ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಸುಂದರಿ

Last Updated 15 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವೈಭವೋಪೇತ ಗೃಹಾಲಂಕಾರ ವಸ್ತುಗಳ ನಿರ್ಮಾಣದಲ್ಲಿ ಹೆಸರು ಮಾಡಿರುವ ಕಾಸಾ ಕಲರ್‌ ಕಂಪೆನಿಯು ನೂತನ ಆಸನವನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್‌ ಏಂಜೆಲ್‌ ಚೇರ್‌ ಎಂದೇ ಕರೆಯಲಾಗುವ ಈ ಕುರ್ಚಿಯನ್ನು ಆರಾಮದಾಯಕ ಅನುಭವವನ್ನೇ ಉದ್ದೇಶವಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ.

ಅಲ್ಲದೆ ನೋಡಲು ಸುಂದರವಾಗಿರಬೇಕು ಎನ್ನುವುದೂ ವಿನ್ಯಾಸದ ಮೊಲದ ಆದ್ಯತೆಯಾಗಿದೆ. ಅತ್ಯುತ್ತಮ ಗುಣಮಟ್ಟದ ತೇಗದ ಮರದಿಂದ ನಿರ್ಮಿಸಲಾಗಿರುವ ಈ ಕುರ್ಚಿ ಆಂಟಿಕ್‌ ಗೋಲ್ಡ್‌ ಫಿನಿಶಿಂಗ್‌ ಕೂಡ ಇದೆ. ಈ ಕುರ್ಚಿ ಎರಡು ಅಡಿ ಎರಡು ಇಂಚು ಅಗಲ ಹಾಗೂ ಮೂರು ಅಡಿ 5 ಇಂಚು ಉದ್ದವಾಗಿದೆ.

ಭಾರತದ ಮಾರುಕಟ್ಟೆಗೆ ಬಂತು ಆಶ್ಲೇ
ಆಶ್ಲೇ ಫರ್ನೀಚರ್ ಹೋಂಸ್ಟೋರ್‌ ಬೆಂಗಳೂರಿನಲ್ಲಿ ತನ್ನ ನೂತನ ಮಳಿಗೆಯೊಂದನ್ನು ಪ್ರಾರಂಭಿಸಿದೆ. ಅಂದವಾದ ಹಾಗೂ ಕೈಗೆಟಕುವ ಬೆಲೆಯ ಪೀಠೋಪಕರಣಗಳನ್ನು ಪರಿಚಯಿಸಿದೆ. ಅತ್ಯಾಧುನಿಕ ಟ್ರೆಂಡ್‌ಗಳಿಗೆ ಸಂಬಂಧಿಸಿದ ಉತ್ಪನ್ನಗಳು ಇಲ್ಲಿವೆ. ಆಶ್ಲೇ ಫರ್ನೀಚರ್ ಇಂಡಸ್ಟ್ರೀಸ್ 6,000ಕ್ಕೂ ಹೆಚ್ಚು ರೀಟೇಲ್ ಪಾಲುದಾರರಿಗೆ 123 ದೇಶಗಳಲ್ಲಿ 30ಮಿಲಿಯನ್ ಪೀಠೋಪಕರಣಗಳನ್ನು ವಿಶ್ವದಾದ್ಯಂತ ಪೂರೈಸುತ್ತದೆ. ಆಶ್ಲೇ ಪೀಠೋಪಕರಣ ಉತ್ಪನ್ನಗಳು ವಿಶ್ವದಾದ್ಯಂತ 670ಕ್ಕೂ ಹೆಚ್ಚು ಆಶ್ಲೇ ಫರ್ನೀಚರ್ ಹೋಮ್‌ಸ್ಟೋರ್ಸ್‌ ಮತ್ತು ಸಾವಿರಾರು ಇತರೆ ರೀಟೇಲರ್‌ಗಳ ಮೂಲಕ ಮಾರಾಟವಾಗುತ್ತವೆ.
ಸ್ಥಳ: ಆಶ್ಲೇ, ನಂ.114/2ಎ, ಹೊರವರ್ತುಲ ರಸ್ತೆ, ನಂದಿ ಟೊಯೋಟಾ ಎದುರು, ಬಾಣಸವಾಡಿ.
ಮಾಹಿತಿಗೆ http://www.ashleyfurniture.com

ಸೋಫಾ ಸಂಗ್ರಹ
ದ ಫರ್ನಿಚರ್‌ ರಿಪಬ್ಲಿಕ್‌ ಸೋಫಾಗಳ ನೂತನ ಸಂಗ್ರಹವನ್ನು ಪರಿಚಯಿಸಿದೆ. ಓಕ್‌ ಮರ ಹಾಗೂ ಟರ್ಕಿಶ್‌ ವೆಲ್ವೆಟ್‌ಗಳ ಕುಸುರಿ ಕೆಲಸ ಇದಕ್ಕಿದ್ದು ನೋಡಲು ಆಕರ್ಷಕವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಮಾಹಿತಿಗೆ www.trfhome.com 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT