ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಲ್ಲಿ ಅಷ್ಟಿಷ್ಟು ಉಳಿಸುವ ಬಗೆ

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮನೆ ಕಟ್ಟಿಸುವವರಿಗೆ ಹಣ ಹೊಂದಿಸುವುದೇ ಬಹುದೊಡ್ಡ ಸವಾಲು. ಹಾಗೂ ಹೀಗೂ ಕಷ್ಟಪಟ್ಟು ಹೊಂದಿಸಿದ ಹಣ ‘ಕಣ್ಮಾಯ ಕಣ್‌ಛಿದ್ರ’ ಎಂಬಂತೆ ಖರ್ಚಾಗಿ ಬಿಡುವುದು ಸಾಮಾನ್ಯ ಸಂಗತಿ. ‘ಹೀಗೆಲ್ಲಾ ಮಾಡಿದ್ರೆ ಹಣ ಉಳಿಸಬಹುದಿತ್ತು’ ಎಂದು ಅನೇಕರು ಮನೆ ಕಟ್ಟಿಸಿ ಮುಗಿದ ಮೇಲೆ ಆಪ್ತರ ಬಳಿ ಹಳಹಳಿಕೆ ತೋಡಿಕೊಳ್ಳುತ್ತಾರೆ. ಅಂಥವರ ಸಂಭಾಷಣೆಯಲ್ಲಿ ಕಿವಿಗೆ ಬಿದ್ದ  ತುಣುಕುಗಳು ಇವು...

* ಕಂಟ್ರಾಕ್ಟರ್‌ ಮತ್ತು ಆರ್ಕಿಟೆಕ್ಟರ್‌: ಬಹುತೇಕ ಜನರು ಕಂಟ್ರಾಕ್ಟರ್‌ಗಳ ಮೂಲಕ ಮನೆ ಪ್ಲಾನಿಂಗ್ ಹಾಕಿಸುತ್ತಾರೆ. ಅನುಭವದ ಮೇಲೆ ಕಂಟ್ರಾಕ್ಟರ್‌ಗಳು ಪ್ಲಾನ್ ಬರೆದುಕೊಟ್ಟರೂ ಅವರು ನಮ್ಮ ಅಗತ್ಯಗಳನ್ನು ಮತ್ತು ನಮಗೆ ಲಭ್ಯವಿರುವ ಸಾಧ್ಯತೆಗಳನ್ನು ಆರ್ಕಿಟೆಕ್ಟ್‌ಗಳಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಿಲ್ಲ.

* ಖರೀದಿ ಸಂದರ್ಭ ನಾನು ಹೋಗಬೇಕಿತ್ತು: ಮರ, ಪೇಂಟ್, ಪ್ಲಂಬಿಂಗ್‌ ಉಪಕರಣಗಳನ್ನು ಖರೀದಿಸುವ ಹೊಣೆಯನ್ನೂ ಕೆಲವರು ಮೇಸ್ತ್ರಿಗಳಿಗೇ ಹೊರಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಕಮಿಷನ್ ವ್ಯವಹಾರ ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಖರೀದಿ ಸಂದರ್ಭದಲ್ಲಿ ಮನೆ ಕಟ್ಟಸುವವರು ಖುದ್ದು ಅಂಗಡಿಗಳಿಗೆ ತೆರಳಿ ಗುಣಮಟ್ಟ ಮತ್ತು ಬೆಲೆಯನ್ನು ಖಾತ್ರಿಪಡಿಸಿಕೊಳ್ಳಬೇಕು.

* ಬ್ರ್ಯಾಂಡ್‌ ಅಷ್ಟೇ ಅಲ್ಲ ಬೆಲೆ ಮತ್ತು ಗುಣಮಟ್ಟಕ್ಕೂ ಗಮನ ಕೊಡಿ: ಟೈಲ್ಸ್‌ ಖರೀದಿಸುವಾಗ ಪ್ರಖ್ಯಾತ ಕಂಪೆನಿಗಳ ಉತ್ಪನ್ನಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸುವುದು ಪ್ರತಿಷ್ಠೆ ಎನಿಸಬಹುದು. ಅದರೆ ಎಷ್ಟೋ ಸಂದರ್ಭಗಳಲ್ಲಿ ದುಬಾರಿ ವಿದೇಶಿ ಉತ್ಪನ್ನಕ್ಕಿಂತ ಉತ್ತಮವಾದ ವಸ್ತುಗಳು ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿಯೇ ದೊರಕುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ತುಮಕೂರಿನಲ್ಲಿ ತಯಾರಾಗುವ ಟೈಲ್ಸ್‌ಗಳು ಗುಣಮಟ್ಟದಲ್ಲಿ ಇಟಲಿಯಿಂದ ಆಮದಾಗುವ ಟೈಲ್ಸ್‌ಗಳಿಗೆ ಸರಿಸಾಟಿಯಾಗಿವೆ. ಬೆಲೆಯೂ ಕಡಿಮೆ.

* ಅದ್ದೂರಿ ವಿನ್ಯಾಸಕ್ಕಿಂತ ಗುಣಮಟ್ಟ ಬಾಳಿಕೆ ಮುಖ್ಯ: ಆಲ್‌ಡ್ರಾಪ್ ಮತ್ತು ಲಾಕರ್‌ಗಳನ್ನು ಖರೀದಿಸುವಾಗ ಕೆಲವರು ಅದ್ದೂರಿ ವಿನ್ಯಾಸ ಮತ್ತು ಬ್ರ್ಯಾಂಡ್ ಹೆಸರಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಇಂಥ ಉತ್ಪನ್ನಗಳ ಖರೀದಿ ಸಂದರ್ಭ ಅವುಗಳ ಬಾಳಿಕೆ ಸಾಮರ್ಥ್ಯ ಮತ್ತು ಭದ್ರತೆಯನ್ನೇ ಗಮನದಲ್ಲಿರಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT