ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ತಂಡದಲ್ಲಿ ಹತ್ತು ಆಟಗಾರರು!

ಮನೀಷ್ ಪಾಂಡೆ ಬದಲು ಬೇರೆ ಆಟಗಾರನ ಆಯ್ಕೆಗೆ ಒಪ್ಪದ ಮಹಾರಾಷ್ಟ್ರ
Last Updated 7 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮೊಹಾಲಿ:  ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ರಾಜ್ಯದ ಮನೀಷ್‌ ಪಾಂಡೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯ ದಲ್ಲಿ ಹತ್ತೇ ಆಟಗಾರರೊಂದಿಗೆ ಆಡ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಬುಧವಾರ ಆರಂಭವಾದ ಪಂದ್ಯದಲ್ಲಿ ಕರ್ನಾಟಕ ಟಾಸ್‌ ಜಯಿಸಿ ಫೀಲ್ಡಿಂಗ್ ಮಾಡಿತು. ಈ ಪಂದ್ಯವನ್ನು ವೀಕ್ಷಿಸಲು ಬಿಸಿಸಿಐ ಆಯ್ಕೆ ಸಮಿತಿಯ ಕೇಂದ್ರ ವಲಯದ ಸದಸ್ಯ ಗಗನ್‌ ಖೋಡಾ ಇಲ್ಲಿಗೆ ಬಂದಿದ್ದಾರೆ. ಮನೀಷ್‌ ಪಾಂಡೆ ಫೀಲ್ಡಿಂಗ್ ಮಾಡುವುದನ್ನು ಗಮನಿಸಿ ಖೋಡಾ ಅವರು ಮನೀಷ್‌ ಆಡಲು ‘ಫಿಟ್‌’ ಆಗಿರುವ ವಿಷಯವನ್ನು ಆಯ್ಕೆ ಸಮಿತಿ ಮುಖ್ಯಸ್ಥರ ಗಮನಕ್ಕೆ ತಂದ ಬಳಿಕ ಸಮಿತಿ ಮನೀಷ್‌ ಅವರನ್ನು ಟೆಸ್ಟ್‌ ಸರಣಿಗೆ ಆಯ್ಕೆ ಮಾಡಿತು.

ಮೊಹಾಲಿ ಮತ್ತು ಚಂಡಿಗಡದಲ್ಲಿ ಮಂದಬೆಳಕು ಇದ್ದ ಕಾರಣ ಬುಧವಾರ ಬಹುತೇಕ ವಿಮಾನಗಳ ಹಾರಾಟ ನಡೆ ಯಲಿಲ್ಲ. ಆದ್ದರಿಂದ ಮನೀಷ್‌ ಮೊಹಾ ಲಿಯಿಂದ ದೆಹಲಿಯವರೆಗೆ ಕಾರಿ ನಲ್ಲಿ ತೆರಳಿ ಅಲ್ಲಿಂದ ವಿಮಾನದ ಮೂಲಕ ಮುಂಬೈನಲ್ಲಿ ಭಾರತ ತಂಡ ಸೇರಿಕೊಂಡರು. 
ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವ ವೇಳೆ ಅಜಿಂಕ್ಯ ರಹಾನೆ ಕೈಗೆ ಬಲವಾಗಿ ಚೆಂಡು ಬಡಿದ ಕಾರಣ ಅವರು ಗಾಯ ಗೊಂಡಿದ್ದಾರೆ. ಆದ್ದರಿಂದ ಬಿಸಿಸಿಐ ಆಯ್ಕೆ ಸಮಿತಿ ದಿಢೀರನೇ ಈ ಬದ ಲಾವಣೆ ಮಾಡಿತು. 

ಬದಲಿ ಆಟಗಾರನಿಲ್ಲ: ಮಧ್ಯಾಹ್ನ 2.20ರ ಸುಮಾರಿಗೆ ಕರ್ನಾಟಕದ ಫೀಲ್ಡಿಂಗ್ ಮುಗಿಯಿತು. ಆಗ ವಿಷಯ ತಿಳಿದ ಮನೀಷ್‌ ಭಾರತ ತಂಡ ಸೇರಿ ಕೊಳ್ಳಲು ತೆರಳಿದರು. ಆದ್ದರಿಂದ ರಣಜಿ ಪಂದ್ಯ ಆಡಲು ಮನೀಷ್ ಬದಲು ಬೇರೆ ಆಟಗಾರನಿಗೆ ಅವಕಾಶ ಕೊಡಬೇಕೆಂದು ಕರ್ನಾಟಕ ತಂಡದವರು ಪಂದ್ಯದ ರೆಫರಿ ಪ್ರಣವ್‌ ರಾಯ್‌ ಅವರಿಗೆ ಮನವಿ ಸಲ್ಲಿಸಿದರು. ರೆಫರಿ ಒಪ್ಪಿದ್ದರೆ ರಾಜ್ಯ ತಂಡ ‘ವಿಶ್ರಾಂತಿ’ ನೀಡಿದ್ದ ಹಿರಿಯ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಅವರನ್ನು ಆಡಿಸಲು ನಿರ್ಧರಿಸಿತ್ತು.

ರಾಜ್ಯದ ಮನವಿಗೆ ಪ್ರತಿಕ್ರಿಯಿಸಿದ ಪ್ರಣವ್‌ ಅವರು ‘ಬೇರೆ ಆಟಗಾರನನ್ನು ಆಡಿಸಲು ನನ್ನ ತಕರಾರು ಏನೂ ಇಲ್ಲ. ಆದರೆ ಬಿಸಿಸಿಐನ ನಿಯಮಾವಳಿಯ ಪ್ರಕಾರ ಎದುರಾಳಿ ತಂಡದ ನಾಯಕ ಸಮ್ಮತಿಸಿದರೆ ಮಾತ್ರ ಬದಲಾವಣೆ ಮಾಡ ಬಹುದು’ ಎಂದರು.
ಮಧ್ಯಾಹ್ನದ ಪಾನೀಯ ವಿರಾಮದ ವೇಳೆಗೆ ಇದರ ಬಗ್ಗೆ ಪ್ರಣವ್ ಅವರು ಮಹಾರಾಷ್ಟ್ರ ತಂಡದ ನಾಯಕ ಸ್ವಪ್ನಿಲ್‌ ಗುಗಾಲೆ ಅವರಿಗೆ ವಿಷಯ ತಿಳಿಸಿದರು. ಆದರೆ, ಸ್ವಪ್ನಿಲ್‌ ಬೇರೆ ಆಟಗಾರನನ್ನು ಆಡಿಸಲು ಒಪ್ಪಲಿಲ್ಲ. ಆದ್ದರಿಂದ ರಾಜ್ಯ ತಂಡ ಹತ್ತು ಸದಸ್ಯರ ಜೊತೆ ರಣಜಿ ಪಂದ್ಯವಾಡುತ್ತಿದೆ!

ತಂಡದಲ್ಲಿರುವ ಯಾವ ಆಟಗಾರ ನಾದರೂ ಮನೀಷ್‌ ಬದಲು ಫೀಲ್ಡಿಂಗ್ ಮಾಡಬಹುದು. ಆದರೆ ಯಾರೂ ಬ್ಯಾಟ್‌ ಮಾಡುವಂತಿಲ್ಲ. ಅಭಿಮನ್ಯು ಮಿಥುನ್‌ ಕೂಡ ಗಾಯಗೊಂಡಿರುವ ಕಾರಣ ರಾಜ್ಯ  ತಂಡದಲ್ಲಿ ಒಂಬತ್ತು ಆಟಗಾರರಷ್ಟೇ ಇದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕರ್ನಾಟಕದ ನಾಯಕ ವಿನಯ್‌ ಕುಮಾರ್‌ ‘ನಮ್ಮ ರಾಜ್ಯದ ಆಟಗಾರ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದು ಅತ್ಯಂತ ಹೆಮ್ಮೆಯ ವಿಷಯ. ಮನೀಷ್‌ ಬದಲು ಬೇರೆ ಆಟಗಾರನನ್ನು ಆಡಿಸಲು ಎದುರಾಳಿ ತಂಡದವರು ಒಪ್ಪಿಗೆ ಕೊಡದ ಕಾರಣ ನಾವೂ ಅಸಹಾಯ ಕರು. ಅನಿವಾರ್ಯವಾಗಿ ಹತ್ತು ಆಟ ಗಾರರ ಜೊತೆ ಆಡಲೇ ಬೇಕಿದೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ.  ಗೆಲುವು ಪಡೆಯುತ್ತೇವೆ’ ಎಂದರು.

ಬಿಸಿಸಿಐ ನಿಯಮದಂತೆ ಕ್ರಮ: ಪ್ರಣವ್‌
‘ಮನೀಷ್‌ ಬದಲು ಬೇರೆ ಆಟಗಾರನನ್ನು ಆಡಿಸಲು ಅವಕಾಶ ಕೊಡುವಂತೆ ಕರ್ನಾಟಕ ತಂಡ ಸಲ್ಲಿಸಿದ್ದ ಮನವಿಯನ್ನು ಬಿಸಿಸಿಐನ ಕ್ರಿಕೆಟ್ ಆಪರೇಷನ್‌ ಜಿ.ಎಂ. ಆದ ಎಂ.ವಿ. ಶ್ರೀಧರ್‌ ಅವರ ಗಮನಕ್ಕೆ ತಂದೆ. ದೇಶಿ ಟೂರ್ನಿಗಳಲ್ಲಿ ಎದುರಾಳಿ ತಂಡದ ನಾಯಕನ ನಿರ್ಧಾರವೇ ಮುಖ್ಯವಾದ ಕಾರಣ ಮಹಾರಾಷ್ಟ್ರದ ನಾಯಕ ಒಪ್ಪಿದರೆ ಮಾತ್ರ ಅನುಮತಿ ಕೊಡಿ ಎಂದು ಶ್ರೀಧರ್‌ ತಿಳಿಸಿದರು. ಆದರೆ ಆ ತಂಡದ ನಾಯಕ ಒಪ್ಪಲಿಲ್ಲ. ನನಗೆ ವಿಶೇಷ ಅಧಿಕಾರವೇನೂ ಇಲ್ಲ. ಬಿಸಿಸಿಐ ನಿಯಮದಂತೆ ಕೆಲಸ ಮಾಡಿದ್ದೇನೆ’ ಎಂದು ಪಂದ್ಯದ ರೆಫರಿ ಪ್ರಣವ್‌ ರಾಯ್‌ ತಿಳಿಸಿದರು.

ನಾವೇಕೆ ಒಪ್ಪಬೇಕು: ಸ್ವಪ್ನಿಲ್‌
‘‘ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ನಿಟ್ಟಿನಲ್ಲಿ ಈ ಪಂದ್ಯ ನಮಗೆ ಅತ್ಯಂತ ಮಹತ್ವದ್ದು. ಒಂದು ವಿಕೆಟ್‌ನಿಂದ ಏನು ಬೇಕಾದರೂ ಆಗಬಹುದು. ಆದ್ದರಿಂದ ಬದಲಿ ಆಟಗಾರನನ್ನು ಆಡಿಸಲು ಒಪ್ಪಿಗೆಯಿಲ್ಲ. ಇದು ತಂಡದ ತೀರ್ಮಾನ. ಹಲವು ವರ್ಷಗಳ ಹಿಂದೆ ನಮಗೂ ಇದೇ ರೀತಿ ಆಗಿತ್ತು’ ಎಂದು ಮಹಾರಾಷ್ಟ್ರ ತಂಡದ ನಾಯಕ ಸ್ವಪ್ನಿಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT