ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 19–12–1966

Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ದ. ಆಫ್ರಿಕಾ ವರ್ಣದ್ವೇಷ ನೀತಿ ಜಗತ್ತಿನ ಭದ್ರತೆಗೇ ಧಕ್ಕೆ; ವಿಶ್ವಸಂಸ್ಥೆ ನಿರ್‍ಣಯ
ವಿಶ್ವಸಂಸ್ಥೆ, ಡಿ. 18–
ದಕ್ಷಿಣ ಆಫ್ರಿಕಾದ ವರ್ಣದ್ವೇಷ ನೀತಿಯನ್ನು ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯಲ್ಲಿ ನಿನ್ನೆ ಭಾರಿ ಬಹುಮತದಿಂದ ಅನುಮೋದಿಸಲಾಯಿತು.

84 ರಾಷ್ಟ್ರಗಳು ನಿರ್ಣಯದ ಪರವಾಗಿ, 2 ರಾಷ್ಟ್ರಗಳು ವಿರೋಧವಾಗಿ ಮತ ನೀಡಿದುವು. ದಕ್ಷಿಣ ಆಫ್ರಿಕಾ ಮತ್ತು ಪೋರ್ಚುಗಲ್‌ ವಿರೋಧವಾಗಿ ಮತ ನೀಡಿದ ರಾಷ್ಟ್ರಗಳು.

ಸಚಿವರಲ್ಲಿ 3 ಜಾತಿ
ಮುಂಬೈ, ಡಿ. 18–
  ಮಾಜಿ ರಕ್ಷಣಾ ಸಚಿವ ಶ್ರೀ ಕೃಷ್ಣಮೆನನ್‌ರ ಪ್ರಕಾರ ಸಚಿವರಲ್ಲಿ ಮೂರು ವಿಧ. ಒಂದೇ ಒಂದು ರೈಲ್ವೆ ಅಪಘಾತವಾದದ್ದಕ್ಕಾಗಿ ಸ್ವಯಂ ಪ್ರೇರಣೆಯಿಂದ ಸಚಿವ ಪದವಿಗೆ ರಾಜಿನಾಮೆ ನೀಡಿದ ದಿವಂಗತ ಲಾಲ್‌ ಬಹಾದುರ್‌ ಶಾಸ್ತ್ರಿಯಂತಹ ಮಹನೀಯರದು ಒಂದು ಜಾತಿ.

ಎಂತಹ ಅನಾಹುತವೇ ಆದರೂ ಜಗ್ಗದೆ ಸಚಿವ ಪದವಿಯಲ್ಲೇ ಮುಂದುವರಿಯುವವರು ಎರಡನೆ ಜಾತಿಗೆ ಸೇರಿದ ಸಚಿವರು. ಮೂರನೆ ಜಾತಿ ಸಚಿವರೆಂದರೆ ರಾಜಿನಾಮೆ ನೀಡುವುದಾಗಿ ಸುಮ್ಮನೆ ಬೆದರಿಕೆ ಹಾಕುವುದು, ಆದರೆ ರಾಜಿನಾಮೆ ನೀಡದಿರುವವರು. ಮುಂಬೈನಲ್ಲಿ ಇಂದು ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ ಶ್ರೀ ಕೃಷ್ಣಮೆನನ್‌ ಈ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT