೌನ್್ಲೋಡ್ ಮಾಡುವ ಸೌಕರ್ಯವನ್ನು ಕಲ್ಪಿಸಲಾಗಿದೆ. ಇದು ಯೂಟೂಬ್‌ನ ಆಫ್‌ಲೈನ್ ಅಪ್ಲಿಕೇಷನ್‌ಗಿಂತ ಭಿನ್ನವಾಗಿದೆ.
ಗೂಗಲ್ ಪ್ಲೆಸ್ಟೋರ್: Netflix