ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ

ಭಾನುವಾರ 11–12–1966
Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ತುರ್ತುಪರಿಸ್ಥಿತಿ ಮುಂದುವರಿಕೆ: ಸದ್ಯಕ್ಕೆ ಬದಲಾವಣೆ ಯುಕ್ತವಲ್ಲ– ಚವಾಣ್‌
ನವದೆಹಲಿ, ಡಿ. 10–
  ಸದ್ಯದ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದ ಭಾರತ ಸರ್ಕಾರವು ತುರ್ತುಪರಿಸ್ಥಿತಿಯು ಸದ್ಯಕ್ಕೆ ಮುಂದುವರಿಯಲೆಂದು ನಿರ್ಧರಿಸಿದೆ. ನಾಲ್ಕು ವರ್ಷಗಳಿಂದ ಜಾರಿಯಲ್ಲಿರುವ ತುರ್ತುಪರಿಸ್ಥಿತಿಯನ್ನು ಅಂತ್ಯಗೊಳಿಸುವ ಪ್ರಶ್ನೆ ಬಗ್ಗೆ ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಮಂಡಿಸಿದ್ದ ಗಮನ ಸೆಳೆಯುವ ನಿರ್ಣಯವೊಂದಕ್ಕೆ ಗೃಹ ಸಚಿವ ಚವಾಣ್‌ ಈ ಉತ್ತರ ನೀಡಿದರು.

***
ಮಾತೆಗೆ ಪ್ರಣಾಮ
ಬೆಂಗಳೂರು, ಡಿ. 10–
‘ಮಾನವತೆ ನನ್ನ ಮೇಲೆ ಹೊರಿಸಿರುವ ಕರುಣೆ, ಪ್ರೇಮದ ಸಾಲದ ಹೊರೆಯನ್ನು ತೀರಿಸಲು, ಮತ್ತೆ ನಾನು ಈ ದೇಶದಲ್ಲಿ ಹುಟ್ಟಲು ಇಚ್ಛಿಸುತ್ತೇನೆ’.ಇಂದಿಗೆ 64ನೇ ವಯಸ್ಸನ್ನು ದಾಟಿದ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರು ಕಳೆದ ನಾಲ್ಕು ದಶಕಗಳ ಕಾಲದ ತಮ್ಮ ಸಾರ್ವಜನಿಕ ಜೀವನದ ಮೈಲಿಗಲ್ಲುಗಳನ್ನು ನೆನೆದರು. ನೆನೆದು ಕಂಬನಿ ದುಂಬಿದರು.

‘ನನ್ನ ಮೂರನೇ ವಯಸ್ಸಿನಲ್ಲಿ ತಂದೆ ತೀರಿಹೋದರು. ಹೋಗುವಾಗ ಸಾಲದ ಬಳುವಳಿ ಬಿಟ್ಟುಹೋದರು. ಎರಡಾಣೆಗಳ ಸಂಪಾದನೆಗಾಗಿ ನನ್ನ ತಾಯಿ ಹಗಲಿರುಳು ದುಡಿದರು. ನಾನಿಂದು ಸ್ವಾತಂತ್ರ್ಯ ಪ್ರಿಯನಾಗಿರುವೆನಾದರೆ ಅದಕ್ಕೆ ಕಾರಣ ಆಕೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT