ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಕೇಕ್‌ ವೃತ್ತಾಂತ

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌ ಎಂದರೆ ಕೆಂಪುಬಣ್ಣದ ದಿರಿಸು ತೊಟ್ಟ ಸಾಂತಾಕ್ಲಾಸ್‌, ಆತ ಹೊತ್ತು ತರುವ ಉಡುಗೊರೆಗಳು, ಕ್ರಿಸ್‌ಮಸ್‌ ಮರಗಳು, ಕ್ಯಾರಲ್‌ ನೆನಪಾಗುವುದು ಸಹಜ.ಜೊತೆಗೆ ಈ ಹಬ್ಬ ಎಂದರೆ ಬಗೆಬಗೆಯ ಕೇಕ್‌ ಸವಿಯುವ ಸದವಕಾಶವೂ ದಕ್ಕುತ್ತದೆ.

ಅಂದಹಾಗೆ ಕ್ರಿಸ್‌ಮಸ್‌ ಕಾಲದಲ್ಲಿ ಕೇಕ್‌ ಜನಪ್ರಿಯಗೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಅನೇಕರಿಗಿರುತ್ತದೆ. ಆಂಗ್ಲರ ಸಂಪ್ರದಾಯದಲ್ಲಿ ಕ್ರಿಸ್‌ಮಸ್‌ ಕೇಕ್‌ ಎನ್ನುವ ಪರಿಕಲ್ಪನೆ ದಟ್ಟವಾಯಿತು. ಕ್ರಿಸ್‌ಮಸ್‌ನ ಮುಂಚಿನ ದಿನ ಉಪವಾಸ ಮಾಡುವ ಪದ್ಧತಿ ಕ್ರಿಶ್ಚಿಯನ್‌ರಲ್ಲಿದೆ. ಹೀಗೆ ದಿನವಿಡಿಯ ಉಪವಾಸದಿಂದ ಬಳಲಿದ ಹೊಟ್ಟೆಗೆ ಗಂಜಿ (ಪೊರಿಡ್ಜ್‌) ಸೇವನೆಯ ಸಾಂತ್ವನ ನೀಡುತ್ತಾರೆ.

ಇದಕ್ಕೆ ಒಣಹಣ್ಣು,  ಮಸಾಲೆ, ಜೇನುತುಪ್ಪಗಳನ್ನು ಸೇರಿಸಿ ಸೇವಿಸುತ್ತಿದ್ದರು. ಕ್ರಮೇಣ ಈ ಆಹಾರ ಪದ್ಧತಿ ಕ್ರಿಸ್‌ಮಸ್‌ ಪುಡ್ಡಿಂಗ್‌ ರೂಪ ತಾಳಿತು. 16ನೇ ಶತಮಾನದ ಸುಮಾರಿಗೆ  ಈ ಸಾಮಾನ್ಯ ಆಹಾರ ಪದ್ಧತಿ ಬಿಟ್ಟು ತುಪ್ಪ, ಮೊಟ್ಟೆ, ಗೋಧಿ ಹಿಟ್ಟುಗಳನ್ನು ಸೇರಿಸಿ ವಿಶೇಷ ಖಾದ್ಯ ತಯಾರಿಸಲಾರಂಭಿಸಿದರು.

ಇದು ನಿಧಾನವಾಗಿ ಪ್ಲಮ್‌ ಕೇಕ್‌ ರೂಪ ತಾಳೀತು. ಶ್ರೀಮಂತ ಮನೆತನದವರು ಓವನ್‌ನ ಸಹಾಯದಿಂದ ಬದಾಮಿ, ಆಲ್ಮಂಡ್‌ ಶುಗರ್‌ ಪೇಸ್ಟ್‌, ಈಸ್ಟರ್‌ಗಳನ್ನು ಸೇರಿಸಿದ ಫ್ರುಟ್‌ ಕೇಕ್‌ ಮಾಡಿಕೊಂಡರು. ನಂತರ ಕ್ರಿಸ್‌ಮಸ್‌ಗೆ ಕೇಕ್‌ ಮಾಡುವುದು ರೂಢಿಯಾಯಿತು.

ಒಣಹಣ್ಣುಗಳಿಂದ ರೂಪುಗೊಳ್ಳುತ್ತಿದ್ದ ಕೇಕ್‌ ನಿಧಾನವಾಗಿ ಆಕಾರ, ಬಣ್ಣ, ಗಾತ್ರದಲ್ಲಿಯೂ ವೈವಿಧ್ಯ ಹೊಂದಿತು. ತಿಳಿ/ಗಾಢ ಬಣ್ಣ, ತೇವ, ಒಣಗಿದ, ಭಾರದ, ಸ್ಪಾಂಜಿ, ಹುಳಿ ಹೀಗೆ ವಿಭಿನ್ನ ರೂಪು ಪಡೆಯಿತು.

ಕೇಕ್‌ ಥೀಮ್‌
ಕಲಾವಿದನ ಸೃಜನ ಶೀಲತೆ ಹಾಗೂ ಜನರ ಅಭಿರುಚಿಗೆ ತಕ್ಕಂತೆ ಸಾವಿರಾರು ಬಗೆಯಲ್ಲಿ ಕೇಕ್‌ ವಿನ್ಯಾಸ ಮಾಡಬಹುದು. ಪ್ರತಿ ಕೇಕ್‌ ನಿರ್ಮಾಣದಲ್ಲೂ ಮೊದಲೇ ಥೀಂ ನಿರ್ಧರಿಸಿಕೊಳ್ಳಬೇಕು ಎನ್ನುವುದು ತಜ್ಞರ ಸಲಹೆ. ಅಂದಹಾಗೆ ಕ್ರಿಸ್‌ಮಸ್‌ ಸಂದರ್ಭದಲ್ಲಿಯೂ ಬಗೆಬಗೆ ಥೀಂ ಉಳ್ಳ ಕೇಕ್‌ ಮಾಡಬಹುದು. ಅವುಗಳಲ್ಲಿ ಕೆಲವು ಇಲ್ಲಿದೆ.

ಸಾಂತಾಕ್ಲಾಸ್‌, ಕ್ರಿಸ್‌ಮಸ್‌ ಟ್ರೀ, ಗೋದಲಿ, ಮನೆ, ಹೂವು, ಉಡುಗೊರೆಗಳು, ಆಚರಣೆಗಳು ಹೀಗೆ ವಿನ್ಯಾಸಗಳಿಗೆ ಕೊನೆಮೊದಲಿಲ್ಲ. ಕ್ರಿಸ್‌ಮಸ್‌ ಕಪ್‌ ಕೇಕ್‌, ಸಾಂತಾ ರೆಸ್ಟಿಂಗ್‌ ಕೇಕ್‌, ಕೇಕ್‌ ವಿತ್‌ ಸ್ಯಾಟಿನ್‌ ಅಂಡ್‌ ಫಾಂಡಂಟ್‌ ರಿಬ್ಬನ್‌, ಸಾಂತಾ ಅಂಡ್‌ ವೈಫ್‌, ವಿಂಟರ್‌ ಲೀವ್ಸ್‌ ಕೇಕ್‌, ಸ್ನೋಮ್ಯಾನ್‌ ಕ್ರಿಸ್‌ಮಸ್‌ ಕೇಕ್‌,

ಬಗೆಬಗೆಯ ಸಾಂತಾ ಕ್ರಿಸ್‌ಮಸ್‌ ಕೇಕ್‌, ಸ್ಲೆಡ್ಜ್‌ ವಿತ್‌ ಸ್ನೋ, ಕ್ರಿಸ್‌ಮಸ್‌ ವೆಡಿಂಗ್‌ ಕೇಕ್‌, ಹಿಮಸಾರಂಗ ಕೇಕ್‌, ಪೆಂಗ್ವಿನ್‌ ಹಾಗೂ ಜಿಂಜರ್‌ ಬ್ರೆಡ್‌, ಸ್ಟ್ರಾಬೆರಿ ಅಂಡ್‌ ಕ್ರೀಂ ಕೇಕ್‌ ವಿತ್‌ ಸ್ಮೈಲೀಸ್‌, ಕ್ಯಾಂಡಲ್‌, ಪಾರ್ಟಿ, ಕಾಡು, ಸ್ಟಾರ್‌, ಪಯಣಕ್ಕೆ ಹೊರಟಿರುವ ಚಿತ್ರ ಹೀಗೆ ಮಕ್ಕಳಿಗೆ ಹಾಗೂ ಮನೆಮಂದಿಗೆ ಇಷ್ಟವಾಗುವ ತರಹೇವಾರಿ ವಿಷಯಗಳನ್ನಿಟ್ಟುಕೊಂಡು ಕ್ರಿಸ್‌ಮಸ್‌ ಕೇಕ್‌ ತಯಾರಿಸುವುದು ಇಂದಿನ ಟ್ರೆಂಡ್‌.

ಬಗೆಬಗೆ ಕೇಕ್‌
ಪ್ಲಮ್‌ ಕೇಕ್‌, ಸ್ಟೊಲೆನ್‌ ಕೇಕ್‌, ಚಾರ್ಬೆಲಿ, ಸ್ಪೆಕ್ಯುಲೂಸ್‌, ವೆನಿಲಾ ಕಿಪ್‌ಫೆರ್ಲ್‌, ಬಸ್ಲೆ ರ್‌ ಬ್ರುನ್ಸ್ಲಿ, ಸ್ಪಿಟ್ಸ್‌ಬುಬೆನ್‌, ಯೂಲೆ ಲಾಗ್ಸ್‌, ಮಿನ್ಸ್‌ ಪೀಸ್‌, ಕ್ಯಾಡಿಂಡ್‌ ಸ್ಟೋಲ ನ್‌ ಬ್ರೆಡ್‌, ಜಿಂಜರ್‌ ಹೌಸ್‌, ಸ್ಟೀಮ್ಡ್‌ ಪ್ಲಮ್‌ ಪಡ್ಡಿಂಗ್‌, ಆ್ಯಪಲ್‌ ಕ್ರೀಂ ಕೇಕ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT