ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ - 2017

Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಎಂದೋ ಕಂಡ ಆ ಮುಖ ಇಂದೂ ಕಾಡುತ್ತಿರಬಹುದು; ಇಂದು ಕಂಡ ಆ ನಗು ಎಂದೋ ಕಂಡವರನ್ನು ನೆನಪಿಸುತ್ತಿರಬಹುದು; ನಮ್ಮ ಬದುಕು ನಿರಂತರವಾಗಿ ಯಾವುದೋ ಒಂದು ಅಗೋಚರ ಸೆಳೆತದ ಕಡೆಗೆ ಧಾವಿಸುತ್ತಲೇ ಇರುತ್ತದೆ.
 
ಬರವಣಿಗೆಯೂ ಅಂಥದೊಂದು ಸೆಳೆತವೇ. ನಮ್ಮ ಭಾವನೆಗಳನ್ನು ಹದವಾಗಿಯೂ ಸುಂದರವಾಗಿಯೂ ಪ್ರಕಟಪಡಿಸಲು ಲಲಿತಪ್ರಬಂಧ ಉಚಿತವಾದ ಪ್ರಕಾರ. ನೀವೂ ಲಲಿತಪ್ರಬಂಧವನ್ನು ಬರೆದು ನಮಗೆ ಕಳುಹಿಸಬಹುದು. 
 
ಪ್ರತಿ ವರ್ಷದಂತೆ ಈ ವರ್ಷವೂ ಪ್ರಜಾವಾಣಿ ‘ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಿದೆ. ಇದರಲ್ಲಿ  ಮಹಿಳೆಯರೆಲ್ಲರೂ ಭಾಗವಹಿಸಬಹುದು. 
 
**
ಪ್ರಬಂಧಗಳು ನಮ್ಮನ್ನು ತಲುಪಬೇಕಾದ ಅಂತಿಮ ದಿನಾಂಕ: ಡಿಸೆಂಬರ್‌ 20, 2016
 
*
ಬಹುಮಾನಗಳ ವಿವರ:
ಮೊದಲನೆಯ ಬಹುಮಾನ ₹ 7,500
ಎರಡನೆಯ ಬಹುಮಾನ ₹ 5,000
ಮೂರನೆಯ ಬಹುಮಾನ ₹ 2.500
 
*
ಸ್ಪರ್ಧೆಯ ನಿಯಮಗಳು
* ನಿಮ್ಮ ಬರಹ ಲಲಿತಪ್ರಬಂಧದ ಪ್ರಕಾರಕ್ಕೆ ಸೇರುವಂತಿಬೇಕು.

* ಸ್ವತಂತ್ರ ರಚನೆಯಾಗಿರಬೇಕು.

* ಬ್ಲಾಗ್‌, ಸಾಮಾಜಿಕ ಜಾಲತಾಣ ಸೇರಿದಂತೆ ಯಾವ ಮಾಧ್ಯಮದಲ್ಲೂ ಪ್ರಬಂಧ ಪ್ರಕಟ/ಪ್ರಸಾರ ಆಗಿರಕೂಡದು.

* ಅಂತಿಮ ದಿನಾಂಕದ ಬಳಿಕ ಬಂದ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

* ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.

* ಬಹುಮಾನಿತ ಪ್ರಬಂಧಗಳನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ ಕಾಯ್ದಿರಿಸಿಕೊಂಡಿದೆ; ಸಂಪಾದಕರ ತೀರ್ಮಾನವೇ ಅಂತಿಮ.

* ಪ್ರಬಂಧಗಳು ಒಂದು ಸಾವಿರ ಪದಗಳನ್ನು ಮೀರದಂತಿರಲಿ.

* ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು ಕಳುಹಿಸಬಹುದು. ಇ–ಮೇಲ್: bhoomika@prajavani.co.in

* ನಿಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ದೂರವಾಣಿ ವಿವರಗಳು ಕಡ್ಡಾಯ.

* ತೀರ್ಪುಗಾರರ ನಿರ್ಣಯವೇ ಅಂತಿಮ; ಪತ್ರವ್ಯವಹಾರಕ್ಕೆ ಅವಕಾಶವಿಲ್ಲ.

* ಪ್ರಬಂಧಗಳನ್ನು ಹಿಂದಿರುಗಿಸಲಾಗುವುದಿಲ್ಲ.

* ಬಹುಮಾನಿತ ಪ್ರಬಂಧಗಳನ್ನು ಭೂಮಿಕಾದಲ್ಲಿ ಪ್ರಕಟಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT