ಮಹಾಭಾರತದ ಕಾಲದಿಂದಲೂ ಜೂಜಾಟದ ಬೇರುಗಳು ನಮ್ಮ ಸಂಸ್ಕೃತಿಯಲ್ಲಿ ಗಟ್ಟಿಯಾಗಿ ಬೇರೂರಿವೆ. ಜೂಜಾಟಕ್ಕೆ ಸಾಂಸ್ಕೃತಿಕ ಮುಖ, ಸಾಮಾಜಿಕ ಕಳಂಕದ ಜತೆಗೆ ಆರ್ಥಿಕ ಆಯಾಮಗಳೂ ಇವೆ. ಕ್ರೀಡೆ, ಸ್ಪರ್ಧೆಗಳ ಗೆಲುವು ಊಹಿಸಿ ಹಣ ಬಾಜಿಗೆ ಕಟ್ಟಿ ಅಂತಿಮ ಫಲಿತಾಂಶದ ಕಾತರದ ಕ್ಷಣಗಳನ್ನು ಎದುರು ನೋಡುವ, ವಿಶಿಷ್ಟ ತಳಮಳ ಅನುಭವಿಸುವ ಮತ್ತು ಸಾಕಷ್ಟು ಮನರಂಜನೆಯನ್ನೂ ನೀಡುವ ಜೂಜಿನ ಬಲೆಗೆ ಬಿದ್ದವರು ಅದರಿಂದ ಹೊರ ಬರಲಾರದೆ ಒದ್ದಾಡುವ ಅಸಂಖ್ಯ ನಿದರ್ಶನಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.