ಸಿನಿ ಹನಿ

‘ಮುಕ್ತಿ’ ಚಿತ್ರೀಕರಣ ಮುಕ್ತಾಯ

ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಕ್ಕು ಸಾವನ್ನಪ್ಪಿದ ಧಾರವಾಡದ ಬೆಟ್ಟದೂರಿನ ಯೋಧ ಹನುಮಂತಪ್ಪ ಕೊಪ್ಪದ ಅವರ ಬದುಕಿನಿಂದ ಸ್ಫೂರ್ತಿ ಪಡೆದಿರುವ ಚಿತ್ರ ‘ಮುಕ್ತಿ’.

‘ಮುಕ್ತಿ’ ಚಿತ್ರೀಕರಣ ಮುಕ್ತಾಯ

ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಕ್ಕು ಸಾವನ್ನಪ್ಪಿದ ಧಾರವಾಡದ ಬೆಟ್ಟದೂರಿನ ಯೋಧ ಹನುಮಂತಪ್ಪ ಕೊಪ್ಪದ ಅವರ ಬದುಕಿನಿಂದ ಸ್ಫೂರ್ತಿ ಪಡೆದಿರುವ ಚಿತ್ರ ‘ಮುಕ್ತಿ’. ಈ ಚಿತ್ರದ ನಿರ್ದೇಶನದ ಹೊಣೆ ಶಂಕರ್ ಅವರದು. ಇದೀಗ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ನಕುಲ್ ಗೋವಿಂದ್, ರಘುರಂಜನ್ ನಾಯಕರಾಗಿ ನಟಿಸಿದ್ದಾರೆ. ಕಿರುತೆರೆ ನಟಿ ಗಾನಾ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಗಡಿಯಲ್ಲಿ ನಿಂತು ಸಂಕಷ್ಟಗಳಿಗೆ ಎದೆಯೊಡ್ಡುತ್ತಾ ಶತ್ರುಗಳಿಂದ ದೇಶವನ್ನು ರಕ್ಷಣೆ ಮಾಡುವ ಯೋಧರ ಸಾವು–ಬದುಕಿನ ನಡುವಿನ ಹೋರಾಟವೇ ಕಥಾವಸ್ತು.
ಚಿತ್ರವನ್ನು ಸಿ.ಕೆ.ರಾಮಮೂರ್ತಿ ಮತ್ತು ಸತೀಶ್ ಯಾದವ್ ನಿರ್ಮಿಸಿದ್ದಾರೆ. ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಎ.ರಾಜಶೇಖರ ರೆಡ್ಡಿ ಸಂಕಲನ ಹಾಗೂ ಸಿದ್ಧಾರ್ಥ್ ಅವರ ಛಾಯಾಗ್ರಹಣವಿದೆ. 

Comments
ಈ ವಿಭಾಗದಿಂದ ಇನ್ನಷ್ಟು
ಮನೆಯಲ್ಲೇ ನೀರು ಉಳಿಸಿ

ವಿಶ್ವ ಜಲ ದಿನ
ಮನೆಯಲ್ಲೇ ನೀರು ಉಳಿಸಿ

22 Mar, 2018
ಕ್ಷಮಿಸಲು ಕಾರಣ ಹಲವು...

ಮಾನಸಿಕ ನೆಮ್ಮದಿ
ಕ್ಷಮಿಸಲು ಕಾರಣ ಹಲವು...

21 Mar, 2018
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018