ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗೆ ಬಂದು ಹೀಗೆ ಹೋದರು ಸಿಎಂ!

Last Updated 9 ಡಿಸೆಂಬರ್ 2016, 7:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲು ಜಿಲ್ಲೆಗೆ ಗುರುವಾರ ಭೇಟಿ ನೀಡಿದ್ದರೂ ಕೇವಲ ಅರ್ಧ ಗಂಟೆಯ ಒಳಗೆ ಎರಡು ಕಾರ್ಯಕ್ರಮ ಗಳಲ್ಲಿ ಮಿಂಚಿನ ವೇಗದಲ್ಲಿ ಭಾಗವಹಿಸಿ ‘ಹಾಗೆ ಬಂದು, ಹೀಗೆ ಹೋದರು’ ಎನ್ನುವಂತೆ ನಿರ್ಗಮಿಸಿದರು.

ಎಲ್ಲೂ ಸಭೆ, ಭಾಷಣ ಮಾಡದೆ, ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡದೆ, ಮೂಡಿಗೆರೆ ಕಾರ್ಯಕ್ರಮಕ್ಕೆ ತೆರಳಲು ಬಂದ ವೇಗದಲ್ಲೇ ಹೆಲಿಕಾಪ್ಟರ್‌ ಹತ್ತಿದರು. ಜಿಲ್ಲೆಯಲ್ಲಿರುವ ಭೀಕರ ಬರಗಾಲದ ಬಗ್ಗೆ ಮನವಿ ಸಲ್ಲಿಸಿ, ಜಿಲ್ಲೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೆರವು, ವಿಶೇಷ ಪ್ಯಾಕೇಜ್‌ ಕೇಳುವ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ ಮುಖಂಡರು ಮತ್ತು ಜನಪ್ರತಿನಿಧಿಗಳು ನಿರಾಸೆ ಗೊಂಡರು.

ಮುಖ್ಯಮಂತ್ರಿಗಳು ಬೆಳಿಗ್ಗೆ 10.50ಕ್ಕೆ ನಗರಕ್ಕೆ ಆಗಮಿಸಿ ಸುದ್ದಿಗಾರರ ಒಂದೆರಡು ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಹೂಗುಚ್ಛ, ಹಾರ ಸ್ವೀಕರಿಸಿ ನೇರವಾಗಿ ನಗರದ ಬಸ್ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಜಿಲ್ಲಾ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ನಿವೇಶನದಲ್ಲಿ ಶಂಕು ಸ್ಥಾಪನೆ ನೆರವೇರಿಸಲು ಹೊರಟರು. ಅಲ್ಲೂ ಸಹ ಭಾಷಣ ಮಾಡುವರೆಂದು ಕುರ್ಚಿ ಹಾಗೂ ಶಾಮಿಯಾನ ಹಾಕಲಾ ಗಿತ್ತಾದರೂ ಭಾಷಣ ಮಾಡದೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಲು ತೆರಳಿದರು.

ಮುಖ್ಯಮಂತ್ರಿ  ಕಾಂಗ್ರೆಸ್ ಕಚೇರಿ ಕಟ್ಟಡದ ಶಿಲಾನ್ಯಾಸ ಸಮಾ ರಂಭದಲ್ಲಿ ಕನಿಷ್ಠ 10 ನಿಮಿಷಗಳಾದರೂ ಭಾಷಣ ಮಾಡಲಿದ್ದಾರೆ. ಆಗ ಅವರಿಗೆ ಜಿಲ್ಲೆಯ ಸಮಸ್ಯೆಗಳ ಪಟ್ಟಿ ನೀಡಲು ಕಾಂಗ್ರೆಸ್ ಜಿಲ್ಲಾ ಘಟಕ ನಿರ್ಧರಿಸಿತ್ತು. ಆದರೆ ಮುಖ್ಯಮಂತ್ರಿಗಳು ಮಧ್ಯಾಹ್ನ 3 ಗಂಟೆಗೆ ದೆಹಲಿಗೆ ತುರ್ತು ತೆರಳಬೇಕಾಗಿದ್ದರಿಂದ ಕೊನೆ ಗಳಿಗೆಯಲ್ಲಿ ಮಾತನಾಡದೆ ಮನವಿ ಪಡೆದು ಹೊರಟರು. ಭಾಷಣ ಕೇಳಲು ಬಂದ ಕಾರ್ಯಕರ್ತರು ನಿರಾಸೆ ಮೊಗದಿಂದ ಮನೆಗಳಿಗೆ ಮರಳಿದರು.

ಮುಖ್ಯಮಂತ್ರಿ  ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಮತ್ತು ಇಂಧನ ಸಚಿವ ಡಿ.ಕೆ.ಶಿವ ಕುಮಾರ್ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. ಹೆಲಿಪ್ಯಾಡ್‌ನಲ್ಲಿ ಅವರನ್ನು  ಡಿಸಿ ಜಿ.ಸತ್ಯವತಿ, ಎಸ್‌ಪಿ  ಕೆ.ಅಣ್ಣಾಮಲೈ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌,   ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಎಸ್‌.ಚಂದ್ರೇಗೌಡ ಇನ್ನಿತರರು ಸ್ವಾಗತಿಸಿದರು.

ಪಕ್ಷ ಕಟ್ಟಲು ಡಾ.ಜಿ. ಪರಮೇಶ್ವರ್‌ ಸಲಹೆ
‘ಜಿಲ್ಲೆಯಲ್ಲಿ ಸದೃಢ ಕಾಂಗ್ರೆಸ್‌ ಪಕ್ಷ ಕಟ್ಟುವ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ಶ್ರಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ನಗರದ ಬಸ್ ನಿಲ್ದಾಣ ಸಮೀಪ ಜಿಲ್ಲಾ ಕಾಂಗ್ರೆಸ್ ಭವನ ನಿಯೋಜಿತ ಕಟ್ಟಡ ನಿರ್ಮಾಣಕ್ಕೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಗುದ್ದಲಿ ಪೂಜೆ ನೆರವೇರಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಕಚೇರಿಗೆ ಶಂಕು ಸ್ಥಾಪನೆಯಾಗಿದೆ. ಪಕ್ಷದ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್, ಅನಿವಾಸಿ ಭಾರತೀಯ ಸಂಸ್ಥೆ ಅಧ್ಯಕ್ಷೆ ಆರತಿ ಕೃಷ್ಣ,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಎಸ್. ಚಂದ್ರೇಗೌಡ, ಪಕ್ಷದ ಜಿಲ್ಲಾ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಸಂದೀಪ್, ಎಂ.ಸಿ.ಶಿವಾನಂದ ಸ್ವಾಮಿ, ಶಾಸಕ ಜಿ.ಎಚ್. ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.

ಪ್ರತಿಮೆ ಅನಾವರಣ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಿ ಭಾಷಣ ಮಾಡಿದ್ದ ನೆನಪಿನಾರ್ಥ ಸ್ಥಾಪಿಸಿರುವ ಗಾಂಧಿ ಪ್ರತಿಮೆಯನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT