ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿನಿ ‘ಕಿರು’ಯಾನ

Last Updated 14 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಳೆದ ವಾರ ಬಿಡುಗಡೆಯಾದ ಇವರ ನಟನೆಯ ಹಾರರ್‌ ಚಿತ್ರ ‘ಡೈಯಾನ ಹೌಸ್‌’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಅವರಿಗೆ ಗೆಲುವಿನ ಪುಳಕ ನೀಡಿದೆ. ಇದರ ಜತೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ನಿಹಾರಿಕಾ’ ಎಂಬ ಹೊಸ ಧಾರಾವಾಹಿಯ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ, ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಕಿರುತೆರೆಯಾನದ ಆರಂಭ ಮತ್ತು ಮುಂದಿನ ಚಿತ್ರಗಳ ಕುರಿತು ‘ಕಾಮನಬಿಲ್ಲು’ ಜತೆ ತೇಜಸ್ವಿನಿ ಮಾತನಾಡಿದ್ದಾರೆ.
* ‘ಡೈಯಾನ ಹೌಸ್‌’ ಚಿತ್ರದ ಅನುಭವ ಹೇಗಿತ್ತು?
ಹಾರರ್ ಸಿನಿಮಾವೊಂದರಲ್ಲಿ ಪ್ರೇಕ್ಷಕರು ಬಯಸುವ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಹಾರರ್‌ ಅಥವಾ ದೆವ್ವ ತೋರಿಸಲು ಒಂದು ಲಾಜಿಕ್ ಇರಬೇಕು. ಅದು ಈ ಚಿತ್ರದಲ್ಲಿದೆ. ಮನೆಯೊಂದನ್ನು ಖರೀದಿಸುವ ಸಲುವಾಗಿ ಅದನ್ನು ನೋಡಲು ಹೋಗುವ ಕುಟುಂಬ, ಅಲ್ಲಿರುವ ದೆವ್ವದ ಕೈಗೆ ಸಿಕ್ಕಿಹಾಕಿಕೊಳ್ಳುತ್ತದೆ. ಕಡೆಗೆ, ಅವರೆಲ್ಲ ಹೇಗೆ ತಪ್ಪಿಸಿಕೊಂಡು ಬರುತ್ತಾರೆ ಎಂಬುದು ಕಥೆ. ಚಿತ್ರದಲ್ಲಿ ಅನು ಎಂಬ ಪಾತ್ರ ಮಾಡಿದ್ದೇನೆ. ಶೂಟಿಂಗ್ ಬಹುತೇಕ ಕತ್ತಲಲ್ಲೇ ನಡೆದಿದ್ದರಿಂದ, ಮನೆಗೆ ಬಂದಾಗಲೆಲ್ಲ ಹಾರರ್ ಹ್ಯಾಂಗೋವರ್‌ನಲ್ಲೇ ಇರುತ್ತಿದ್ದೆ. ಪಾತ್ರದಲ್ಲಿ ನಾನು ಅಷ್ಟರಮಟ್ಟಿಗೆ ಮುಳುಗಿದ್ದೆ.

* ದೆವ್ವ ಎಂದರೆ ವಿಪರೀತ ಭಯವೇ? ಒಂದು ವೇಳೆ ನಿಮ್ಮ ಮುಂದೆ ದೆವ್ವ ಬಂದರೆ ಏನು ಮಾಡ್ತೀರಾ?
ಚಿಕ್ಕಂದಿನಿಂದಲೂ ದೆವ್ವ ಭೂತಗಳ ಬಗ್ಗೆ ನನಗೆ ಅಷ್ಟು ಭಯವಿಲ್ಲ. ಎಂತಹ ಹಾರರ್ ಸಿನಿಮಾಗಳನ್ನು ನೋಡಿ ಬಂದರೂ, ಭಯಪಡದೇ ಒಬ್ಬಳೇ ನನ್ನ ಕೋಣೆಯಲ್ಲಿ ಮಲಗುತ್ತೇನೆ. ದೆವ್ವ ಭೂತದ ಬಗ್ಗೆ ನನಗೆ ವಿಪರೀತ ಕುತೂಹಲವಿದೆ. ಒಂದು ವೇಳೆ ನನ್ನ ಮುಂದೇನಾದರೂ ದೆವ್ವ ಪ್ರತ್ಯಕ್ಷವಾದರೆ ಯಾಕೆ ಇಷ್ಟೊಂದು ವಿಕಾರವಾಗಿದ್ದೀಯಾ? ನಿನ್ನ ಈ ಅವತಾರಕ್ಕೆ ಕಾರಣವೇನು? ಹೊಟ್ಟೆಗೆ ಏನು ತಿಂತೀಯಾ? ಸಿನಿಮಾಗಳನ್ನು ನೋಡ್ತೀಯಾ? ನೋಡುವುದಾದರೆ, ಕನ್ನಡ ಸಿನಿಮಾಗಳನ್ನೇ ನೋಡು... ಎಂದೆಲ್ಲ ಪ್ರಶ್ನೆಗಳ ಸುರಿಮಳೆಗರೆಯುತ್ತೇನೆ. ಅದನ್ನು ಕೇಳಿ ದೆವ್ವ ಓಡಿಹೋಗಬೇಕು...

*ಇದ್ದಕ್ಕಿದ್ದಂತೆ ಕಿರುತೆರೆಯ ‘ನಿಹಾರಿಕಾ’ ಧಾರಾವಾಹಿಗೆ ಬಣ್ಣ ಹಚ್ಚಿದ್ದೀರಿ? ಸಿನಿಮಾಗಳಲ್ಲಿ ಅವಕಾಶಗಳ ಕೊರತೆ ಇದೆಯೇ?
ಬಾಲನಟಿ, ಸಹನಟಿ, ನಾಯಕಿಯಾಗಿ ಎಂಟು ವರ್ಷದಿಂದ ಕನ್ನಡ ಸೇರಿದಂತೆ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದೇನೆ. ಈ ಪೈಕಿ ನಾಯಕಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಅಂತಹ ಚಿತ್ರಗಳು ನೂರಕ್ಕೆ ಒಂದೋ ಎರಡೋ ಬರುತ್ತವಷ್ಟೆ.
ಆದರೆ, ನಾನೀಗ ನಟಿಸುತ್ತಿರುವ ‘ನಿಹಾರಿಕಾ’ ಧಾರಾವಾಹಿ ನಾಯಕಿಪ್ರಧಾನವಾದದ್ದು. ಸೇಡಿನ ಕಥಾಹಂದರವಿರುವ ಆ ಪಾತ್ರದ ಸ್ವರೂಪ ವಿಭಿನ್ನವಾಗಿದೆ. ಇಂತಹದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಮುಂಚಿನಿಂದಲೂ ಇತ್ತು. ಈ ಧಾರಾವಾಹಿ ಮೂಲಕ ಅದು ಈಡೇರಿದೆ. ಅವಕಾಶಗಳ ಕೊರತೆಯಿಂದಾಗಿ ಈ ಧಾರಾವಾಹಿಯಲ್ಲಿ ಮಾಡುತ್ತಿಲ್ಲ. ಈಗಲೂ ಕನ್ನಡ ಮತ್ತು ತೆಲುಗಿನಲ್ಲಿ ಅವಕಾಶಗಳು ಬರುತ್ತಿದ್ದು, ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದೇನೆ ಕೂಡ. ನನಗೆ ಇಷ್ಟವಾಗುವ ಪಾತ್ರಗಳು ಬೆಳ್ಳಿತೆರೆ ಅಥವಾ ಕಿರುತೆರೆ ಎಲ್ಲೇ ಸಿಕ್ಕರೂ ಮಾಡುತ್ತೇನೆ. ಅದರಲ್ಲಿ ‘ನಿಹಾರಿಕಾ’ ಕೂಡ ಒಂದು.

*ಕಾಲೇಜಿನಲ್ಲಿ ತುಂಬಾ ಹುಡುಗರು ನಿಮ್ಮ ಹಿಂದೆ ಬಿದ್ದಿದ್ದರಂತೆ?
ಕಾಲೇಜಿರಲಿ, ಹೈಸ್ಕೂಲಿನಲ್ಲಿದ್ದಾಗಲೇ ಅದೆಲ್ಲ ಇತ್ತು. ಸ್ಕೂಲಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೂ ನಾನು ಭಾಗವಹಿಸುತ್ತಿದ್ದರಿಂದ, ಸ್ವಲ್ಪ ಮಟ್ಟಿಗೆ ಪಾಪ್ಯುಲರ್ ಆಗಿದ್ದೆ. ಹಾಗಾಗಿ ಸ್ವಲ್ಪ ಹುಡುಗರು ನನ್ನ ಹಿಂದೆ ಬಿದ್ದಿದ್ದರು. ಈ ಪೈಕಿ ಒಬ್ಬ ನನ್ನನ್ನು ದಾರಿಯಲ್ಲಿ ಅಡ್ಡಹಾಕಿ ‘ನೀನಂದ್ರೆ ನನಗಿಷ್ಟ, ಐ ಲವ್ ಯೂ’ ಎಂದು ಹೇಳಿದ. ತಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ಮನೆಗೆ ಬಂದವಳೇ ನಡೆದಿದ್ದನ್ನೆಲ್ಲಾ ಅಮ್ಮನಿಗೆ ತಿಳಿಸಿದೆ. ‘ಈ ವಯಸ್ಸಲ್ಲಿ ಇದೆಲ್ಲಾ ಸಾಮಾನ್ಯ. ನೀನ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ’ ಎಂದು ಹೇಳಿದರು. ಕಾಲೇಜಿನಲ್ಲೂ ಕೆಲವು ಹುಡುಗರು ಪ್ರಪೋಸ್ ಮಾಡಿದರು, ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದರು. ಆದರೆ, ಅದ್ಯಾವುದಕ್ಕೂ ನಾನು ಕೇರ್ ಮಾಡಲೇ ಇಲ್ಲ.

ಕಳೆದ ವಾರ ಬಿಡುಗಡೆಯಾದ ಇವರ ನಟನೆಯ ಹಾರರ್‌ ಚಿತ್ರ ‘ಡೈಯಾನ ಹೌಸ್‌’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಅವರಿಗೆ ಗೆಲುವಿನ ಪುಳಕ ನೀಡಿದೆ. ಇದರ ಜತೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ನಿಹಾರಿಕಾ’ ಎಂಬ ಹೊಸ ಧಾರಾವಾಹಿಯ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ, ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಕಿರುತೆರೆಯಾನದ ಆರಂಭ ಮತ್ತು ಮುಂದಿನ ಚಿತ್ರಗಳ ಕುರಿತು ‘ಕಾಮನಬಿಲ್ಲು’ ಜತೆ ತೇಜಸ್ವಿನಿ ಮಾತನಾಡಿದ್ದಾರೆ.

*‘ಡೈಯಾನ ಹೌಸ್‌’ ಚಿತ್ರದ ಅನುಭವ ಹೇಗಿತ್ತು?
ಹಾರರ್ ಸಿನಿಮಾವೊಂದರಲ್ಲಿ ಪ್ರೇಕ್ಷಕರು ಬಯಸುವ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಹಾರರ್‌ ಅಥವಾ ದೆವ್ವ ತೋರಿಸಲು ಒಂದು ಲಾಜಿಕ್ ಇರಬೇಕು. ಅದು ಈ ಚಿತ್ರದಲ್ಲಿದೆ. ಮನೆಯೊಂದನ್ನು ಖರೀದಿಸುವ ಸಲುವಾಗಿ ಅದನ್ನು ನೋಡಲು ಹೋಗುವ ಕುಟುಂಬ, ಅಲ್ಲಿರುವ ದೆವ್ವದ ಕೈಗೆ ಸಿಕ್ಕಿಹಾಕಿಕೊಳ್ಳುತ್ತದೆ. 2ನೇ ಪುಟಕ್ಕೆತೆಲುಗಿನಲ್ಲಿ ‘ಕಟ್ ಚೇಸ್ತೆ’ ಎಂಬ ಸಿನಿಮಾ ಶೂಟಿಂಗ್ ಮಾಡುತ್ತಿದ್ದೆವು. ಆ ಚಿತ್ರದಲ್ಲಿ ನನ್ನದು ದೆವ್ವದ ಪಾತ್ರ. ಅದಕ್ಕೆ ಬೇಕಾದ ಮೇಕಪ್ ಮತ್ತು ಕಾಸ್ಟ್ಯೂಮ್ ಹಾಕಿಕೊಂಡು ಶಾಟ್‌ಗೆ ತಯಾರಾಗಿದ್ದೆ. ಸೆಟ್‌ನಲ್ಲಿ ಸಹನಿರ್ದೇಶಕರು ಹಾಗೂ ಕ್ಯಾಮೆರಾಮನ್ ಲೈಟಿಂಗ್ಸ್ ಪರಿಶೀಲಿಸುತ್ತಿದ್ದರು. ಆಗವರು, ‘ಲೈಟ್ಸ್ ಆಫ್, ಆನ್’ ಎಂದು ಹೇಳುತ್ತಿದ್ದರು. ಲೈಟ್ಸ್ ಆಫ್ ಆದಾಗ ಸಹನಿರ್ದೇಶಕರಿಗೆ ಗೊತ್ತಾಗದಂತೆ ಹಿಂದೆ ಹೋಗಿ ಜೋರಾಗಿ ಕೂಗಿದೆ. ನನ್ನನ್ನು ನೋಡಿ ಭಯಬಿದ್ದ ಅವರಿಗೆ ಜ್ವರ ಬಂದಿತ್ತಲ್ಲದೆ, ಎರಡು ದಿನ ಆಸ್ಪತ್ರೆ ಸೇರಿದ್ದರು. ನನ್ನನ್ನು ಭೇಟಿ ಮಾಡಿದಾಗಲೆಲ್ಲ ಅವರು ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

* 500 ಮತ್ತು 1000 ರೂಪಾಯಿ ನೋಟುಗಳ ರದ್ದತಿಯಿಂದ ನೀವೆಂಥ ಕಿರಿಕಿರಿ ಅನುಭವಿಸಿದ್ದೀರಾ?
ಮುಂಚೆಯಿಂದಲೂ ನಾನು ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದೇನೆ. ಹಾಗಾಗಿ, ನೋಟು ರದ್ದತಿಯ ಬಿಸಿ ನನಗೆ ತಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT